ಮೈಸೂರು: ಮೈಸೂ ರಿನ ಆಲನಹಳ್ಳಿ ಬಳಿ ರಿಂಗ್ ರಸ್ತೆಯಲ್ಲಿನ 6 ಅಂಗಡಿಗಳ ರೋಲಿಂಗ್ ಶೆಟರ್ ಮೀಟಿ ಕಳವಿಗೆ ವಿಫಲ ಯತ್ನ ನಡೆಸಿರುವ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ.
ಇಂದು ಬೆಳಿಗ್ಗೆ ವಾಯುವಿಹಾರಿಗಳು ಅಂಗಡಿಗಳ ರೋಲಿಂಗ್ ಶೆಟರ್ ಮೀಟಿರು ವುದನ್ನು ಕಂಡು ಆಲನಹಳ್ಳಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಧಾವಿಸಿದ ಪೊಲೀಸರು ಮಹಜರು ನಡೆಸಿದಾಗ ಕಳವಿಗೆ ಯತ್ನಿಸಿದ್ದು, ಅಲ್ಲಿ ಹಣವಾಗಲೀ, ವಸ್ತುಗಳನ್ನಾಗಲೀ ಕಳವು ಮಾಡಿಲ್ಲ ಎಂಬುದು ತಿಳಿಯಿತು.
ನಗದನ್ನು ಖದೀಮರು ಶೋಧಿಸಿದ್ದು, ಅಲ್ಲಿ ಹಣ ಇರಲಿಲ್ಲ ಎಂದು ಅಂಗಡಿ ಮಾಲೀ ಕರು ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಬಸವೇಶ್ವರ ಪೈಪ್ಸ್ ಅಂಡ್ ಹಾರ್ಡ್‍ವೇರ್, ರಾಜಾ ಟ್ರಾನ್ಸ್‍ಪೋರ್ಟ್, ಗಣೇಶ ಎಲೆಕ್ಟ್ರಿಕಲ್ಸ್ ಅಂಡ್ ಹಾರ್ಡ್‍ವೇರ್ ಸೇರಿದಂತೆ ಅಕ್ಕಪಕ್ಕದ 6 ಅಂಗಡಿಗಳಲ್ಲಿ ಖದೀಮರು ಹಣ ಕಳವಿಗೆ ಯತ್ನಿಸಿದ್ದಾರೆ.
ಶುಕ್ರವಾರ ರಾತ್ರಿ 10 ಗಂಟೆ ವೇಳೆಗೆ ಅಂಗಡಿ ಗಳಿಗೆ ಬೀಗ ಹಾಕಿ ವ್ಯಾಪಾರ ಮಾಡಿದ್ದ ಹಣವನ್ನು ಮಾಲೀಕರು ತೆಗೆದುಕೊಂಡು ಹೋಗಿದ್ದ ರಿಂದ ಖದೀಮರು ಬರಿಗೈಲಿ ಹಿಂದಿರುಗಿದ್ದಾರೆ ಎಂದು ತಿಳಿದುಬಂದಿದೆ. ಬೆರಳಚ್ಚು ಮುದ್ರೆ ಘಟಕ ಹಾಗೂ ಶ್ವಾನದಳ ಸಿಬ್ಬಂದಿ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಿಸಿಕೊಂಡಿರುವ ಆಲನಹಳ್ಳಿ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.