ಡಾ.ಅಂಬೇಡ್ಕರ್ ಕೊಡುಗೆಯಾದ ಸಂವಿಧಾನದಿಂದ ಸರ್ವರಿಗೂ ಸಮಾನ ಅವಕಾಶ ಲಭಿಸಿದೆ

ಮೈಸೂರು,ನ.28(ಎಂಟಿವೈ)- ಸಂವಿ ಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕೊಡುಗೆಯಾದ ಸಂವಿಧಾನ ದೇಶದ ಸಮಸ್ತ ಜನರಿಗೆ ಸಮಾನ ಅವಕಾಶ ದೊರಕಿಸಿಕೊಟ್ಟಿದೆ ಎಂದು ಶಾಸಕ ಎಲ್. ನಾಗೇಂದ್ರ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರಿನ ಒಂಟಿಕೊಪ್ಪಲಿನ ಸೀರ್ವಿ ಸಮಾಜದ ಸಭಾಂಗಣದಲ್ಲಿ ನೆಹರು ಯುವ ಕೇಂದ್ರ ಹಾಗೂ ಮಂಚೇಗೌಡನ ಕೊಪ್ಪಲಿನ ಕೀರ್ತಿ ಯುವತಿ ಮತ್ತು ಮಹಿಳಾ ಮಂಡಳಿ ಸಹಯೋಗದಲ್ಲಿ ಸಂವಿಧಾನ ದಿನ ಹಾಗೂ ಕೋಮು ಏಕತಾ ಸಪ್ತಾಹವನ್ನು ಉದ್ಘಾಟಿಸಿ ಮಾತ ನಾಡಿದ ಅವರು, ವಿಶ್ವದಲ್ಲಿಯೇ ಭಾರತ ತನ್ನದೇ ಆದ ಸ್ಥಾನಮಾನ ಹೊಂದಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯ ದೊಡ್ಡ ರಾಷ್ಟ್ರ ಎಂಬ ಹೆಗ್ಗಳಿಕೆ ನಮ್ಮ ದೇಶಕ್ಕಿದೆ. ದೇಶದ 137 ಕೋಟಿ ಜನರಿಗೂ ಸಮಾನ ಅವಕಾಶ ನೀಡಲಾಗಿದೆ. ಇದು ಅಂಬೇ ಡ್ಕರ್ ಅವರ ಸಂವಿಧಾನದಿಂದ ಮಾತ್ರ ಸಾಧ್ಯ ವಾಗಿದೆ. ಹಲವು ರಾಷ್ಟ್ರಗಳಿಗೆ ಹೋಲಿ ಸಿದರೆ ನಮ್ಮ ಸಂವಿಧಾನ ಶ್ರೇಷ್ಠ ಸಂವಿ ಧಾನವಾಗಿದೆ. ಇದರಿಂದಾಗಿ ಅಂಬೇಡ್ಕರ್ ಸದಾ ಅಭಿನಂದನಾರ್ಹರು. ಕೇಂದ್ರ ಸರ್ಕಾರ ಸಂವಿಧಾನ ದಿನ ಆಚರಿಸುವ ಮೂಲಕ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸಂವಿ ಧಾನದ ಮಹತ್ವ ತಿಳಿಸಲು ಕ್ರಮ ಕೈಗೊಂ ಡಿದೆ. ಇದರಿಂದಲೇ ದೇಶದಲ್ಲಿ ಸಾಮರಸ್ಯ ಜೀವನ ನಡೆಸಲು ಸಾಧ್ಯವಾಗಿದೆ. ಮಹಿಳೆ ಯರಾದಿಯಾಗಿ ಎಲ್ಲಾ ವರ್ಗದ ಜನರು ಉನ್ನತ ಸ್ಥಾನಕ್ಕೇರಲು ಮುಕ್ತ ಅವಕಾಶ ವನ್ನೂ ಸಂವಿಧಾನ ನೀಡಿದೆ ಎಂದರು.

ನೆಹರು ಯುವ ಕೇಂದ್ರ ಸಮನ್ವಯಾಧಿ ಕಾರಿ ಎಸ್.ಸಿದ್ದರಾಮಯ್ಯ ಅಧ್ಯಕ್ಷತೆ ವಹಿ ಸಿದ್ದ ಕಾರ್ಯಕ್ರಮದಲ್ಲಿ ಆಯುಷ್ ಇಲಾಖೆ ಉಪನಿರ್ದೇಶಕಿ ಡಾ.ಬಿ.ಎಸ್.ಸೀತಾಲಕ್ಷ್ಮಿ ಆಯುರ್ವೇದ ಔಷಧ ಕುರಿತು ಮಾತ ನಾಡಿದರು. ಇದೇ ವೇಳೆ ಮಹಿಳಾ ಅಭಿ ವೃದ್ಧಿಗಾಗಿ ಸೇವೆ ಸಲ್ಲಿಸುತ್ತಿರುವ 10 ಮಹಿಳೆಯರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಡಾ.ಸುಧಾಕರ್ ಹೊಸಳ್ಳಿ, ಕೀರ್ತಿ ಯುವತಿ ಮತ್ತು ಮಹಿಳಾ ಮಂಡಳಿ ಅಧ್ಯಕ್ಷೆ ಮಂಜುಳಾ ರಮೇಶ್ ಮಾತನಾಡಿದರು. ಕ್ರೆಡಿಟ್-ಐ ಸಂಸ್ಥೆಯ ಎಂ.ಪಿ.ವರ್ಷ, ಪಲ್ಲವಿ ಸೇರಿದಂತೆ ಇನ್ನಿ ತರರು ಉಪಸ್ಥಿತರಿದ್ದರು.