ವಾಸ್ತುಗಿಂತ ವಾತಾವರಣಕ್ಕೆ ಅನುಗುಣವಾಗಿ ಕಟ್ಟಡ ನಿರ್ಮಾಣ ಅಗತ್ಯ

ಮೈಸೂರು: ವಾಸ್ತು ಗಿಂತ ವಾತಾವರಣಕ್ಕೆ ಅನುಗುಣವಾಗಿ ಕಟ್ಟಡಗಳನ್ನು ನಿರ್ಮಾಣ ಮಾಡುವುದು ಅಗತ್ಯವಾಗಿದೆ ಎಂದು ವಾಸ್ತುಶಿಲ್ಪಿ(ಆರ್ಕಿ ಟೆಕ್ಚರ್) ಜಿ.ಕೆ.ಸುಧೀಂದ್ರ ಹೇಳಿದರು.

ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ಇನ್ಸ್‍ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ ಸಂಸ್ಥೆ ಸಭಾಂಗಣದಲ್ಲಿ ಬುಧವಾರ ಹಮ್ಮಿ ಕೊಂಡಿದ್ದ ‘ಇಂದಿನ ದಿನದಲ್ಲಿ ವಾಸ್ತು ಶಿಲ್ಪಿಯ ಪಾತ್ರ’ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಟ್ಟಡ ನಿರ್ಮಾಣಕ್ಕೆ ಇಂಜಿನಿಯರ್, ಕಂಟ್ರಾಕ್ಟರ್, ಬಿಲ್ಡರ್‍ಗಿಂತ ಮೊದಲು ಆರ್ಕಿಟೆಕ್ಚರ್‍ನ ಅವಶ್ಯಕತೆ ಹೆಚ್ಚಾಗಿರುತ್ತದೆ. ಏಕೆಂದರೆ ಕಟ್ಟಡದ ವಿನ್ಯಾಸ ಮೊದಲು ನಿರ್ಣಯವಾಗಬೇಕು. ವಿನ್ಯಾಸವಿಲ್ಲದೆ ನಿರ್ಮಾಣ ಕಾರ್ಯ ಪ್ರಾರಂಭಿಸಿದರೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸ ಬೇಕಾಗುತ್ತದೆ ಎಂದರು.

ವಿನ್ಯಾಸದೊಂದಿಗೆ ಕಟ್ಟಡ ನಿರ್ಮಾಣ ಮಾಡಿದರೆ ಅಗತ್ಯಕ್ಕೆ ತಕ್ಕಂತೆ ಸೂಕ್ತ ರೀತಿ ಯಲ್ಲಿ ಹಣ ಖರ್ಚಾಗುತ್ತದೆ. ಇಲ್ಲವಾದಲ್ಲಿ ಹೆಚ್ಚಿನ ಹಣವನ್ನು ವ್ಯಯ ಮಾಡಬೇಕಾ ಗುತ್ತದೆ. ಅಲ್ಲದೆ ಇತ್ತೀಚಿನ ದಿನಗಳಲ್ಲಿ ನಕಲಿ ಆರ್ಕಿಟೆಕ್ಚರ್‍ಗಳು ಹೆಚ್ಚಾಗುತ್ತಿದ್ದಾರೆ ಎಂದು ಎಚ್ಚರಿಸಿದರು.

ಯೋಗ್ಯ ಬೆಲೆಯಲ್ಲಿ ಮನೆಯ ಅಥವಾ ಕಟ್ಟಡದ ವಿನ್ಯಾಸ ಮಾಡುವ ಜವಾಬ್ದಾರಿ ಆರ್ಕಿಟೆಕ್ಚರ್‍ಗಳದ್ದಾಗಿದೆ. ವಿನ್ಯಾಸಕ್ಕೆ ಸೀಮಿತವಾಗದೆ ನಿರ್ಮಾಣ ಸಂಪೂರ್ಣ ವಾಗುವವರೆಗೂ ಭಾಗಿಯಾಗಬೇಕು ಎಂದರು.

ಇಂದು ಐಷಾರಾಮಿ ಕಟ್ಟಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಅವಶ್ಯಕತೆ ಇರು ವುದು ಪರಿಸರಕ್ಕೆ ಹೊಂದಿಕೊಳ್ಳುವ ಕಟ್ಟಡ ಗಳು. ಸೋಲಾರ್ ವ್ಯವಸ್ಥೆ ಸೇರಿದಂತೆ ಇತರೆ ಅಗತ್ಯತೆಗಳಿಗೆ ಹೊಂದಾಣಿಕೆ ಯಾಗು ವಂತೆ ವಿನ್ಯಾಸಗೊಳಿಸಬೇಕು ಎಂದು ತಿಳಿಸಿ ದರು. ಕಾರ್ಯಕ್ರಮದಲ್ಲಿ ಇಂಜಿನಿಯರು ಗಳ ಸಂಸ್ಥೆ ಅಧ್ಯಕ್ಷ ಡಾ.ಆರ್.ಸುರೇಶ್, ಗೌರವ ಕಾರ್ಯದರ್ಶಿ ಡಿ.ಕೆ.ದಿನೇಶ್ ಕುಮಾರ್ ಉಪಸ್ಥಿತರಿದ್ದರು.