ಅತ್ಯಾಚಾರ ವಿರೋಧಿ ಆಂದೋಲನಕ್ಕೆ ಚಾಲನೆ: ಡಿ. 4ರಿಂದ 16ರವರೆಗೆ ರಾಜ್ಯದ ವಿವಿಧೆಡೆ ಕಾರ್ಯಕ್ರಮ ಆಯೋಜನೆ

ಮಂಡ್ಯ:  ಮಹಿಳಾ ಹೋರಾಟ ಗೀತೆಗಳ ಗಾಯನ ಮತ್ತು ನಗಾರಿ ಬಾರಿಸುವ ಮೂಲಕ ಅತ್ಯಾಚಾರ ಮತ್ತು ಲೈಂಗಿಕ ಹಿಂಸೆ ವಿರೋಧಿ ಆಂದೋಲನಕ್ಕೆ ರೈತ ನಾಯಕಿ ಲತಾ ಶಂಕರ್ ಚಾಲನೆ ನೀಡಿದರು.

ನಗರದ ಸಂಜಯ ವೃತ್ತದಲ್ಲಿ ಭಾನು ವಾರ ಕರ್ನಾಟಕ ಜನಶಕ್ತಿ ಅಂಗ ಸಂಘ ಟನೆಯಾದ ಮಹಿಳಾ ಮುನ್ನಡೆಯಿಂದ ನಡೆದ ಕಾರ್ಯಕ್ರಮದಲ್ಲಿ ಮಹಿಳಾ ಮುನ್ನಡೆಯ ಕಾರ್ಯಕರ್ತರು ನಗಾರಿ ಬಾರಿಸಿ ಮಹಿಳೆ ಯರ ಮೇಲಿನ ದೌರ್ಜನ್ಯ, ಅತ್ಯಾಚಾರ, ಲೈಂಗಿಕ ಹಿಂಸೆಯ ವಿರುದ್ಧ ಪ್ರತಿಧ್ವನಿ ಮೊಳಗಿಸಿದರು. ರೈತ ನಾಯಕಿ ಲತಾ ಶಂಕರ್ ಮಾತನಾಡಿ, ಪ್ರತಿ ಬಾರಿ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆದಾಗಲೂ ಅಂತಃಕರಣವುಳ್ಳ ಮಾನವೀಯ ಮನಸ್ಸು ಗಳು ಒಟ್ಟಾಗಿ ಸೇರಿ ಪ್ರತಿಭಟಿಸುತ್ತಲೇ ಬಂದಿz್ದÉೀವೆ. ಆದರೆ, ಅದನ್ನು ಸಂಪೂರ್ಣ ವಾಗಿ ತೊಡೆದು ಹಾಕುವ ದಾರಿ ಇನ್ನು ನಮಗೆ ಸ್ಪಷ್ಟವಾಗಿಲ್ಲ. ಅತ್ಯಾಚಾರ ಪ್ರಕರಣ ಗಳು ನ್ಯಾಯಾಲಯದಲ್ಲಿ ಸೂಕ್ತ ಸಾಕ್ಷ್ಯಾಧಾರ ಗಳ ಕೊರತೆಯಿಂದ ಮೌಲ್ಯ ಕಳೆದುಕೊಳ್ಳು ತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇಂತಹ ಆತಂಕಕಾರಿ ಸಂದರ್ಭದಲ್ಲಿ ಪುಟ್ಟ ಮಕ್ಕಳ ಮೇಲಿನ ಅತ್ಯಾಚಾರಗಳು ಹೆಚ್ಚಾಗುತ್ತಿದ್ದು, ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರಗಳ ಭೀಕರತೆ, ಕ್ರೌರ್ಯ ಹಿಂದೆಂದೂ ಕಾಣದ ಹಂತಕ್ಕೆ ತಲುಪಿದೆ. ರಕ್ಷಿತಾ, ಶ್ರಾವ್ಯ, ನಿರ್ಣಯ, ಮೆಹಕ್, ಬಾನು, ದಾನಮ್ಮ, ಆಸಿಫಾ ಹೀಗೆ ಲೆಕ್ಕ ಹಾಕಲಾಗದಷ್ಟು ಹೆಣ್ಣು ಮಕ್ಕಳ ಹೃದಯ ವಿದ್ರಾವಕ ಕಥೆಗಳು ದೇಶವನ್ನು ದಿಗ್ಭ್ರಾಂತ ಸ್ಥಿತಿಗೆ ತಲುಪಿಸಿವೆ ಎಂದು ಕಿಡಿಕಾರಿದರು.

