ಮೈಸೂರು: ತೋಟಗಾರಿಕೆ ಇಲಾಖೆ ವತಿಯಿಂದ 2019-20ನೇ ಸಾಲಿಗೆ ಕೃಷಿ ಭಾಗ್ಯ ಯೋಜನೆಯನ್ನು ಅನುಷ್ಠಾನ ಗೊಳಿಸಲಾಗುತ್ತಿದ್ದು, ಸಂರಕ್ಷಿತ ಘಟಕ ಸ್ಥಾಪನೆ ಕಾರ್ಯಕ್ರಮದಡಿ ಪಾಲಿಹೌಸ್ ಸಹಿತ ಪ್ಯಾಕೇಜ್‍ನಲ್ಲಿ ಪಾಲಿಹೌಸ್ ಘಟಕದ ಜೊತೆಗೆ ಕೃಷಿಹೊಂಡ ನಿರ್ಮಾಣ, ಡೀಸೆಲ್ ಪಂಪ್ ಸೆಟ್ ಅಳವಡಿಕೆ ಹಾಗೂ ಬೆಳೆ ಬೇಸಾಯಕ್ಕೆ ಸಹಾಯ ಧನವನ್ನು ನಿರ್ದೇಶನಾಲಯದ ಮಾರ್ಗಸೂಚಿಯ ಗರಿಷ್ಟ ಮೊತ್ತಕ್ಕೆ ಅನುಗುಣವಾಗಿ ನೀಡಲು ಅರ್ಜಿ ಆಹ್ವಾನಿಸಿದೆ. ರೈತರು ಸಂಬಂಧಿಸಿದ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಅಥವಾ ಹೋಬಳಿಯ ಸಹಾಯಕ ತೋಟಗಾರಿಕೆ ಅಧಿಕಾರಿ ಅವರನ್ನು ಸಂಪರ್ಕಿಸಿ ಅರ್ಜಿ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಜೂ.10ರೊಳಗಾಗಿ ಸಲ್ಲಿಸಲು ತಿಳಿಸಿದೆ. ಮಾಹಿತಿಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ), ಮೈಸೂರು ದೂ.ಸಂಖ್ಯೆ 0821-2430450, ಹೆಚ್.ಡಿ.ಕೋಟೆ 08228-255262, ಹುಣಸೂರು 08222-252447, ಕೆ.ಆರ್.ನಗರ 08223-262792, ನಂಜನಗೂಡು 08221-226201, ಪಿರಿಯಾಪಟ್ಟಣ 08223-273535 ಮತ್ತು ಟಿ.ನರಸೀಪುರ 08227-260086 ಸಂಪರ್ಕಿಸಬಹುದು ಎಂದು ಜಿಲ್ಲಾ ತೋಟಗಾರಿಕಾ ಉಪ ನಿರ್ದೇಶಕರು ತಿಳಿಸಿದ್ದಾರೆ.