ಪ್ರತಾಪ್ ಸಿಂಹರಿಂದ ವಾಕ್, ಶ್ರವಣ ಸಂಸ್ಥೆ ಕಟ್ಟಡ ಕಾಮಗಾರಿ ಪರಿಶೀಲನೆ

ಮೈಸೂರು: ಮೈಸೂರಿನ ಮಾನಸಗಂಗೋತ್ರಿ ಆವರಣದ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ನಡೆಯುತ್ತಿರುವ ಕಟ್ಟಡಗಳ ಕಾಮಗಾರಿಯನ್ನು ಸಂಸದ ಪ್ರತಾಪ್ ಸಿಂಹ ಅವರು ಇಂದು ವೀಕ್ಷಿಸಿದರು.

ಆಯಿಷ್ ಆವರಣದಲ್ಲಿ 137 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಸೆಂಟರ್ ಆಫ್ ಎಕ್ಸಲೆನ್ಸಿ, ಮನುಷ್ಯನ ಮುಖದ ಆಕಾರದ ವಿಶೇಷ ವಿನ್ಯಾಸದಲ್ಲಿ ನಿರ್ಮಾಣವಾಗುತ್ತಿರುವ ಆಕರ್ಷಕ ವಸ್ತು ಸಂಗ್ರಹಾಲಯದ ಕಟ್ಟಡ (6.85 ಕೋಟಿ ರೂ.), 11 ಹೊಸ ವಿದ್ಯಾರ್ಥಿನಿಲಯ ಕಟ್ಟಡಗಳು ಹಾಗೂ ಆರ್‍ಓ ಪ್ಲಾಂಟ್ ನಿರ್ಮಾಣ ಕಾಮಗಾರಿಯನ್ನು ಸಂಸದರು ಪರಿಶೀಲಿಸಿದರು.

ಈ ವೇಳೆ ಪ್ರತಾಪ್ ಸಿಂಹ ಅವರಿಗೆ ಮಾಹಿತಿ ನೀಡಿದ ಆಯಿಷ್ ನಿರ್ದೇಶಕಿ ಡಾ. ಎಂ. ಪುಷ್ಪಾವತಿ ಅವರು, ಮಾತಿನ ತರಬೇತಿ ಪಡೆಯಲು ಬರುವ ಮಕ್ಕಳ ಪೋಷಕರು ಉಳಿದುಕೊಳ್ಳಲು ಸಂಸ್ಥೆ ಯಲ್ಲಿ ಸ್ಥಳಾವಕಾಶದ ಕೊರತೆ ಇರುವುದ ರಿಂದ ಕಾಫಿ ಬೋರ್ಡ್ ಪಕ್ಕದ 5 ಎಕರೆ ಜಾಗದಲ್ಲಿ ಕಟ್ಟಡ ನಿರ್ಮಿಸುತ್ತಿದ್ದೇವೆ. ಇದಲ್ಲದೆ ವರುಣಾ ಬಳಿ 10 ಎಕರೆ ಜಾಗ ಕೇಳಿಕೊಂಡಿದ್ದೇವೆ ಎಂದರು.

ಸಂಸದ ಪ್ರತಾಪ್ ಸಿಂಹ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಆಯಿಷ್, ಆವರಣದಲ್ಲಿ ನಿರ್ಮಿಸುತ್ತಿರುವ ಕಟ್ಟಡ ಕಾಮಗಾರಿಗಳು ಮೂರು ತಿಂಗ ಳೊಳಗಾಗಿ ಪೂರ್ಣಗೊಳ್ಳಲಿದ್ದು, ಉದ್ಘಾ ಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲು ಚಿಂತನೆ ನಡೆಸ ಲಾಗಿದೆ ಎಂದರು. ಶಾಸಕ ಎಲ್. ನಾಗೇಂದ್ರ, ಆಯಿಷ್‍ನ ಕೀರ್ತಿಕುಮಾರ್ ಹಾಗೂ ಇತರರು ಈ ವೇಳೆ ಇದ್ದರು.