ಅಖಿಲ ಕರ್ನಾಟಕ ಹಳೆಗನ್ನಡ ಸಾಹಿತ್ಯ ಸಮ್ಮೇಳನ ಪೂರ್ವಭಾವಿ ಸಭೆ ಜೈನಕಾಶಿಯಲ್ಲಿ ಜೂ.24ರಿಂದ ಮೂರು ದಿನ ಸಮ್ಮೇಳನ

ಹಾಸನ: ಶ್ರವಣಬೆಳಗೊಳದಲ್ಲಿ ಜೂ. 24ರಿಂದ 26ರವರೆಗೆ ನಡೆಯ ಲಿರುವ ಅಖಿಲ ಭಾರತ ಹಳೆಗನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸುವಂತೆ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಕೋರಿದರು.ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಕರೆಯಲಾಗಿದ್ದ ಸಮ್ಮೇಳನದ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತ ನಾಡಿದ ಅವರು, ಶ್ರವಣಬೆಳಗೊಳದಲ್ಲಿ 3 ದಿನಗಳು ನಡೆಯಲಿರುವ ಹಳೆಗನ್ನಡ ಸಾಹಿತ್ಯ ಸಮ್ಮೇಳನಕ್ಕೆ ರಾಜ್ಯ ಹಾಗೂ ಹೊರ ರಾಜ್ಯದ ನೂರಾರು ವಿದ್ವಾಂಸರು ಆಗಮಿಸುತ್ತಾರೆ. ಕಾರ್ಯಕ್ರಮದಲ್ಲಿ ಯಾವುದೇ ತೊಂದರೆಯಾಗದಂತೆ ಎಚ್ಚರ ವಹಿಸಬೇಕು. ಹಳೆಗನ್ನಡದ ಬಗ್ಗೆ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು, ಉಪನ್ಯಾಸಕ ರಿಗೆ ಮಾತ್ರ ಆಹ್ವಾನ ನೀಡ ಲಾಗುವುದು. ಸಮ್ಮೇಳನದಲ್ಲಿ 2 ಸಾವಿರ ಜನ ಸೇರುವ ನಿರೀಕ್ಷೆಯಿದೆ. ಎಲ್ಲರಿಗೂ ಊಟೋಪಾಚಾರ ವ್ಯವಸ್ಥೆವನ್ನು ಜೈನ ಮಠ ಮಾಡಲಿದೆ. ವಸತಿ ವ್ಯವಸ್ಥೆ ಕಸಾಪ ಮಾಡಲಿದೆ. ಈಗಾಗಲೇ ಹೋಟೆಲ್‍ಗಳಲ್ಲಿ ಕೋಣೆಗಳನ್ನು ಕಾಯ್ದಿರಿಸಲಾಗಿದೆ ಎಂದರು.

