ಬಹುರೂಪಿಗೆ ಬಹುಪರಾಕ್

ಮೈಸೂರು,ಫೆ.19(ಎಂಕೆ)- ಬಹು ವರ್ಣೀಯ ‘ಬಹುರೂಪಿ’ ಅದ್ಭುತ… ಸೊಗಸಾದ ವ್ಯವಸ್ಥೆ, ಸಮರ್ಪಕ ನಿರ್ವ ಹಣೆ… ಕಳೆದ ವರ್ಷಕ್ಕಿಂತ ಈ ಬಾರಿಯ ಬಹುರೂಪಿ ಬಲು ಆಕರ್ಷಕ… ಮುಂದಿನ ವರ್ಷವೂ ಬರುತ್ತೇವೆ…

ಮೈಸೂರಿನ ರಂಗಾಯಣದಲ್ಲಿ ಆಯೋ ಜಿಸಿದ್ದ 6 ದಿನಗಳ ‘ಬಹುರೂಪಿ’ ರಾಷ್ಟ್ರೀಯ ನಾಟಕೋತ್ಸವಕ್ಕೆ ಭೇಟಿ ನೀಡಿದ ರಂಗಾ ಸಕ್ತರು, ಕಲಾವಿದರು ಮತ್ತು ಮಳಿಗೆ ದಾರರ ಹರ್ಷಭರಿತ ಮಾತುಗಳಿವು.

ಗಾಂಧಿ ಪಥ ಶೀರ್ಷಿಕೆಯ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದಲ್ಲಿ ಪ್ರಸಿದ್ಧ ನಾಟಕಗಳ ಪ್ರದರ್ಶನ, ಚಲನ ಚಿತ್ರೋ ತ್ಸವ, ಜನಪದೋತ್ಸವ ಮತ್ತಿತರೆ ಸಾಂಸ್ಕøತಿಕ ಕಾರ್ಯಕ್ರಮಗಳು ಕಲಾಭಿಮಾನಿಗಳ ದಂಡೇ ರಂಗಾಯಣದತ್ತ ಮುಖಮಾಡು ವಂತೆ ಮಾಡಿತು.

ದೇಶ-ವಿದೇಶ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ತಂಡೋಪತಂಡವಾಗಿ ಆಗ ಮಿಸಿದ ರಂಗಭೂಮಿಯ ಅಭಿಮಾನಿ ಗಳು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಕಂಡು ಸಂಭ್ರಮಿಸಿದರು.

ಮೈಸೂರಿನ ಜಯನಗರದಲ್ಲಿ ನೆಲೆಸಿ ರುವ ಧಾರವಾಡ ಮೂಲದ 70 ವರ್ಷದ ಎಸ್.ಎ.ಮಂಜುಳ ಅವರು ‘ಬಹುರೂಪಿ’ ಕಳೆದ ವರ್ಷಕ್ಕಿಂತ ಮಸ್ತ್ ಇದೆ. ನಾಟಕ ಹಾಗೂ ಜಾನಪದ ನೃತ್ಯಗಳನ್ನು ನೋಡಿ ದೆವು. ಪಂಜಾಬಿ ಡ್ರೆಸ್, ಪರ್ಸ್ ಖರೀ ದಿಸಿದೆವು ಎಂದರು.

ಕೈಮಗ್ಗ, ಹತ್ತಿಬಟ್ಟೆಗಳ ದೇಶಿ ಮಳಿಗೆಯ ಸುನಿತಾ, 7 ವರ್ಷದಿಂದ ಬಹುರೂಪಿ ಯಲ್ಲಿ ಮಳಿಗೆ ಹಾಕುತ್ತಿದ್ದೇವೆ. ಹಿಂದಿನ ವರ್ಷಗಳಲ್ಲಿ ಶನಿವಾರ ಮತ್ತು ಭಾನು ವಾರ ಮಾತ್ರದ ಜನಸಂದಣಿ ಕಾಣುತ್ತಿತ್ತು. ಆದರೆ, ಈ ವರ್ಷ 6 ದಿನವೂ ಜನರ ಸ್ಪಂದನೆ ಉತ್ತಮವಾಗಿತ್ತು. ಈ ಬಾರಿ ಒಳ್ಳೆಯ ವ್ಯಾಪಾರವಾಗಿದೆ ಎಂದು ತಿಪಟೂರಿನ ಕಲಾವಿದೆ ಪಲ್ಲವಿ ಹರ್ಷ ವ್ಯಕ್ತಪಡಿಸಿದರು.

ಜೋಳದ ರೊಟ್ಟಿ, ಎಣ್‍ಗಾಯಿ ಪಲ್ಯ ಮತ್ತು ಗಿರಿಮಿಟ್ಟು ಅಂಗಡಿ ತೆರೆದಿದ್ದ ಹುಬ್ಬಳ್ಳಿ ಮೂಲದ ಐಶ್ವರ್ಯ ಮತ್ತು ಬಸವರಾಜು, `ಬಿಸಿನೆಸ್ ಜೋರಾಗಿದೆ. ಗಿರಿಮಿಟ್ಟು ತಿಂದವರೇ ಜಾಸ್ತಿ. ರಂಗಾ ಯಣ ಸಿಬ್ಬಂದಿ ಸೊಗಸಾಗಿ ನಿರ್ವಹಣೆ ಮಾಡಿದ್ದಾರೆ. ಸ್ವಚ್ಛತೆಗೆ ಆದ್ಯತೆ ನೀಡಿ ದ್ದಾರೆ ಎಂದು ಪ್ರಶಂಸಿಸಿದರು.