ಇಂದಿನ ರಾಜಕೀಯಕ್ಕೆ ಹೆಣ್ಣನ್ನು ದಾಳ ವಾಗಿ ಬಳಸಿಕೊಳ್ಳಲಾಗುತ್ತಿದೆ. ಅದಕ್ಕೆ ತಕ್ಕಂತೆ ಸಮಾಜ, ಕಾನೂನು ವ್ಯವಸ್ಥೆಗಳು ದೌರ್ಜನ್ಯ ಕ್ಕೊಳಗಾದ ಮಹಿಳೆಯರ ಪಾಲಿಗೆ ಸವಾ ಲಾಗಿ ಪರಿಣಮಿಸಿದೆ. ಇದು ಹೆಣ್ಣಿನ ಅಸ್ತಿತ್ವವನ್ನೇ ಅಲುಗಾಡಿಸಿದೆ. ಸೌಂದರ್ಯ ವರ್ಧಕಗಳ ಉದ್ಯಮ ಪ್ರಪಂಚದಲ್ಲಿ ಮಹಿಳೆಯರನ್ನು ಒಂದೆಡೆ ಗ್ರಾಹಕಿಯರನ್ನಾಗಿಸಿಕೊಂಡು ಮತ್ತೊಂದೆಡೆ ಉತ್ಪನ್ನಗಳ ಮಾರಾಟಕ್ಕೆ ಸರಕಾಗಿಸಿಕೊಂಡು ವ್ಯಾಪಾರಿ ಸಂಸ್ಕøತಿಗೆ ಅಡವಿಡಲಾಗಿದೆ. ಇದರ ಪರಿಣಾಮ ವಿಕೃತ ಮನಸ್ಸುಗಳು ಅತ್ಯಾಚಾರಿ ಮನಸ್ಥಿತಿ ಬೆಳೆಸಿಕೊ ಳ್ಳುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಈ ಕೆಟ್ಟ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿ, ನಮ್ಮ ಮಕ್ಕಳ ನಾಳೆಗಳ ರಕ್ಷಣೆಗೆ ಪಣತೊಡಲು ಮಹಿಳಾ ಮುನ್ನಡೆಯು `ಅತ್ಯಾಚಾರ ಮುಕ್ತ ಆರೋಗ್ಯಕರ ಸಮಾಜ ನಮ್ಮದಾಗಲಿ’ ಎಂಬ ಘೋಷಣೆಯೊಂದಿಗೆ ಡಿ. 4ರಿಂದ 16ರವರೆಗೆ ರಾಜ್ಯ ಹಲವು ಜಿಲ್ಲೆಗಳಲ್ಲಿ ಅತ್ಯಾಚಾರ ಮತ್ತು ಲೈಂಗಿಕ ಹಿಂಸೆ ವಿರೋಧಿ ಆಂದೋಲನ ನಡೆಯ ಲಿದೆ ಎಂದರು. ಮಹಿಳಾ ಮುನ್ನಡೆ ಸಂಘ ಟನೆಯ ಜಿಲ್ಲಾಧ್ಯಕ್ಷೆ ಪೂರ್ಣಿಮಾ, ಕಾರ್ಯ ದರ್ಶಿ ಜ್ಯೋತಿ, ಸದಸ್ಯರಾದ ಪುಷ್ಪ, ಈಶ್ವರಿ, ಅರುಣೋದಯ ಕಲಾತಂಡದ ನಾಯಕಿ ಮಂಜುಳ, ಕೌಶಲ್ಯ, ಕಮಲ, ಶೈಲಜಾ, ನಾಗೇಶ್, ಮುತ್ತುರಾಜು, ಸಿದ್ದರಾಜು ಇತರರು ಹಾಜರಿದ್ದರು.