ಆಶಾ ಕಾರ್ಯಕರ್ತೆಯರ ಪ್ರತಿಭಟನಾ ಮೆರವಣಿಗೆ, ಧರಣಿ

ಮೈಸೂರು, ಜು.10(ಆರ್‍ಕೆಬಿ)- ಆಶಾ ಕಾರ್ಯಕರ್ತೆಯರಿಗೆ ಮಾಸಿಕ ರೂ. 12,000 ನಿಗದಿಪಡಿಸಬೇಕು. ಆಶಾ ಸಾಫ್ಟ್ ಅಥವಾ ಆರ್‍ಸಿಎಚ್ ಪೋರ್ಟಲ್‍ಗೆ ಆಶಾ ವೇತನ ರದ್ದತಿ ಮತ್ತು 9 ತಿಂಗಳ ಬಾಕಿ ಎಂಸಿಟಿಎಸ್ ಪ್ರೋತ್ಸಾಹ ಧನವನ್ನು ಕೂಡಲೇ ವಿತರಿಸಬೇಕು, ಇನ್ನಿತರ ಬೇಡಿಕೆ ಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆ ಯರ ಸಂಘದ ಮೈಸೂರು ಜಿಲ್ಲಾ ಸಮಿತಿ ಆಶ್ರಯದಲ್ಲಿ ನೂರಾರು ಆಶಾ ಕಾರ್ಯ ಕರ್ತೆಯರು ಬುಧವಾರ ಮೈಸೂರಿನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿಯಿಂದ ದೊಡ್ಡ ಗಡಿ ಯಾರ, ಗಾಂಧಿ ವೃತ್ತ, ವಿನೋಬ ರಸ್ತೆ, ದೇವ ರಾಜ ಅರಸು ರಸ್ತೆ, ಜೆಎಲ್‍ಬಿ ರಸ್ತೆ, ಹುಣ ಸೂರು ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮೆರವಣಿಗೆಯುದ್ದಕ್ಕೂ ರಾಜ್ಯ ಸರ್ಕಾರ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಘೋಷಣೆಗಳನ್ನು ಕೂಗಿದರು.

ಬಳಿಕ ಡಿಸಿ ಕಚೇರಿ ಬಳಿ ಧರಣಿ ಕುಳಿತರು. ಆರೋಗ್ಯ ಇಲಾಖೆ ಮಹತ್ತರವಾದ ಕೆಲಸ ಗಳನ್ನು ಜಿಲ್ಲೆಯಾದ್ಯಂತ ಪ್ರಾಮಾಣಿಕ ವಾಗಿ ನಿರ್ವಹಿಸುತ್ತಿರುವ ಆಶಾ ಕಾರ್ಯ ಕರ್ತೆಯರು, ಗರ್ಭಿಣಿ ಮಹಿಳೆಯರ ಸುರ ಕ್ಷಿತ ಹೆರಿಗೆ, ಸ್ವಸ್ಥ ಶಿಶುವಿನ ಜನನ, ಆರೈಕೆ ಹಾಗೂ ಆರೋಗ್ಯ ಮತ್ತು ಪೌಷ್ಟಿಕತೆಯ ಅರಿವು ಮೂಡಿಸುತ್ತ, ಕ್ಷಯ, ಕುಷ್ಠ ರೋಗ, ಮಲೇರಿಯಾ, ಡೆಂಗ್ಯೂ, ಚಿಕುನ್‍ಗುನ್ಯಾ ಇತ್ಯಾದಿ ಸಾಂಕ್ರಾಮಿಕ ರೋಗಗಳನ್ನು ತಡೆ ಗಟ್ಟುವಲ್ಲಿ ಶ್ರಮಿಸುತ್ತಾ, ಕುಟುಂಬ ಯೋಜನೆ, ಶೌಚಾಲಯ ಬಳಕೆ, ಸಮಗ್ರ ಅಭಿವೃದ್ಧಿಯ ಕುರಿತು ಗ್ರಾಮೀಣ ಸಮಾಜದ ಆರೋಗ್ಯ ಕರ ಬದಲಾವಣೆಗೆ ಆಶಾ ಕಾರ್ಯಕರ್ತೆ ಯರು ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಆದರೂ ರಾಜ್ಯ ಸರ್ಕಾರ ಆಶಾ ಕಾರ್ಯ ಕರ್ತೆಯರ ಕೆಲಸಕ್ಕೆ ತಕ್ಕ ವೇತನ ನೀಡು ತ್ತಿಲ್ಲ. ಇಂದಿಗೂ ಆಶಾ ಕಾರ್ಯಕರ್ತೆಯರು ಪ್ರತೀ ತಿಂಗಳ ವೇತನವಿಲ್ಲದೆ, ಪರದಾಡು ವಂತಾಗಿದೆ. ರಾಜ್ಯದಲ್ಲಿ ಕೇಂದ್ರದ ಪ್ರೋತ್ಸಾಹ ಧನ ನೀಡುವ ಮಾದರಿ ಆಶಾ ಸಾಫ್ಟ್ ವೇತನ ಮಾದರಿಯಿಂದಾಗಿ ಕಾರ್ಯಕರ್ತೆಯರಿಗೆ ಕಳೆದ 3 ವರ್ಷದಿಂದ ಸಹಸ್ರಾರು ರೂ. ಆರ್ಥಿಕ ನಷ್ಟವಾಗಿದೆ. ಸರ್ಕಾರದ ನೂತನ ವೇತನ ಪಾವತಿ ವಿಧಾನ ಖಜಾನೆ -2ರಿಂದ ರಾಜ್ಯದ ಮಾಸಿಕ ರೂ.3500 ಗೌರವಧನ ಹಲವಾರು ತಿಂಗಳು ವಿಳಂಬವಾಗಿ ನೀಡಿ ದ್ದಾರೆ. ಕಳೆದ 4-5 ವರ್ಷದಿಂದ ಹೊಸ ರೀತಿಯ ವೇತನ ವಿಧಾನ ಪದೇ ಪದೆ ಬದ ಲಾವಣೆ ಮಾಡುತ್ತಿದ್ದಾರೆ. ಬಡ ಆಶಾ ಕಾರ್ಯಕರ್ತೆಯರ ಮೇಲೆ ಈ ರೀತಿ ಪ್ರಯೋಗ ಮಾಡಲಾಗುತ್ತಿದೆ. ಯಾವುದೇ ಹೊಸ ವಿಧಾನ ಜಾರಿ ತರುವಾಗ ತಯಾರು ಮಾಡಿ ಕೊಂಡು ಜಾರಿ ಮಾಡಬೇಕು. ತಯಾರಿ ಇಲ್ಲದ ಈ ವಿಧಾನದಿಂದ ಬಡ ಕಾರ್ಯಕರ್ತೆ ಯರು ಪ್ರತೀ ತಿಂಗಳು ವೇತನವಿಲ್ಲದೆ ಪರ ದಾಡುವಂತಾಗಿದೆ ಎಂದು ಆರೋಪಿಸಿದರು. ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷೆ ಶುಭಮಂಗಳ, ಕಾರ್ಯ ದರ್ಶಿ ಮಂಜುಳ, ಜಿಲ್ಲಾ ಸಲಹೆಗಾರರಾದ ಸಂಧ್ಯಾ, ನಗರ ಅಧ್ಯಕ್ಷೆ ಸೀಮಾ, ಮಂಜುಳಾ ಮಣಿ, ಸಿದ್ದಮ್ಮ, ಸವಿತಾ, ಶೋಭಾ, ಸುನಿತಾ, ಕೋಮಲ್, ಎಐಟಿಯುಸಿ ಜಿಲ್ಲಾಧ್ಯಕ್ಷ ಯಶೋ ಧರ ಇನ್ನಿತರರು ಪ್ರತಿಭಟನೆಯಲ್ಲಿದ್ದರು.