ಜೀವ ವೈವಿಧ್ಯತೆ ಪರಿಚಯಿಸಿದ ಪರಿಸರ ನಡಿಗೆ

ಮೈಸೂರು,ಜು.7(ಎಂಟಿವೈ)- ಮೈಸೂರಿನ ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ಭಾನುವಾರ ವೈಲ್ಡ್ ಮೈಸೂರು ಸಂಸ್ಥೆ ಆಯೋಜಿಸಿದ್ದ ಪರಿಸರ ನಡಿಗೆಯಲ್ಲಿ ಹಲವಾರು ಪರಿಸರ ಪ್ರೇಮಿಗಳು ಪಾಲ್ಗೊಂಡು ಕೆರೆ ಪರಿಸರದಲ್ಲಿರುವ ಜೀವ ವೈವಿಧ್ಯತೆ ಬಗ್ಗೆ ಮಾಹಿತಿ ಪಡೆದರು.

ಮೈಸೂರಿನ ಪರಿಸರ ಪ್ರೇಮಿಗಳು, ವೈಲ್ಡ್ ಮೈಸೂರು ಹಾಗೂ ಸಮಾನ ಮನಸ್ಕರ ತಂಡದ ಸದಸ್ಯರು ಪರಿಸರ ನಡಿಗೆ ಹಾಗೂ ಕುಕ್ಕರಹಳ್ಳಿ ಕೆರೆ ಮತ್ತು ಅಲ್ಲಿನ ಜೀವಜಗತ್ತಿನ ಪರಿಚಯ ಕಾರ್ಯಕ್ರಮ ಪಾಲ್ಗೊಂಡಿದ್ದರು. ಕುಕ್ಕರಹಳ್ಳಿ ಮುಖ್ಯ ದ್ವಾರದಿಂದ ಆರಂಭವಾದ ¥ರಿಸರ ನಡಿಗೆಯಲ್ಲಿ ಪಾಲ್ಗೊಂಡಿದ್ದವರಿಗೆ ಪರಿ ಸರ ತಜ್ಞ ಮೋಹನ್ ಮೂಲೆಪೆಟ್ಲು ಕೆರೆ ಆವರಣದಲ್ಲಿ ಪರಿಸರ ವೈವಿಧ್ಯತೆ ಕುರಿತಂತೆ ಮಾಹಿತಿ ನೀಡಿದರು. ಕುಕ್ಕರಹಳ್ಳಿ ಅರ್ಧ ಭಾಗದವರೆಗೂ ಸಂಚರಿಸಿ ಅಲ್ಲಿನ ಜೀವ ವೈವಿಧ್ಯತೆ ಬಗ್ಗೆ ಪರಿಚಯಿಸಿದರು. ಬೈನಾಕ್ಯುಲರ್ ಹಿಡಿದು ಕೆರೆ ಪರಿಸರದಲ್ಲಿ ಕಾಣಿಸಿಕೊಂಡ ಪಕ್ಷಿಗಳನ್ನು ಗುರುತಿಸಿ, ಅವುಗಳ ವಿಶೇಷತೆಯನ್ನು ತಿಳಿದುಕೊಂಡರು.

ಮೋಹನ್ ಅವರು ಪರಿಸರ ನಡುಗೆಯಲ್ಲಿ ಕುಕ್ಕರಹಳ್ಳಿರುವ ಗಿಡ ಮರಗಳ ಹಾಗೂ ಪಕ್ಷಿಗಳ ಬಗ್ಗೆ ತಿಳಿಸಿಕೊಟ್ಟರು. ಕುಕ್ಕರಹಳ್ಳಿ ಕೆರೆಯಲ್ಲಿರುವ ಮರ-ಗಿಡಗಳ ವೈಶಿಷ್ಟ್ಯವೇನು?, ಅವುಗಳ ಆಯಸ್ಸು, ಅವುಗಳ ಮೂಲ ಹಾಗೂ ಉಪಯೋಗವನ್ನು ವಿವರಿಸಿದರು.

ಕುಕ್ಕರಹಳ್ಳಿ ಕೆರೆಗೆ ಯಾವ್ಯಾವ ಪಕ್ಷಿಗಳು ವಲಸೆ ಬರುತ್ತವೆ, ಆಹಾರ ಕ್ರಮ, ಜೀವನ ಕ್ರಮ, ಸಂತಾನೋತ್ಪತ್ತಿ, ಕುಕ್ಕರಹಳ್ಳಿ ಕೆರೆಯಲ್ಲೇ ವಾಸಿಸುವ ಪಕ್ಷಿಗಳು ಅದರ ಜೀವನ ಕ್ರಮ, ಗೂಡುಕಟ್ಟುವ ಬಗ್ಗೆಗೆ, ಅವುಗಳ ದಿನಚರಿ ಸೇರಿದಂತೆ ಮುಂತಾದ ಕೌತುಕದ ವಿಚಾರಗಳನ್ನು ತಿಳಿಸಿಕೊಟ್ಟರು. ಪಕ್ಷಿಗಳ ಧ್ವನಿ ಗ್ರಹಿಸುವ ಮೂಲಕ ಅವು ಗಳನ್ನು ಗುರುತಿಸುವುದನ್ನು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿದರು. ಪಕ್ಷಗಳನ್ನು ಅಡ್ಡ ಹೆಸರು ಗಳಿಂದ ಗುರುತಿಸುವ ಬಗ್ಗೆಯೂ ತಿಳಿದರು.

ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ಬೈನಾಕ್ಯುಲರ್ ಹಿಡಿದು ಪರಿಸರ ನಡಿಗೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು. ಪಕ್ಷಿ ವೀಕ್ಷಕರೂ ಹಾಗೂ ಛಾಯಾ ಗ್ರಾಹಕರೂ ಆಗಿರುವ ಜಿಲ್ಲಾಧಿಕಾರಿಗಳು ಸಾಮಾನ್ಯರಂತೆ ಪರಿಸರ ಪ್ರೇಮಿಗ ಳೊಂದಿಗೆ ಬೆರೆತು, ಪಕ್ಷಿಗಳನ್ನು ಗುರುತಿಸಿ ದರಲ್ಲದೆ, ತಮಗೆ ಗೊತ್ತಿರುವ ಮಾಹಿತಿ ಯನ್ನು ವಿನಿಮಯ ಮಾಡಿಕೊಂಡರು.