ಮೈಸೂರು: ಸರಕು ವಾಹನಗಳಲ್ಲಿ ಅಕ್ರಮವಾಗಿ ಪ್ರಯಾಣಿಕ ರನ್ನು ಕೊಂಡೊಯ್ಯಬಾರದು ಹಾಗೂ ಆಟೋ -ವ್ಯಾನ್‍ಗಳಲ್ಲಿ ಸಾಮಥ್ರ್ಯಕ್ಕಿಂತ ಹೆಚ್ಚು ಶಾಲಾ ಮಕ್ಕಳನ್ನು ಕರೆದೊಯ್ಯ ಬಾರದು ಎಂದು ಅರಿವು ಮೂಡಿಸಲು ಸಂಚಾರ ಪೊಲೀಸರು ಸೋಮವಾರ ಮೈಸೂರಿನ ಪ್ರಮುಖ ರಸ್ತೆಗಳಲ್ಲಿ ಜಾಗೃತಿ ಜಾಥಾ ನಡೆಸಿದರು.
ಮೈಸೂರಿನ ವಿವಿಪುರಂ ಸಂಚಾರ ಠಾಣೆ ವತಿಯಿಂದ ಏರ್ಪಡಿಸಿದ್ದ ಜಾಗೃತಿ ಜಾಥಾಗೆ ಸಂಚಾರ ವಿಭಾಗದ ಎಸಿಪಿ ಜಿ.ಎನ್.ಮೋಹನ್ ಅವರು ಮೈಸೂರಿನ ಜಯಲಕ್ಷ್ಮಿಪುರಂನಲ್ಲಿರುವ ಮಹಾಜನ ಪ್ರೌಢಶಾಲೆ ಬಳಿ ಚಾಲನೆ ನೀಡಿದರು.
ಸರಕು ಸಾಗಾಣೆ ವಾಹನಗಳಲ್ಲಿ ಕಾರ್ಮಿ ಕರು ಹಾಗೂ ಪ್ರಯಾಣಿಕರನ್ನು ಕರೆ ದೊಯ್ಯುವುದು ಕಾನೂನುಬಾಹಿರವಾದು ದಾಗಿದ್ದು, ಅಪಘಾತಗಳು ಸಂಭವಿಸಿ ಅಮಾಯಕರ ಪ್ರಾಣಪಕ್ಷಿ ಹಾರಿ ಹೋಗು ತ್ತದೆ, ಅದೇ ರೀತಿ ಸಾಮಥ್ರ್ಯಕ್ಕಿಂತ ಹೆಚ್ಚು ಮಕ್ಕಳನ್ನು ಶಾಲೆಗಳಿಗೆ ಕರೆದೊಯ್ಯು ವುದು ಚಾಲಕನ ನಿಯಂತ್ರಣ ತಮ್ಮ ಆಟೋ, ಕ್ಯಾಬ್‍ಗಳು ಅಪಘಾತಕ್ಕೀ ಡಾಗುತ್ತದೆ ಎಂಬ ಸಂದೇಶವನ್ನು ಜಾಥಾದಲ್ಲಿ ಸಾರಲಾಯಿತು.
ವಿವಿಧ ಶಾಲೆಗಳ ಮಕ್ಕಳು, ಘೋಷಣಾ ಫಲಕ ಹಿಡಿದು ಜಯಲಕ್ಷ್ಮಿ ಪುರಂನ ಮಹಾಜನ ಚಿನ್ಮಯ ವಿದ್ಯಾ ಸಂಸ್ಥೆ ಸುತ್ತ, ಕಾಳಿದಾಸ ರಸ್ತೆ, ವಿವಿ. ಮೊಹಲ್ಲಾದ ಪಂಚವಟಿ ಸರ್ಕಲ್‍ಗಳಲ್ಲಿ ಜಾಥಾ ನಡೆಸಿ ಜನರಿಗೆ ಅರಿವು ಮೂಡಿಸಿದರು.
ವಿವಿಪುರಂ ಸಂಚಾರ ಠಾಣೆ ಇನ್ ಸ್ಪೆಕ್ಟರ್ ಬಿ.ಜಿ.ಪ್ರಕಾಶ್, ಸಿಬ್ಬಂದಿ ಹಾಗೂ ಶಾಲಾ ಮಕ್ಕಳು ಜಾಥಾದಲ್ಲಿ ಪಾಲ್ಗೊಂ ಡರು. ಮತ್ತೊಂದೆಡೆ ಎನ್.ಆರ್ ಸಂಚಾರ ಠಾಣೆ ಇನ್‍ಸ್ಪೆಕ್ಟರ್ ಯೋಗೇಶ್ ನೇತೃತ್ವದಲ್ಲಿ ಸಿಬ್ಬಂದಿಗಳು ಅಶೋಕ ರಸ್ತೆ, ಲಷ್ಕರ್ ಮೊಹಲ್ಲಾಗಳ ಪ್ರಮುಖ ರಸ್ತೆ ಗಳಲ್ಲಿ ಜಾಗೃತಿ ಮೂಡಿಸಿದರು.