ಮೈತ್ರಿ ಪರ ಪ್ರಚಾರ: ವರುಣಾ ಜೆಡಿಎಸ್ ಅಪಸ್ವರ

ತಿ.ನರಸೀಪುರ: ಚಾಮ ರಾಜನಗರ ಲೋಕಸಭಾ ಕ್ಷೇತ್ರದ ಬಹು ತೇಕ ವಿಧಾನಸಭಾ ಕ್ಷೇತ್ರಗಳಲ್ಲಿ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಪ್ರಚಾರ ಜೋರಾಗಿ ಸಾಗಿದ್ದರೆ, ವರುಣಾ ವಿಧಾನ ಸಭಾ ಕ್ಷೇತ್ರದಲ್ಲಿ ಮಾತ್ರ ಇನ್ನೂ ಅಸಮಾ ಧಾನದ ಹೊಗೆಯಾಡುತ್ತಿದೆ!

ಜಂಟಿ ಪ್ರಚಾರ ಬಗ್ಗೆ ಜೆಡಿಎಸ್ ಮುಖಂಡರಲ್ಲಿ ಸಹಮತ ವ್ಯಕ್ತವಾಗಿಲ್ಲ. ತಾಲೂಕಿನ ಗರ್ಗೇಶ್ವರಿಯಲ್ಲಿ ಗುರುವಾರ ತಾಪಂ ಸದಸ್ಯ ಬಿ.ಸಾಜಿದ್ ಅಹ್ಮದ್ ನಿವಾಸ ದಲ್ಲಿ ಸಭೆ ಸೇರಿದ್ದ ಜೆಡಿಎಸ್ ಸ್ಥಳೀಯ ಮುಖಂಡರು, ಕ್ಷೇತ್ರದಲ್ಲಿ ತಮ್ಮ ಅಸ್ತಿತ್ವ ಮತ್ತು ಜವಾಬ್ದಾರಿ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು. ವರುಣಾ ಕ್ಷೇತ್ರದ ಮುಖಂಡರು ಅಸಮಾಧಾನ ಹೊರಹಾಕಿದರು. ಚುನಾ ವಣೆಯಲ್ಲಿ ಮೈತ್ರಿಧರ್ಮ ಪಾಲನೆಯಾಗುತ್ತಿಲ್ಲ. ನಮಗ್ಯಾರಿಗೂ ಜವಾಬ್ದಾರಿಯನ್ನೇ ಹಂಚಿಲ್ಲ. ಯಾವ ಖಾತರಿ ಮೇಲೆ ಮತದಾರರ ಬಳಿ ಹೋಗಿ ಮೈತ್ರಿ ಅಭ್ಯರ್ಥಿ ಪರವಾಗಿ ಮತ ಕೇಳುವುದು? ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರು ಇರುವುದರಿಂದ ಸರ್ಕಾರದ ಯಾವೊಂದು ಸೌಲಭ್ಯವೂ ನಮ್ಮವರಿಗೆ ಸಿಗದಂತೆ ಶಾಸಕರ ಬೆಂಬಲಿಗರು ಅಡ್ಡಗಾಲಿ ಕ್ಕಿದ್ದಾರೆ ಎಂದು ಹಲವರು ಗಂಭೀರ ಆರೋಪ ಮಾಡಿದರು. ಜೆಡಿಎಸ್ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಎಂ.ಬಾಲಕೃಷ್ಣ ಮಾತ ನಾಡಿ, ಚಾಮರಾಜನಗರದ ಲೋಕ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಸಂಸದ ಆರ್.ಧ್ರುವನಾರಾಯಣ್ ಹಾಗೂ ವರುಣಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ.ಎಸ್. ಯತೀಂದ್ರ ಅವರು ಹಲವು ಬಾರಿ ಕರೆ ಮಾಡಿ ಬೆಂಬಲ ಕೋರಿದ್ದಾರೆ. ಮುಖಂಡರ ಸಭೆ ನಡೆಸಿ ಸಲಹೆ ಪಡೆದ ನಂತರ ಅಭ್ಯರ್ಥಿ ಮತ್ತು ಶಾಸಕರನ್ನು ನಿವಾಸಕ್ಕೆ ಆಹ್ವಾನಿಸುವೆ ಎಂದಿದ್ದೇನೆ. ಮೈತ್ರಿ ಅಭ್ಯರ್ಥಿ ಬೆಂಬಲಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಹಾಗಾಗಿ ನಿಮ್ಮಗಳ ಸಲಹೆ ಕೇಳುತ್ತಿದ್ದೇನೆ ಎಂದರು.

ಜೆಡಿಎಸ್ ಕಸಬಾ ಹೋಬಳಿ ಅಧ್ಯಕ್ಷ ನಾರಾಯಣ, ತಾ.ಪಂ ಮಾಜಿ ಸದಸ್ಯ ಯಡದೊರೆ ಪ್ರಕಾಶ್, ಮುಖಂಡರಾದ ಪ್ರಭುಸ್ವಾಮಿ, ಮರಿದೇವೇಗೌಡ, ಕೆಂಪಯ್ಯನ ಹುಂಡಿ ಅಂದಾನಿಗೌಡ, ಚನ್ನೇಗೌಡ, ಕುಮಾರ, ನವೀನ್ ಕುಮಾರ್, ಬಾಲ ಚಂದ್ರ, ವಿರೇಂದ್ರ ಕುಮಾರ್, ನವೀನ, ಇಂಡವಾಳು ಮಲ್ಲಿಕ, ಮನ್ನೇಹುಂಡಿ ಶಿವಣ್ಣ, ಕುಪ್ಯ ಗವಿಸಿದ್ದಯ್ಯ, ಹುಣಸೂರು ಚಿಕ್ಕಸ್ವಾಮಿ, ಜವರೇಗೌಡನ ಕುಮಾರ, ಮಾದೇಗೌಡನಹುಂಡಿ ಚಂದು, ತಿರುಮಕೂಡಲು ರವಿ, ಜಯರಾಂ, ಮನ್ನೇ ಹುಂಡಿ ಕುಮಾರ, ಶ್ರೀಧರ ಸೇರಿದಂತೆ ಹಲವು ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಸಭೆಯಲ್ಲಿದ್ದರು.