ದಸರಾ ಗಜಪಡೆ ಪರಿವಾರಕ್ಕೆ ಬಾಲ್ಯವಿವಾಹ ತಡೆ ಕುರಿತು ಜಾಗೃತಿ ಕಾರ್ಯಕ್ರಮ

ಮೈಸೂರು, ಸೆ.26(ಎಂಟಿವೈ)- ಸಂಪ್ರ ದಾಯದ ಹೆಸರಿನಲ್ಲಿ ಹಾಡಿ ಹಾಗೂ ಕಾಡಂಚಿನ ಗ್ರಾಮಗಳಲ್ಲಿ ಬಾಲ್ಯ ವಿವಾಹ ಹೆಚ್ಚಾಗಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಗುರು ವಾರ ಅರಮನೆ ಆವರಣದಲ್ಲಿ ಬೀಡು ಬಿಟ್ಟಿ ರುವ ದಸರಾ ಗಜಪಡೆ ಮಾವುತರು, ಕಾವಾಡಿಗಳ ಕುಟುಂಬದ ಸದಸ್ಯರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿ ಯಿಂದ ಬಾಲ್ಯ ವಿವಾಹ ತಡೆ ಕುರಿತಂತೆ ಜಾಗೃತಿ ಕಾರ್ಯಕ್ರಮ ಆಯೋಜಿಸಿತ್ತು.

ಟೆಂಟ್ ಶಾಲೆಯಲ್ಲಿ ಇಂದು ಬೆಳಿಗ್ಗೆ ನಡೆದ ಜಾಗೃತಿ ಕಾರ್ಯಕ್ರಮಕ್ಕೆ ಮಾವು ತರು, ಕಾವಾಡಿಗಳ ಕುಟುಂಬದ ಮಹಿಳಾ ಸದಸ್ಯರನ್ನು ಆಹ್ವಾನಿಸಿ ಬಾಲ್ಯ ವಿವಾಹ ದಿಂದಾಗುವ ದುಷ್ಪರಿಣಾಮ ಕುರಿತಂತೆ ಅರಿವು ಮೂಡಿಸಲಾಯಿತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಕೆ.ಪದ್ಮ ಮಾತ ನಾಡಿ, ಬಾಲ್ಯ ವಿವಾಹ ತಡೆಗೆ ನಮ್ಮ ಇಲಾಖೆ ವತಿಯಿಂದ ಹಲವು ಕಾರ್ಯ ಕ್ರಮ ಹಮ್ಮಿಕೊಳ್ಳಲಾಗಿದೆ.

ಆದರೂ ಕಾಡಂಚಿನ ಗ್ರಾಮ, ಹಾಡಿ ಗಳಲ್ಲಿ ಬಾಲ್ಯ ವಿವಾಹ ನಡೆಯುತ್ತಿರುವ ಬಗ್ಗೆ ಮಾಹಿತಿ ಇದೆ. ಬಾಲ್ಯ ವಿವಾಹ ವಾದರೆ ಅನೇಕ ಸಮಸ್ಯೆಗೆ ತುತ್ತಾಗಲಿದ್ದಾರೆ. ಇದರಿಂದ ಇಡೀ ಕುಟುಂಬವೇ ತೊಂದ ರೆಗೆ ಸಿಲುಕುವ ಸಾಧ್ಯತೆ ಇದೆ.

ಹಾಡಿಗಳಲ್ಲಿ ವಾಸಿಸುವ ಬುಡಕಟ್ಟು ಜನಾಂಗದವರು ಸಂಪ್ರದಾಯ ಹೆಸರಿನಲ್ಲಿ ತಮ್ಮ ಹೆಣ್ಣು ಮಕ್ಕಳಿಗೆ 18 ವರ್ಷ ತುಂಬುವ ಮುನ್ನವೇ ವಿವಾಹ ಮಾಡುತ್ತಿದ್ದಾರೆ. ಇದು ಶಿಕ್ಷಾರ್ಹ ಅಪರಾಧವೂ ಆಗಿದೆ. ಶಿಕ್ಷಣ ವನ್ನು ಮೊಟಕುಗೊಳಿಸಿ ಚಿಕ್ಕ ವಯಸ್ಸಿನಲ್ಲಿ ಮದುವೆ ಮಾಡುವುದು ಸರಿಯಲ್ಲ. ಇದರಿಂದ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅವರ ಗರ್ಭಾ ವಸ್ಥೆಯು ಬೆಳವಣಿಗೆಯಾಗದೆ ಅನಾ ರೋಗ್ಯ ಪೀಡಿತ ಮಕ್ಕಳ ಜನನವಾಗುತ್ತದೆ ಎಂದು ವಿಷಾದಿಸಿದರು.

ಹೆಣ್ಣು ಮಕ್ಕಳಿಗೆ 18 ವರ್ಷ ಹಾಗೂ ಗಂಡು ಮಕ್ಕಳಿಗೆ 21 ವರ್ಷ ತುಂಬಿದ ನಂತರ ಅವರಿಗೆ ಮದುವೆ ಮಾಡಬೇಕು. ಅದಕ್ಕಿಂತ ಚಿಕ್ಕ ವಯಸ್ಸಿನಲ್ಲಿ ಮದುವೆ ಮಾಡಿದರೆ ಅದು ಕಾನೂನು ಪ್ರಕಾರ ತಪ್ಪಾಗುತ್ತದೆ. 1098 ಉಚಿತ ಸಹಾಯ ವಾಣಿಗೆ ಕರೆ ಮಾಡಿದರೆ ಬಾಲ್ಯ ವಿವಾಹ ತಡೆದು ಆ ಮಕ್ಕಳನ್ನು ರಕ್ಷಣೆ ಮಾಡ ಲಾಗುವುದು . ಹೆಣ್ಣು ಮಕ್ಕಳನ್ನು ಮನೆ ಕೆಲಸಕ್ಕೆ ಹಾಕಿಕೊಳ್ಳದೆ ಅವರಿಗೆ ಶಿಕ್ಷಣ ವನ್ನು ನೀಡುವ ಕೆಲಸವನ್ನು ಪೆÇೀಷಕರು ಮಾಡಬೇಕು ಎಂದು ಕೆ.ಪದ್ಮ ಅವರು ಮನವರಿಕೆ ಮಾಡಿಕೊಟ್ಟರು.

ಹೆಚ್.ಡಿ.ಕೋಟೆ ಮತ್ತು ಹುಣಸೂರಿನ ಹಾಡಿಗಳಲ್ಲಿ ಬಾಲ್ಯ ವಿವಾಹಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತವೆ. ಆ ಕಾರಣದಿಂದ ಇಲಾಖೆಯ ವತಿಯಿಂದ ಆ ಭಾಗದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗು ತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಹಿಳಾ ಅಭಿ ವೃದ್ಧಿ ನಿರೀಕ್ಷಕಿ ನಿರ್ಮಲಾ, ಟೆಂಟ್ ಶಾಲೆ ನೋಡಲ್ ಅಧಿಕಾರಿ ಕುಸುಮ, ಶಿಕ್ಷಕ ರಾದ ಡಿ.ನಾಗೇಂದ್ರ, ಬವರಾಜು, ಸುಬ್ಬ ಲಕ್ಷ್ಮೀ, ಮಹಿಳಾ ಮತ್ತು ಮಕ್ಕಳ ಅಭಿ ವೃದ್ಧಿ ಇಲಾಖೆಯ ಸಿಬ್ಬಂದಿ ಶ್ಯಾಮಲಾ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು