ಅಂಬೇಡ್ಕರ್ ಸ್ಮರಣೆ ಪ್ರತಿಯೊಬ್ಬರ ಕರ್ತವ್ಯ

ಹಾಸನ: ದೇಶದ ಎಲ್ಲಾ ಮಹಿಳೆ ಯರಿಗೆ ಮತದಾನದ ಹಕ್ಕು ಹಾಗೂ ಹಿಂದೂ ಕೋಡ್ ಬಿಲ್ ಜಾರಿಗೊಳಿಸುವ ಮೂಲಕ ಸಮಾನತೆ ಸಾರಿದ ಡಾ.ಬಿ.ಆರ್. ಅಂಬೇಡ್ಕರ್ ಅವರ ಸ್ಮರಣೆ ಪ್ರತಿಯೊಬ್ಬರ ಕರ್ತವ್ಯ ಎಂದು ಪ್ರಗತಿಪರ ಚಿಂತಕ ಕೆ.ಎಸ್.ರವಿಕುಮಾರ್ ಹೇಳಿದರು.

ತಾಲೂಕಿನ ಮೊಸಳೆ ಗ್ರಾಮದಲ್ಲಿ ಭಾನು ವಾರ ಸಂಜೆ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘ ಮತ್ತು ಡಿವೈಎಫ್‍ಐ ಘಟಕದಿಂದ ಏರ್ಪಡಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ 128ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಸ್ಪøಶ್ಯತೆಯ ನೋವು ಅನುಭವಿಸಿದ ಅಂಬೇಡ್ಕರ್ ಅದನ್ನು ಕೊನೆಗಾಣಿಸಿ, ಮಾನವೀಯ ಸಮಾಜ ನಿರ್ಮಾಣಕ್ಕಾಗಿ ಅವಿರತ ಹೋರಾಟ ನಡೆಸಿದರು. ಅಂತೆಯೆ, ಸಮಾನತೆಯ ಆಶಯ ಮೈಗೂಡಿಸಿಕೊಂಡು ಹೋರಾಟ ಮುಂದುವರಿಸಬೇಕು ಎಂದರು.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಎಚ್.ಆರ್.ನವೀನ್‍ಕುಮಾರ್ ಮಾತನಾಡಿ, ಆರ್ಥಿಕ, ಸಾಮಾಜಿಕ ಅಸ ಮಾನತೆ ತೊಲಗಿಸಿ, ಸಮಾನತೆ ತರಬೇ ಕೆಂದಿದ್ದ ಅಂಬೇಡ್ಕರ್ ಅವರ ಕನಸು ಸ್ವಾತಂತ್ರ್ಯ ಬಂದು 73 ವರ್ಷ ಕಳೆದರೂ ಸಂಪೂರ್ಣವಾಗಿ ನನಸಾಗಿಲ್ಲ. ಬಡವರು ಬಡವರಾಗಿಯೇ ಮುಂದುವರಿದಿದ್ದು, ಶ್ರೀಮಂತರ ಆಸ್ತಿ ಲೆಕ್ಕವಿಲ್ಲದಷ್ಟು ಹೆಚ್ಚಾಗು ತ್ತಿರುವುದು ದೇಶದ ದುರಂತ ಎಂದರು.

ಕಾರ್ಯಕ್ರಮದಲ್ಲಿ ಡಿವೈಎಫ್‍ಐ ಜಿಲ್ಲಾ ಕಾರ್ಯದರ್ಶಿ ಎಂ.ಜಿ.ಪೃಥ್ವಿ, ದಲಿತ ಮುಖಂಡ ನಾರಾಯಣದಾಸ್, ಗ್ರಾಪಂ ಮಾಜಿ ಅಧ್ಯಕ್ಷ ಮಂಜುನಾಥ್, ನಿವೃತ್ತ ಶಿಕ್ಷಕ ಕಾಳಯ್ಯ ಮಾತನಾಡಿದರು. ತಾಪಂ ಸದಸ್ಯೆ ಶೋಭಾ, ಗ್ರಾಪಂ ಸದಸ್ಯೆ ರೂಪ, ಎಂ.ಎನ್. ಮಧು ಸೂದನ್, ಕಿರಣ್ ಕುಮಾರ್, ನವೀನ್ ಕುಮಾರ್ ಇತರರಿದ್ದರು.