ಅನಧಿಕೃತ ಸಾಗುವಳಿ ಸಕ್ರಮಕ್ಕೆ ಅವಕಾಶ

ಹುಣಸೂರು: ಸರ್ಕಾರಿ ಜಮೀನುಗಳಲ್ಲಿನ ಅನಧಿಕೃತ ಸಾಗುವಳಿಯನ್ನು ಸಕ್ರಮಗೊಳಿಸಲು ಸರ್ಕಾರದಿಂದ ರೈತರಿಂದ ನಮೂನೆ-57ರಲ್ಲಿ ಅರ್ಜಿ ಆಹ್ವಾನಿಸಿದ್ದು, 2019ರ ಮಾ.16ರೊಳಗೆ ಸೂಕ್ತ ದಾಖಲೆಯೊಂದಿಗೆ ಅರ್ಹ ರೈತರು ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಹಶೀಲ್ದಾರ್ ಪಿ.ಸಿ.ಮೋಹನ್ ತಿಳಿಸಿದ್ದಾರೆ.

ತಾಲೂಕು ಕಚೇರಿ ಸಭಾಂಗಣದಲ್ಲಿ ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ನಂತರ ಸುದ್ದಿ ಗಾರರೊಂದಿಗೆ ಅವರು ಮಾತನಾಡಿದರು.

ರಾಜ್ಯ ಸರ್ಕಾರದ ಸುತ್ತೋಲೆಯಂತೆ ಕರ್ನಾಟಕ ಭೂಕಂದಾಯ ಕಾಯ್ದೆಗೆ ತಿದ್ದುಪಡಿ ತಂದು ಹಲವಾರು ಮಾರ್ಗ ಸೂಚಿಗಳನ್ನು ಪ್ರಕಟಿಸಲಾಗಿದ್ದು, ಅರ್ಹ ರೈತರು ತಾಲೂಕು ಕಚೇರಿ ಭೇಟಿ ನೀಡಿ, ಸರ್ಕಾರದ ಸುತ್ತೋಲೆಯ ಮಾಹಿತಿಯನ್ನು ಪಡೆದುಕೊಂಡು ಸೂಕ್ತ ದಾಖಲಾತಿ ಗಳೊಂದಿಗೆ ಸಾಗುವಳಿ ಸಕ್ರಮಕ್ಕೆ ಅರ್ಜಿ ಸಲ್ಲಿಸಬೇಕು. ರೈತರು ಯಾವುದೇ ಮಧ್ಯವರ್ತಿಗಳ ಮರ್ಜಿಗೆ ಬಲಿಯಾಗದೇ ನೇರವಾಗಿ ಕಚೆÉೀರಿಗೆ ಆಗಮಿಸಿ ಅನುಮಾನ ಪರಿಹರಿಸಿ ಕೊಳ್ಳಬೇಕೆಂದು ತಹಶೀಲ್ದಾರ್ ಮನವಿ ಮಾಡಿದರು.
ಅರ್ಜಿ ಸಲ್ಲಿಸಲು ಅನುಸರಿಸಬೇಕಾದ ಕ್ರಮಗಳು: ಪ್ರಸ್ತುತ ನಮೂನೆ 57ರಲ್ಲಿ ಅರ್ಜಿ ಸಲ್ಲಿಸಬೇಕಾದ ಅರ್ಜಿದಾರರು ಅಥವಾ ಕುಟುಂಬದವರು ಮಾತ್ರ ನಿಗದಿತ ಅರ್ಜಿ ನಮೂನೆಯನ್ನು ತಹಶೀಲ್ದಾರ್ ಕಚೇರಿ ಯಿಂದ ಪಡೆದು, ದ್ವಿಪ್ರತಿಯಲ್ಲಿ ಅಗತ್ಯ ದಾಖಲಾತಿಗಳೊಡನೆ ನಿಗದಿತ 100 ರೂ. ಶುಲ್ಕದೊಂದಿಗೆ ಸಲ್ಲಿಸಬೇಕು.

ಅಗತ್ಯ ದಾಖಲೆ: ಅರ್ಜಿಯೊಂದಿಗೆ ಜಾತಿ, ಆದಾಯ, ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ರೇಷನ್ ಕಾರ್ಡ್, ವಯೋಮಿತಿ ದೃಢೀಕರಣ ಪತ್ರ, ಸಂಬಂಧ ಪಟ್ಟ ಇಲಾಖೆಯಿಂದ ಪ್ರಮಾಣೀಕರಿಸಿದ ಪ್ರಮಾಣ ಪತ್ರ, ಆರ್.ಡಿ.ಸಂಖ್ಯೆಯುಳ್ಳ ವಂಶವೃಕ್ಷ ದಾಖಲೆಗಳೊಂದಿಗೆ ಸಲ್ಲಿಸಬೇಕು. ಅಲ್ಲದೆ ಸಕ್ರಮಾತಿ ಕೋರಿರುವ ಸರ್ವೇ ನಂ.ನ ಆರ್‍ಟಿಸಿ( ಜಮೀನಿನ 5 ಮತ್ತು 6ರ ಪ್ರತಿ) ಖರ್ದಾ ಪ್ರತಿ ಹಾಗೂ ಆಕಾರ್ ಬಂದ್ ಪ್ರತಿ ಸೇರಿದಂತೆ ಎಲ್ಲಾ ದಾಖಲೆ ಗಳನ್ನು ಮೂಲ ಮತ್ತು ದೃಢೀಕಸಿರಬೇಕು.
ಅರ್ಹರು: 2005 ಜನವರಿ 1 ಕ್ಕಿಂತ ಮೊದಲಿನಿಂದಲೂ ಅನುಭವವಿದ್ದಲ್ಲಿದ್ದು ಹಾಗೂ 2000 ಏಪ್ರಿಲ್ 1ಕ್ಕೆ 18 ವರ್ಷ ತುಂಬಿ ರುವವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.

