ಖದೀಮನ ಸೆರೆ: 12.65 ಲಕ್ಷ ರೂ. ಮೌಲ್ಯದ 16 ದ್ವಿಚಕ್ರ ವಾಹನಗಳ ವಶ

ಮೈಸೂರು,ಡಿ.13(ಆರ್‍ಕೆ)-ಕಳ್ಳ ನೋರ್ವನನ್ನು ಬಂಧಿಸಿರುವ ಮೇಟಗಳ್ಳಿ ಠಾಣೆ ಪೊಲೀಸರು, 12.65 ಲಕ್ಷ ರೂ. ಮೌಲ್ಯದ 16 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಪಿರಿಯಾಪಟ್ಟಣ ತಾಲೂಕು, ಉತ್ತೇನ ಹಳ್ಳಿ ಗ್ರಾಮದ ಲೇಟ್ ಸುಂದರಮೂರ್ತಿ ಅವರ ಮಗ ಕೀರ್ತಿಕುಮಾರ್ ಅಲಿ ಯಾಸ್ ಕುಮಾರ್(24) ಬಂಧಿತ ಆರೋಪಿ. ಆತನಿಂದ 12.65 ಲಕ್ಷ ರೂ. ಬೆಲೆ ಬಾಳುವ ಒಟ್ಟು 16 ದ್ವಿಚಕ್ರ ವಾಹನ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮೈಸೂರು ನಗರ, ಜಿಲ್ಲಾ ಗ್ರಾಮಾಂತರ ಹಾಗೂ ಬೆಂಗಳೂರು ನಗರಗಳಲ್ಲಿ ಕಳೆದ ಒಂದು ವರ್ಷದಿಂದ ಆತ ದ್ವಿಚಕ್ರ ವಾಹನಗಳನ್ನು ಕಳವು ಮಾಡಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದು, ಒಟ್ಟು 11 ಪ್ರಕರಣಗಳು ದಾಖಲಾಗಿದ್ದವು.

ಆರೋಪಿಯು ಈ ಹಿಂದೆ ಮೈಸೂರಿನ ಸಿಸಿಬಿ ಹಾಗೂ ಬೆಂಗಳೂರು ಗ್ರಾಮಾಂತರ ಬಿಡದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನಗಳನ್ನು ಕಳವು ಮಾಡಿ ಸಿಕ್ಕಿ ಬಿದ್ದಿದ್ದ. ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಮತ್ತೆ ಅದೇ ಚಾಳಿ ಆರಂಭಿಸಿದ್ದ.

ಡಿಸಿಪಿಗಳಾದ ಎಂ.ಮುತ್ತುರಾಜ್, ಬಿ.ಟಿ.ಕವಿತಾ ಅವರ ಮಾರ್ಗದರ್ಶನ ಹಾಗೂ ಎನ್.ಆರ್.ಉಪ ವಿಭಾಗದ ಎಸಿಪಿ ಎಂ.ಶಿವ ಶಂಕರ ನೇತೃತ್ವದಲ್ಲಿ ನಡೆದ ಪತ್ತೆ ಕಾರ್ಯಾ ಚರಣೆಯಲ್ಲಿ ಮೇಟಗಳ್ಳಿ ಠಾಣೆ ಇನ್ಸ್‍ಪೆಕ್ಟರ್ ರಾಘವೇಂದ್ರಗೌಡ, ಸಬ್ ಇನ್ಸ್‍ಪೆಕ್ಟರ್ ವಿಶ್ವನಾಥ, ನಾಗರಾಜ ನಾಯಕ್, ಸಿಬ್ಬಂದಿ ಗಳಾದ ಎನ್.ಟಿ.ಪೊನ್ನಪ್ಪ, ಲಿಂಗರಾಜಪ್ಪ, ಸುರೇಶ, ಚಂದ್ರಕಾಂತ ತಳವಾರ್, ನರ ಸಿಂಹರಾಜು, ಟಿ.ಡಿ. ಲಿಖಿತ, ಮೋಹನ, ಆಶಾ ಅವರು ಪಾಲ್ಗೊಂಡಿದ್ದರು.