ಮೈಸೂರು, ಆ. 2- ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್‍ಗೆ ಬಾಲಿವುಡ್ ನಟ ಅನಿಲ್ ಕಪೂರ್ ಅವರನ್ನು ರಾಯಭಾರಿ ಯಾಗಿ ನೇಮಕ ಮಾಡಿಕೊಳ್ಳಲಾಗಿದೆ.
ಕಳೆದ 5 ವರ್ಷಗಳಿಂದ ಹಲವಾರು ಮಲಬಾರ್ ಸ್ಟೋರ್‍ಗಳ ಉದ್ಘಾಟನೆಗೆ ಆಹ್ವಾನಿಸುವ ಮೂಲಕ ಅನಿಲ್ ಕಪೂರ್ ಅವರೊಂದಿಗೆ ಒಡನಾಟ ಇಟ್ಟುಕೊಂಡಿ ದ್ದೇವೆ. ಅನಿಲ್ ಕಪೂರ್ ಜನಪ್ರಿಯತೆ ನಮ್ಮ ಬ್ರಾಂಡ್‍ಗೆ ಹೆಚ್ಚಿನ ಬಲ ತುಂಬು ವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಮಲಬಾರ್ ಗ್ರೂಪ್‍ನ ಅಧ್ಯಕ್ಷ ಎಂ.ಪಿ. ಅಹ್ಮದ್ ತಿಳಿಸಿದ್ದಾರೆ. ನಾನು ನಂಬಿಕೆ ಇಟ್ಟಿರುವ ಮಲಬಾರ್ ಬ್ರಾಂಡ್‍ಗಳನ್ನು ಶಿಫಾರಸು ಮಾಡುತ್ತೇನೆ. ಇಂತಹ ಸಂಸ್ಥೆಯ ರಾಯಭಾರಿಯಾಗುತ್ತಿರುವುದು ನನಗೆ ಹೆಮ್ಮೆ ತಂದಿದೆ ಎಂದು ಬಾಲಿವುಡ್ ನಟ ಅನಿಲ್ ಕಪೂರ್ ಹೇಳಿದ್ದಾರೆ.