ಅನರ್ಹರು: ಈ ಹಿಂದೆ ಯಾವುದೇ ಅರ್ಜಿದಾರ ಕುಟುಂಬಗಳು ಭೂಮಿ ಸಕ್ರಮಕ್ಕಾಗಿ ನಮೂನೆ-50 ಅಥವಾ 53ರಲ್ಲಿ ಅರ್ಜಿ ಸಲ್ಲಿಸಿದ್ದವರು ಹಾಗೂ ಮನವಿ ಸಲ್ಲಿಸಿ ತಿರಸ್ಕøತಗೊಂಡವರು ಮತ್ತೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.
ಸಕ್ರಮಕ್ಕೆ ಅವಕಾಶವಿಲ್ಲದ ಭೂಮಿ: ನಗರಸಭೆ ವ್ಯಾಪ್ತಿಯ ಗಡಿ ಅಳತೆಯ 5 ಕಿ.ಮೀ.ವ್ಯಾಪ್ತಿಯೊಳಗೆ ಬರುವ ಯಾವುದೇ ಜಮೀನನ್ನು ಸಕ್ರಮಗೊಳಿಸಲು ಅವಕಾಶವಿಲ್ಲ. ಈ ಪರಿಮಿತಿಗೆ ಬರು ಭೂಮಿ ಸಾಗುವಳಿದಾರರು ಅರ್ಜಿ ಸಲ್ಲಿಸುವಂತಿಲ್ಲ. ಅಲ್ಲದೆ ಗೋಮಾಳ, ಗ್ರಾಮ ಠಾಣಾ, ಹುಲ್ಲುಬನ್ನಿ, ಅರಮನೆ ಕಾವಲ್, ದೇವರ ಕಾಡು, ಉರ್ದುವೆ, ಗುಂಡು ತೋಪು, ಕೆರೆಯ ತಳಪಾಯ, ಪೂಟ್ ಖರಾಬ್ ಹಳ್ಳ, ಅರಣ್ಯ ಭೂಮಿ, ಸ್ಮಶಾನ, ಸಿ.ಅಂಡ್.ಡಿ ಭೂಮಿ ಹಾಗೂ ಕಾಯ್ದಿರಿಸಿದ ಅರಣ್ಯ ಪ್ರದೇಶದ ಭೂಮಿ ಮಂಜೂರಾತಿಗೆ ಅವಕಾಶವಿಲ್ಲ.

ಮತ್ತೊಮೆ ಅರ್ಜಿ ಸಲ್ಲಿಸುವಂತಿಲ್ಲ: ಈ ಹಿಂದೆ ನಮೂನೆ -50 ಅಥವಾ 53ರಲ್ಲಿ ಅರ್ಜಿ ಸಲ್ಲಿಸಿ, ಮಂಜೂರಾತಿ ಪಡೆದು ಹಾಗೂ ಅವರ ಪಿತ್ರಾರ್ಜಿತ ಸ್ವತ್ತು ಸೇರಿ 4.38 ಎಕರೆಗಿಂತ ಕಡಿಮೆ ವಿಸ್ತೀರ್ಣದ ಜಮೀನು ಹೊಂದಿರುವ ಅರ್ಜಿದಾರ ಕುಟುಂಬದ ವ್ಯಕ್ತಿ ಮತ್ತೊಮ್ಮೆ ಅರ್ಜಿ ಸಲ್ಲಿಸುವಂತಿಲ್ಲ. ಅಲ್ಲದೆ ಈ ಹಿಂದೆ ಮಂಜೂರಾಗಿದ್ದ ಭೂಮಿಯನ್ನು ಉಳುಮೆ ಮಾಡುವುದು ಬಿಟ್ಟು ಹೋಗಿ ದ್ದಲ್ಲಿ ಅಂತಹ ಜಮೀನುಗಳಿಗೆ ಮತ್ತೆ ಅರ್ಜಿ ಸಲ್ಲಿಸುವಂತಿಲ್ಲ.
ವ್ಯಾಜ್ಯ ಸಂಬಂಧಿತ ಭೂಮಿ: ಉಪ ವಿಭಾಗಾಕಾರಿಗಳ ನ್ಯಾಯಾಲಯದಲ್ಲಿ ರುವ ಪ್ರಕರಣಗಳಿಗೆ ಸಂಬಂಧಿಸಿ ದಂತಹ ಯಾವುದೇ ಜಮೀನಿಗೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.