ಜೂ.24ರಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಸಮ್ಮೇಳನಕ್ಕೆ ಚಾಲನೆ ನೀಡುವರು. ಶ್ರವಣಬೆಳಗೊಳ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಸಾನಿಧ್ಯ ವಹಿಸುವರು. ಕನ್ನಡದ ಮೇರು ಸಾಹಿತಿ ಗಳಾದ ಹಂಪನಾ, ಬರಗೂರು ರಾಮ ಚಂದ್ರಪ್ಪ, ಸಿಪಿಕೆ, ಚಂಪಾ, ಸಿದ್ದಲಿಂಗಯ್ಯ, ಪುರುಷೋತ್ತಮ ಬಿಳಿಮಲೆ ಸೇರಿದಂತೆ ಅನೇಕರು ಭಾಗವಹಿಸುವರು ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ಕನ್ನಡದ ವಿಧಾನಸೌಧ ಆಗಬೇಕೆಂದು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಆಶಿಸಿದ್ದಾರೆ. ಕನ್ನಡ ಸಾಹಿತ್ಯ, ಸಂಸ್ಕøತಿ, ಆಚಾರ ವಿಚಾರಗಳು ಭವಿಷ್ಯದ ಪೀಳಿಗೆಗೆ ಪರಿಚಯವಾಗಬೇ ಕೆಂದರೆ ಕಸಾಪ ಪ್ರಯತ್ನಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ಕೋರಿದರಲ್ಲದೆ, ತಾಲೂಕು ಹಾಗೂ ಗ್ರಾಮ ಕೇಂದ್ರಗಳಲ್ಲಿ ಕನ್ನಡ ಭವನ ಕಟ್ಟಲು ಸಾಹಿತ್ಯ ಪರಿಷತ್ತು ಅಗತ್ಯ ಅನುದಾನ ನೀಡಲು ಸಿದ್ಧವಿದೆ. ಆದರೂ ಪರಿಷತ್‍ನ ಯಾವ ಪದಾಧಿಕಾರಿ ಗಳು ಇದುವರೆಗೆ ಬೇಡಿಕೆ ಸಲ್ಲಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯಿತಿ ಅಥವಾ ಸ್ಥಳೀಯ ಸಂಸ್ಥೆಗಳಿಂದ ಭೂಮಿ ನೀಡಿದರೆ ಭವನ ಕಟ್ಟಡಕ್ಕೆ 20 ಲಕ್ಷ ರೂ. ನೀಡಲಾಗುತ್ತದೆ. ಹಾಸನ ಜಿಲ್ಲೆಯಿಂದ ಇದುವರೆಗೆ ಒಂದು ಅರ್ಜಿಯೂ ಬಂದಿಲ್ಲ. 30 ಜಿಲ್ಲೆ ಸೇರಿ ಒಟ್ಟು 16 ಅರ್ಜಿಗಳು ಬಂದಿವೆ. ಮಾಜಿ ಸಚಿವ ಹೆಚ್.ಕೆ.ಪಾಟೀಲ್ 100 ಕೋಟಿ ರೂ. ಅನುದಾನ ನೀಡುವುದಾಗಿ ಭರವಸೆ ನೀಡಿದ್ದರು. ಕನ್ನಡ ಉಳಿಯಬೇಕು ಹಾಗೂ ಬೆಳೆಯಬೇಕೆಂದರೆ ಕಸಾಪ ಪದಾಧಿಕಾರಿ ಗಳು ಕಾರ್ಯ ಚಟುವಟಿಕೆಗಳಲ್ಲಿ ಸಂಪೂರ್ಣ ವಾಗಿ ತೊಡಗಿಕೊಳ್ಳಬೇಕು ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹೆಚ್.ಬಿ.ಮದನ್‍ಗೌಡ ಮಾತನಾಡಿ, ಪ್ರಥಮವಾಗಿ ಶ್ರವಣ ಬೆಳಗೊಳದಲ್ಲಿ ಅಖಿಲ ಭಾರತ ಹಳೆಗನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ. ಇಲ್ಲಿಗೆ ಬರುವವರಿಗೆ ವಸತಿ, ಊಟದ ವ್ಯವಸ್ಥೆಯಲ್ಲಿ ಕೊರತೆಯಾಗದಂತೆ ನೋಡಿ ಕೊಳ್ಳುವ ಜವಾಬ್ದಾರಿ ಕಸಾಪದ ಎಲ್ಲಾ ಪದಾಧಿಕಾರಿಗಳು ಮಾಡಬೇಕು ಎಂದು ಸಲಹೆ ನೀಡಿದರಲ್ಲದೆ, ಮೊದಲು ಮೆರ ವಣ ಗೆ ನಡೆದು ನಂತರ ಕಾರ್ಯಕ್ರಮ ಜರುಗಲಿದೆ ಎಂದು ಮಾಹಿತಿ ನೀಡಿದರು.

ಪತ್ರಕರ್ತ ಪದ್ಮರಾಜ ದಂಡಾವತಿ ಮಾತನಾಡಿ, ಈ ಸಮ್ಮೇಳನ ಜಿಲ್ಲೆಗೆ ಮತ್ತೆ ಒದಗಿ ಬಂದ ಸೌಭಾಗ್ಯ. ಪಂಪ, ರನ್ನ, ಜನ್ನ, ಪೆÇನ್ನ ಸೃಷ್ಟಿಸಿದ ಕಾವ್ಯಗಳಿಗೆ ಮರು ಜೀವ ನೀಡುವ ಕೆಲಸ ಕಸಾಪದಿಂದ ನಡೆಯುತ್ತಿದೆ. ಹಳೆಗನ್ನಡ ಓದುವುದನ್ನು ಎಲ್ಲರೂ ಮರೆತ್ತಿದ್ದಾರೆ. ಸಮ್ಮೇಳನ ಆಯೋ ಜನೆಗೆ ಜೈನಮಠ ಅವಕಾಶ ಮಾಡಿ ಕೊಟ್ಟಿರುವುದು ಸಮಯೋಚಿತ ಎಂದರು.
ಸಭೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ರವಿನಾಕಲ ಗೂಡು, ಮಾಜಿ ಕಸಾಪ ಅಧ್ಯಕ್ಷ ಬಿ.ಎನ್. ರಾಮಸ್ವಾಮಿ, ತಾಲೂಕು ಅಧ್ಯಕ್ಷ ಮಹಾಂತಪ್ಪ, ಜಾವಗಲ್ ಪ್ರಸನ್ನ ಹಾಗೂ ಜಿಲ್ಲೆಯ ವಿವಿಧ ತಾಲೂಕಿನ ಅಧ್ಯಕ್ಷರು ಪದಾಧಿಕಾರಿಗಳಿದ್ದರು.