ಹಾಸನ: ವಿದ್ಯಾರ್ಥಿಗಳು ಜೀವನ ದಲ್ಲಿ ಪ್ರಶ್ನೆ ಮಾಡುವಂತಹ ಮನೋ ಭಾವ ಬೆಳೆಸಿಕೊಳ್ಳಬೇಕು ಎಂದು ಹೇಮ ಗಂಗೋತ್ರಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕನ್ನಡ ವಿಭಾಗದ ಮುಖ್ಯಸ್ಥ ಮತ್ತು ಸಂಯೋಜಕ ಡಾ.ಪುಟ್ಟಸ್ವಾಮಿ ಹೇಳಿದರು.
ಸರ್ಕಾರಿ ಗೃಹ ವಿe್ಞÁನ ಕಾಲೇಜಿನ ಕನ್ನಡ ವಿಭಾಗ ಮತ್ತು ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು, ಜಾಣ-ಜಾಣೆಯರ ಬಳಗದ ಸಂಯುಕ್ತಾಶ್ರಯದಲ್ಲಿ ನಡೆದ `ಕನ್ನಡ-ಕನ್ನಡಿಗ-ಕರ್ನಾಟಕ’ ರಸಪ್ರಶ್ನೆ ಸ್ಪರ್ಧೆ ಯನ್ನು ಉದ್ಘಾಟಿಸಿ ಮಾತನಾಡಿದರು.
ಜಾಗತೀಕರಣ, ಉದಾರೀಕರಣ ನೀತಿ ಯಿಂದಾಗಿ ಪ್ರಸ್ತುತ ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧೆಗಳು ಹೆಚ್ಚಾಗಿದೆ. ಇದಕ್ಕೆ ಪೂರಕ ವಾಗಿ ವಿದ್ಯಾರ್ಥಿಗಳು ತಯಾರಿ ನಡೆಸಬೇಕಾ ದಂತಹ ಅವಶ್ಯಕತೆ ಇದೆ ಎಂದರು.
ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತ ವಾಗದೇ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗ ವಹಿಸುವ ಮೂಲಕ ತಮ್ಮ e್ಞÁನಾರ್ಜನೆ ಯನ್ನು ವೃದ್ಧಿಸಿಕೊಳ್ಳಬೇಕು. ಪ್ರತಿನಿತ್ಯ ದಿನ ಪತ್ರಿಕೆಗಳು, ನಿಯತಕಾಲಿಕೆಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುವ ಮೂಲಕ ಸಾಮಾನ್ಯ e್ಞÁನವನ್ನು ವೃದ್ಧಿಸಿಕೊಳ್ಳಬೇಕು. ಅದನ್ನು ಬಿಟ್ಟು ಟಿವಿಗಳಲ್ಲಿ ಧಾರಾವಾಹಿ ಗಳನ್ನು ನೋಡಿಕೊಂಡು ಸಮಯ ವ್ಯರ್ಥ ಮಾಡಬಾರದು ಎಂದು ಸಲಹೆ ನೀಡಿದರು.
ನಾವು ಸಂಪಾದಿಸುವಂತಹ ಹಣ, ಆಸ್ತಿಗಳನ್ನು ಕದಿಯಬಹುದು, ಆದರೆ ನಾವು ಸಂಪಾದಿಸಿದಂತಹ e್ಞÁನವನ್ನು ಕದಿಯಲು ಯಾರಿಂದಲೂ ಸಾಧ್ಯವಿಲ್ಲ. ಹೀಗಾಗಿ e್ಞÁನಾರ್ಜನೆಗೆ ಎಲ್ಲರೂ ಆದ್ಯತೆ ನೀಡಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಕೆ.ಟಿ.ಕೃಷ್ಣೇ ಗೌಡ ಮಾತನಾಡಿ, ವಿದ್ಯಾರ್ಥಿಗಳು ಯಾವುದೇ ವಿಚಾರವನ್ನು ಅರಿಯ ಬೇಕಾದರೇ ಅದರ ಆಳವಾದ ಅಧ್ಯಯ ನದ ಅವಶ್ಯಕತೆ ಇದೆ. ಆದರೆ, ವಿದ್ಯಾರ್ಥಿ ಗಳಲ್ಲಿ ಓದುವ ಅಭಿರುಚಿಯೇ ಕಡಿಮೆ ಯಾಗುತ್ತಿದೆ. ಇದರಿಂದ ವಿಚಾರ ಮಂಥನ ಸಾಧ್ಯವಿಲ್ಲ ಎಂದರು.
ವಿದ್ಯಾರ್ಥಿಗಳು ಸಾಹಿತ್ಯದ ಪ್ರಕಾರ ಗಳನ್ನು ಅರಿತು ಅದರ ರುಚಿಯನ್ನು ಸವಿ ದಾಗ ಮಾತ್ರ ಜೀವನ ಸಾರ್ಥಕಪಡಿಸಿ ಕೊಳ್ಳಲು ಸಹಕಾರಿಯಾಗಲಿದೆ ಎಂದ ಅವರು, ಪ್ರಸ್ತುತ ಹಬ್ಬ-ಹರಿದಿನ, ಮದುವೆ, ಸಮಾರಂಭಗಳಿಗೆ ತಲೆಕೆಡಿಸಿಕೊಳ್ಳುವಷ್ಟು ನಾವು e್ಞÁನಾರ್ಜನೆಗೆ ತಲೆಕೆಡಿಸಿಕೊಳ್ಳುವ ಸ್ಥಿತಿಯಲ್ಲಿ ಇಲ್ಲದಂತಾಗಿರುವುದು ಬೇಸರದ ಸಂಗತಿಯಾಗಿದೆ ಎಂದರು.
ಪ್ರತಿನಿತ್ಯ ಪತ್ರಿಕೆಗಳನ್ನು ಓದುವ ಹವ್ಯಾಸ ವನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಮೈಗೂಡಿಸಿಕೊಳ್ಳಬೇಕು. ಇದರಿಂದ ಸಾಕಷ್ಟು e್ಞÁನ ವೃದ್ಧಿಯಾಗಲಿದೆ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಎನ್.ಸಿ.ರವಿ ಪ್ರಾಸ್ತಾ ವಿಕವಾಗಿ ಮಾತನಾಡಿದರು. ಪ್ರಾಧ್ಯಾಪಕ ರಾದ ವಿಜಯಾ ಯು.ಪಾಟೀಲ್, ಡಾ. ಎನ್.ಸುರೇಖಾ, ಎ.ಎಂ.ಸತೀಶ್ ಚಂದ್ರ, ಪುಟ್ಟರತ್ನಮ್ಮ ಮತ್ತು ಎಚ್.ಎಂ.ಶಿವ ಮೂರ್ತಿ, ಕನ್ನಡ ವಿಭಾಗದ ಉಪನ್ಯಾಸಕ ರಾದ ಎಚ್.ಎಂ.ಮೋಹನ ಕುಮಾರಿ, ಎಂ.ಎಂ. ಧನಲಕ್ಷ್ಮಿ, ಪಿ.ಡಿ.ಸುಮಿತ್ರ ಹಾಜರಿದ್ದರು.