ಸಿಎಫ್‍ಟಿಆರ್‍ಐನ ಕನ್ನಡ ಪ್ರೇಮಕ್ಕೆ ಶ್ಲಾಘನೆ

ಮೈಸೂರು: ಸಿಎಫ್ ಟಿಆರ್‍ಐ ದೇಶದ ಹೆಮ್ಮೆಯ ಸಂಸ್ಥೆ ಯಾಗಿದ್ದು, ದೇಶ ಕಾಯುವ ಯೋಧ ರಿಗೆ ಆಹಾರವನ್ನು ಪೂರೈಕೆ ಮಾಡುವ ತಂತ್ರಜ್ಞಾನವನ್ನು ಕಂಡುಹಿಡಿದಿರುವುದು ಶ್ಲಾಘನೀಯ ಎಂದು ಶಾಸಕ ಬಸವನ ಗೌಡ ಪಾಟೀಲ ಯತ್ನಾಳ ಅಭಿವ್ಯಕ್ತಪಡಿ ಸಿದರು. ಕೇಂದ್ರೀಯ ಆಹಾರ ಸಂಶೋ ಧನಾಲಯ, ಕನ್ನಡ ಸಹೃದಯ ಬಳಗದ ವತಿಯಿಂದ ಸಿಎಫ್‍ಟಿಆರ್‍ಐನ ಐಎಫ್ ಟಿಟಿಸಿ ಸಭಾಂಗಣದಲ್ಲಿ ಕನ್ನಡ ಹಬ್ಬ-2018ರ ಪ್ರಯುಕ್ತ ಹಮ್ಮಿಕೊಂಡಿದ್ದ ಯಶವಂತ ಸರದೇಶಪಾಂಡೆ ಅವರ ‘ರಾಶಿಚಕ್ರ’ ಏಕವ್ಯಕ್ತಿ ನಾಟಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಿಂದಿ ಹೇಗೆ ರಾಷ್ಟ್ರ ಭಾಷೆಯಾಗಿದೆಯೋ ಅದೇ ರೀತಿ ರಾಜ್ಯ ಭಾಷೆ ಕನ್ನಡ. ಪ್ರತಿಯೊಬ್ಬರೂ ಕನ್ನಡ ವನ್ನು ಕಲಿಯಬೇಕು. ಇತರರಿಗೂ ಕನ್ನಡ ಕಲಿಸ ಬೇಕು ಎಂದರು.

ಹಿರಿಯ ಸಾಹಿತಿ ಸಿ.ಪಿ. ಕೃಷ್ಣಕುಮಾರ್ ಮಾತನಾಡಿ, ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂಬಂತೆ ಪ್ರತಿಯೊಬ್ಬರು ಕನ್ನಡ ಬಳಸಬೇಕು. ಸಿಎಫ್‍ಟಿಆರ್‍ಐ ಸಂಸ್ಥೆ ಕನ್ನಡವನ್ನು ಬೆಳೆಸುವ ಕೆಲಸ ಮಾಡು ತ್ತಿರುವುದು ಅಭಿನಂದನಾರ್ಹ ಎಂದರು. ಇಂಜಿನಿಯರ್ ಹೆಚ್.ಎಸ್.ಸತೀಶ್, ಸಿ.ಆರ್. ಢವಳಗಿ, ಶಾಂತಣ್ಣ ಕಡಿವಾಳ ಇದ್ದರು.