ಗುರುವಿನ ಮಾರ್ಗದರ್ಶನದಲ್ಲಿ ಗುರಿ ಸಾಧಿಸಿ

ಮೈಸೂರು, ಜ.4(ಪಿಎಂ)- ವಿದ್ಯಾರ್ಥಿ ಗಳು ಗುರುವಿನ ಮಾರ್ಗದರ್ಶನದಲ್ಲಿ ಗುರಿ ಸಾಧಿಸುವ ಛಲ ಬೆಳೆಸಿಕೊಳ್ಳಬೇಕು ಎಂದು ರೋಟರಿ ಐವರಿ ಸಿಟಿ ಅಧ್ಯಕ್ಷ ಎಸ್.ಬಾಲಚಂದರ್ ತಿಳಿಸಿದರು. ಮೈಸೂರಿನ ಲಕ್ಷ್ಮೀಪುರಂ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ `ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ : ಒಂದು ನೆನಪು’ ಮತ್ತು ಕಾಲೇಜಿನ ಸಾಂಸ್ಕøತಿಕ ಮತ್ತು ಕ್ರೀಡಾ ಸಂಘದ ಸಮಾರೋಪ ಸಮಾರಂಭದ ಅತಿಥಿಯಾಗಿ ಅವರು ಮಾತನಾಡಿದರು. ಛಲವಿದ್ದಾಗ ಉತ್ಸಾಹದಿಂದ ಓದಿ ಬದು ಕನ್ನು ಕಟ್ಟಿಕೊಳ್ಳಬಹುದು. ಉತ್ಸಾಹವಿಲ್ಲ ದಿದ್ದರೆ ಜೀವನ ವ್ಯರ್ಥ. ಬದುಕಿನಲ್ಲಿ ಏನಾದರೊಂದು ಸಾಧಿಸಬೇಕಾದರೆ ಗುರಿ ಇರಬೇಕು. ಭಯವನ್ನು ಬಿಟ್ಟು ಗುರುವಿನ ಮಾರ್ಗದರ್ಶನದಲ್ಲಿ ಗುರಿ ಸಾಧಿಸಬೇಕು ಎಂದು ಸಲಹೆ ನೀಡಿದರು.

ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಆದರ್ಶ ತತ್ವಗಳನ್ನು ವಿದ್ಯಾರ್ಥಿ ಗಳು ರೂಢಿಸಿಕೊಳ್ಳಬೇಕು. ಅಂಬೇಡ್ಕರ್ ರವರ ಜೀವನ ಚರಿತ್ರೆಯನ್ನು ವಿದ್ಯಾರ್ಥಿ ಗಳು ತಪ್ಪದೇ ಓದಬೇಕು. ಶಿಕ್ಷಣವು ವಿದ್ಯೆ ಮತ್ತು ವಿವೇಕವನ್ನು ಕಲಿಸುವ ಸಂಪರ್ಕ ಸಾಧನ. ಶಿಕ್ಷಣವನ್ನು ಕಲಿಯಬೇಕಾದರೆ ಏಕಾಗ್ರತೆ ಮತ್ತು ಆಸಕ್ತಿ ಬೆಳೆಸಿಕೊಳ್ಳ ಬೇಕೆಂದು ಕಿವಿಮಾತು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಎನ್.ಎಸ್. ಪಶುಪತಿ ಮಾತನಾಡಿ, ಇಂದಿನ ವಿದ್ಯಾರ್ಥಿ ಗಳು ಪಠ್ಯ ಪುಸ್ತಕದ ಜೊತೆಗೆ ಸಹಪಠ್ಯ ಚಟುವಟಿಕೆಗಳಾದ ಕ್ರೀಡೆ, ಸಂಗೀತ, ನೃತ್ಯ, ನಾಟಕ, ಯೋಗ ಮೊದಲಾದವುಗಳಲ್ಲಿ ತೊಡ ಗಿಸಿಕೊಳ್ಳಬೇಕು ಎಂದು ಸಲಹೆ ನೀಡಿ ದರು. ಕಾಲೇಜು ಅಭಿವೃದ್ಧಿ ಸಮಿತಿ ಉಪಾ ಧ್ಯಕ್ಷ ಓಂ ಶ್ರೀನಿವಾಸ್, ಪಾಲಿಕೆ ಸದಸ್ಯೆ ಎನ್. ಸೌಮ್ಯ, ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಎಸ್.ಎಂ.ತುಳಸೀದಾಸ್, ಉಪ ನ್ಯಾಸಕರಾದ ಎಂ.ಸಿ.ಸುಜಾತಾ, ಜಯಾನಂದ ಪ್ರಸಾದ್, ನಂದೀಶ್ ಹಾಜರಿದ್ದರು.