ಪಾತಕ್ ಡೆವಲಪರ್ಸ್ ಮುಖ್ಯಸ್ಥನ ಬಂಧನ

ಮೈಸೂರು, ಜು. 29(ಆರ್‍ಕೆ)- ಅಪಾರ್ಟ್‍ಮೆಂಟ್‍ಗಳಲ್ಲಿ ಫ್ಲಾಟ್‍ಗಳನ್ನು ಮಾರಾಟ ಮಾಡುವಾಗ ಗ್ರಾಹಕರಿಗೆ ವಂಚಿಸಿದ ಆರೋಪದಡಿ ಮೈಸೂರಿನ ಪ್ರತಿಷ್ಠಿತ ಡೆವಲಪರ್ ಮತ್ತು ಕನ್‍ಸ್ಟ್ರಕ್ಷನ್ ಕಂಪನಿಯೊಂದರ ಮುಖ್ಯಸ್ಥನನ್ನು ವಿ.ವಿ. ಪುರಂ ಠಾಣೆ ಪೊಲೀಸರು ಇಂದು ಬಂಧಿಸಿ ದ್ದಾರೆ. ಮೈಸೂರಿನ ಪಾತಕ್ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇ ಶಕ ಶ್ರೀಹರಿ ಪಾತಕ್ ಬಂಧಿತ ಆರೋಪಿ ಯಾಗಿದ್ದು, ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ವಿ.ವಿ. ಪುರಂ ಠಾಣೆ ಪೊಲೀಸರು ತಿಳಿಸಿದ್ದಾರೆ.

ಮೈಸೂರಿನ ರಿಂಗ್ ರೋಡ್ ಬಳಿಯ ಆರ್‍ಎಂಪಿ ಕ್ವಾರ್ಟರ್ಸ್ ನಿವಾಸಿಯಾದ ತಮಿಳುನಾಡು ಮೂಲದ ಟಿ.ವಿ. ರಾಜು ಎಂಬ ಆರ್‍ಎಂಪಿ ಉದ್ಯೋಗಿ ನೀಡಿದ ದೂರಿನನ್ವಯ ಐಪಿಸಿ ಸೆಕ್ಷನ್ 420 ಹಾಗೂ 406 ರೀತ್ಯಾ ಪ್ರಕರಣ ದಾಖಲಿಸಿಕೊಂಡಿದ್ದ ವಿ.ವಿ.ಪುರಂ ಠಾಣೆ ಇನ್ಸ್‍ಪೆಕ್ಟರ್ ವಿನಯ್ ಹಾಗೂ ಸಿಬ್ಬಂದಿ, ಕೆಆರ್‍ಎಸ್ ಬಳಿ ತೋಟದ ಮನೆಯಲ್ಲಿ ಆರೋಪಿ ಶ್ರೀಹರಿ ಪಾತಕ್ ನನ್ನು ಇಂದು ಮುಂಜಾನೆ ಬಂಧಿಸಿದ್ದಾರೆ. ಹೆಬ್ಬಾಳು ಬಳಿ ನಿರ್ಮಿ ಸಿರುವ ಪ್ರಥಮ್ ಲಕ್ಷ್ಮಿ ಅಪಾರ್ಟ್‍ಮೆಂಟ್‍ನಲ್ಲಿ 5-2 ಸಂಖ್ಯೆಯ ಫ್ಲಾಟ್ ಕೊಡುವುದಾಗಿ ತಮ್ಮಿಂದ ಮುಂಗಡ ಹಣ ಪಡೆದು ಅಗ್ರಿ ಮೆಂಟ್ ಮಾಡಿಕೊಟ್ಟು, ನಿರ್ಮಾಣ ಪೂರ್ಣಗೊಂಡ ನಂತರ ಆ ಫ್ಲಾಟ್ ಅನ್ನು ಪತ್ನಿ ಕೆ.ಆರ್.ಜನ್ನಾಂಬಿಕ ಹೆಸರಿಗೆ ಸೇಲ್ ಡೀಡ್ ಮಾಡಿಕೊಟ್ಟಿದ್ದರು. ಅದೇ ಫ್ಲಾಟ್ ಅನ್ನು ಮಿಥುನ್ ಎಂಬು ವವರಿಗೂ 2016 ರಲ್ಲಿ ಸೇಲ್ ಡೀಡ್ ಮಾಡಿದ್ದಲ್ಲದೇ, ಅದನ್ನು ಕನ್ಯಕಾ ಪರಮೇಶ್ವರಿ ಕೋ-ಆಪರೇಟಿವ್ ಬ್ಯಾಂಕಿನಲ್ಲಿ ಅಡವು (ಮಾರ್ಟ್ ಗೇಜ್) ಇರಿಸಿದ್ದರು ಎಂದು ಟಿ.ವಿ.ರಾಜು ತಮ್ಮ ದೂರಿನಲ್ಲಿ ತಿಳಿಸಿ ದ್ದಾರೆ. ಅದರನ್ವಯ ಶ್ರೀಹರಿ ಪಾತಕ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿ ದ್ದಾರೆ. ಈ ಕಾರ್ಯಾಚರಣೆಯಲ್ಲಿ ವಿ.ವಿ.ಪುರಂ ಠಾಣೆ ಇನ್ಸ್‍ಪೆಕ್ಟರ್ ವಿನಯ್, ಸಿಬ್ಬಂದಿಗಳಾದ ಪ್ರಸನ್ನ, ದಿವಾ ಕರ್, ಸೋಮ ಶೇಖರ್, ಈರಣ್ಣ ಅವರು ಪಾಲ್ಗೊಂಡಿದ್ದರು.