ಜನತಾನಗರದಲ್ಲಿ ತರಕಾರಿ ವಿತರಿಸಿದ ಎಪಿಎಂಸಿ ದಲ್ಲಾಳಿ ಸಂಘ

* ಮೂರು ಗೂಡ್ಸ್ ಆಟೋ ರಿಕ್ಷಾಗಳಲ್ಲಿ ತರಕಾರಿ ತಂದು ಹಂಚಿದರು

ಮೈಸೂರು,ಮಾ.30( MTY ) – ಲಾಕ್ ಡೌನ್ ನಿಂದಾಗಿ ತತ್ತರಿಸಿದ್ದ ಮೈಸೂರಿನ ಜನತಾನಗರದ ಕೆಲ ರಸ್ತೆಗಳಲ್ಲಿ ಸೋಮವಾರ ಎಪಿಎಂಸಿ ದಲ್ಲಾಳಿ ಸಂಘದ ವತಿಯಿಂದ ಉಚಿತವಾಗಿ ನಾಲ್ಕು ಬಗೆಯ ತರಕಾರಿಯನ್ನು ವಿತರಿಸಲಾಯಿತು.

ಇಂದು ಮಧ್ಯಾಹ್ನ 2ರಿಂದ 3 ವರೆಗೆ ಜನತಾನಗರದ ಕೆಲವು ರಸ್ತೆಗಳಲ್ಲಿ ತರಕಾರಿ ವಿತರಿಸಲು ಮೂರು ಆಟೋಗಳಲ್ಲಿ ಸಿಹಿಗುಂಬಳ, ಹಲಸಂದೆ, ಟೊಮೆಟೊ, ಕ್ಯಾಬೇಜ್ ಹಾಗೂ ಇನ್ನಿತರ ತರಕಾರಿ ತಂದ ಎಪಿಎಂಸಿ ಮಾರುಕಟ್ಟೆಯ ದಲ್ಲಾಳಿಗಳು ಮನೆ ಮನೆಗೂ ಉಚಿತವಾಗಿ ವಿತರಿಸಿದರು.

ಸಿಹಿ ಕುಂಬಳಕಾಯಿ, ಹೂ ಕೋಸು ತಲಾ ಒಂದೊಂದು ಹಾಗೂ ಉಳಿದ ತರಕಾರಿಯನ್ನು ಒಂದೊಂದು ಹಿಡಿ ವಿತರಿಸಲಾಯಿತು.
ಎಪಿಎಂಸಿ ದಲ್ಲಾಳಿ ಸಂಘದವರ ಉಪಯುಕ್ತ ಕೆಲಸಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದರು.ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡಿದರೂ ಗಂಭೀರವಾಗಿ ಪರಿಗಣಿಸದ ಜನರು ಮುಗಿಬಿದ್ದರು. ಕೊರೊನಾ ವೈರಸ್ ಭಯ ಇಲ್ಲದೆ ಗುಂಪು ಗುಂಪಾಗಿ ತರಕಾರಿಯನ್ನು ಪಡೆದರು.‌ ದೂರ ದೂರ ನಿಲ್ಲುವಂತೆ ಜನರಲ್ಲಿ ಮನವಿ ಮಾಡಿದರೂ ಕೆಲವರು ತರಕಾರಿ ಪಡೆಯಲು ಮುಗಿಬಿದ್ದರು.