ಮೈಸೂರು, ಜ.16(ಎಂಕೆ)- ಕ್ಷುಲ್ಲಕ ಕಾರಣಕ್ಕೆ ಸ್ಕೂಟರ್‍ನಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ಕಾರಿನಿಂದ ಡಿಕ್ಕಿ ಹೊಡೆಸಿ, ನಂತರ ಅಪಹರಿಸಿ, ಒತ್ತೆಯಾಗಿರಿಸಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿ ದಂತೆ ರೌಡಿಶೀಟರ್ ಸೇರಿ 7 ಮಂದಿ ಆರೋಪಿ ಗಳನ್ನು ಕೆ.ಆರ್.ಠಾಣೆ ಪೊಲೀಸರು ಬಂಧಿಸಿ, ಕಾರು, 4 ಬೈಕ್, 6 ಮೊಬೈಲ್ ಮತ್ತು 4 ಸಾವಿರ ರೂ. ನಗದು ವಶಪಡಿಸಿಕೊಂಡಿದ್ದಾರೆ.
ಇಟ್ಟಿಗೆಗೂಡಿನ ನಿವಾಸಿ ರೌಡಿಶೀಟರ್ ಆಕರ್ಷ್ ಅಲಿಯಾಸ್ ಆಕಾಶ್(25), ಕೃಷ್ಣಮೂರ್ತಿಪುರಂ ನಿವಾಸಿಗಳಾದ ನಿತಿನ್ (27), ಜಯಂತ್ (22), ಸರಸ್ವತಿಪುರಂನ ಮಂಜುನಾಥ್(20), ಚಂದ್ರು, ಕೊಡಗು ಜಿಲ್ಲೆಯ ಸೋಮವಾರಪೇಟೆ ನಿವಾಸಿ ಬಿ.ಆರ್.ಭರತ್ (23), ನಂಜನಗೂಡು ತಾಲೂ ಕಿನ ಅಳಿದಿಡ್ಡಿ ಗ್ರಾಮದ ನಿವಾಸಿ ಎಸ್. ಚೇತನ್ (20) ಬಂಧಿತ ಆರೋಪಿಗಳು.
ಘಟನೆ ವಿವರ: ಜ.14 ರಂದು ರಾತ್ರಿ 11.30ರಲ್ಲಿ ಕೆ.ಆರ್.ಮೊಹಲ್ಲಾ ನಿವಾಸಿ ಅನಿಲ್ ಎಂಬಾತ ಸಿದ್ದಪ್ಪ ಸ್ಕ್ವೇರ್ ಬಳಿ ತನ್ನ ಸ್ನೇಹಿತರೊಂದಿಗೆ ಮಾತನಾಡುತ್ತಾ ನಿಂತಿದ್ದಾಗ ಸ್ಥಳಕ್ಕೆ ಬಂದ ಆರೋಪಿ ನಿತಿನ್ ಬೆಂಕಿ ಪೊಟ್ಟಣ ಕೇಳಿದ್ದಾನೆ. ಇಲ್ಲ ಎಂದಿದ್ದಕ್ಕೆ ಅನಿಲ್ ಮತ್ತು ಆತನ ಸ್ನೇಹಿತರ ಮೇಲೆ ನಿತಿನ್ ಹಲ್ಲೆ ನಡೆಸಿದ್ದಾನೆ.
ಬಳಿಕ ಅನಿಲ್ ತನ್ನ ಸ್ಕೂಟರ್‍ನಲ್ಲಿ ಸ್ನೇಹಿತರನ್ನು ಮನೆಗೆ ಬಿಟ್ಟು, ತನ್ನ ಮನೆಗೆ ಹೋಗುತ್ತಿದ್ದಾಗ ಕಾರು ಮತ್ತು ದ್ವಿಚಕ್ರವಾಹನಗಳಲ್ಲಿ ಹಿಂಬಾಲಿಸಿಕೊಂಡು ಬಂದ ನಿತಿನ್ ಮತ್ತು ಇತರರು ಅನಿಲ್ ಸ್ಕೂಟರ್‍ಗೆ ಕಾರು ಡಿಕ್ಕಿ ಹೊಡೆಸಿ, ಕೆಳಗೆ ಬೀಳಿಸಿದ್ದಾರೆ. ಬಳಿಕ ಅನಿಲ್ ನಿಗೆ ಚಾಕು ತೋರಿಸಿ ಹೆದರಿಸಿ, ಆತನ ಬಳಿಯಿದ್ದ 21,050 ರೂ. ನಗದು ಹಾಗೂ ಮೊಬೈಲ್‍ನ್ನು ಕಿತ್ತು ಕೊಂಡು ಕಾರಿನಲ್ಲಿ ಅಪಹರಿಸಿದ್ದಾರೆ.
ನಂತರ ಸರಸ್ವತಿಪುರಂನಲ್ಲಿರುವ ರೂಂ ಒಂದಕ್ಕೆ ಎಳೆದುಕೊಂಡು ಹೋಗಿ ಅನಿಲ್‍ನನ್ನು ಒತ್ತೆಯಿಟ್ಟು ಕೊಂಡು 50 ಸಾವಿರ ರೂ. ನೀಡುವಂತೆ ಒತ್ತಾ ಯಿಸಿದ್ದಾರೆ. ಜ.15ರಂದು ಮಧ್ಯಾಹ್ನ ಬಾತ್ ರೂಂಗೆ ಹೋಗುವುದಾಗಿ ಹೇಳಿ ಅಲ್ಲಿಂದ ತಪ್ಪಿಸಿ ಕೊಂಡು ಬಂದ ಅನಿಲ್, ಚಿಕಿತ್ಸೆ ಪಡೆದು ಕೆ.ಆರ್.ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದ ಕೆ.ಆರ್.ಠಾಣೆ ಪೊಲೀಸರು 7 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಇಟ್ಟಿಗೆಗೂಡಿನ ಆಕರ್ಷ್ ನಜರ್‍ಬಾದ್ ಪೊಲೀಸ್ ಠಾಣೆಯ ರೌಡಿ ಶೀಟರ್ ಆಗಿದ್ದು, ಲಷ್ಕರ್ ಠಾಣೆಯಲ್ಲಿ ಸಹ ಪ್ರಕರಣ ದಾಖಲಾಗಿದೆ. ಬಂಧಿತರಿಂದ 4 ದ್ವಿಚಕ್ರ ವಾಹನಗಳು, 1 ಕಾರು ಮತ್ತು 6 ಮೊಬೈಲ್ ಮತ್ತು 4 ಸಾವಿರ ರೂ. ನಗದು ವಶಕ್ಕೆ ಪಡೆದಿದ್ದಾರೆ.
ಪತ್ತೆ ಕಾರ್ಯದಲ್ಲಿ ಕೆ.ಆರ್.ಠಾಣೆ ಇನ್ಸ್‍ಪೆಕ್ಟರ್ ಎಲ್.ಶ್ರೀನಿವಾಸ್, ಎಎಸ್‍ಐ ಡಿ.ಬಿ.ಸುರೇಶ್ ಸಿಬ್ಬಂದಿಗಳಾದ ಅನಿಲ್ ಶಂಕಪಾಲ್, ಮೊಖ ದ್ದರ್ ಷರೀಫ್, ರಮೇಶ್, ಮಧು, ಶಿವಕುಮಾರ ಸ್ವಾಮಿ, ಮಣಿಕಂಠ ಪ್ರಸಾದ್ ಭಾಗವಹಿಸಿದ್ದರು.