ಪರಿಸರ ಸಂರಕ್ಷಣೆಗಾಗಿ ಬಿಎಐ ಬ್ಲ್ಯೂ ಸ್ಯಾಂಡ್ ಗ್ರೀನ್ ಮ್ಯಾರಥಾನ್

ಮೈಸೂರು: ವಿಶ್ವ ಪರಿಸರ ದಿನದ ಹಿನ್ನೆಲೆಯಲ್ಲಿ ಬಿಲ್ಡರ್ ಅಸೋಸಿಯೇಷನ್ ಆಫ್ ಇಂಡಿಯಾ (ಬಿಎಐ) ಮೈಸೂರು ಘಟಕ ಭಾನುವಾರ ಹಮ್ಮಿಕೊಂಡಿರುವ ಬಿಎಐ ಬ್ಲ್ಯೂ ಸ್ಯಾಂಡ್ ಗ್ರೀನ್ ಮ್ಯಾರಥಾನ್‍ನಲ್ಲಿ 400ಕ್ಕೂ ಹೆಚ್ಚು ಮಂದಿ ಪಾಲ್ಗೊಂಡು ಗಮನ ಸೆಳೆದರು.

ಬಿಲ್ಡರ್ಸ್ ಅಸೋಸಿಯೇಷನ್ ಮೈಸೂರು ಘಟಕ ಪರಿಸರ ಮಾಸಾಚರಣೆ ಆಚರಿ ಸುತ್ತಿದ್ದು, ಪರಿಸರ ಸಂರಕ್ಷಣೆಗೆ ಪೂರಕ ವಾದ ವಿವಿಧ ಕಾರ್ಯಕ್ರಮ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಜನರಲ್ಲಿ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲು ಭಾನುವಾರ 5 ಮತ್ತು 10 ಕಿ.ಮೀ ಮ್ಯಾರ ಥಾನ್ ಅನ್ನು ಮಹಿಳೆಯರು ಹಾಗೂ ಪುರುಷರಿಗಾಗಿ ಪ್ರತ್ಯೇಕ ವಿಭಾಗದಲ್ಲಿ ಆಯೋಜಿಸಲಾಗಿತ್ತು.

ಮೈಸೂರು ವಿವಿಯ ಬಯಲು ರಂಗ ಮಂದಿರದ ಬಳಿ ನಡೆದ 10 ಕಿ.ಮೀ ಮ್ಯಾರ ಥಾನ್ ಅನ್ನು ಮೈಸೂರು ವಿಶ್ವವಿದ್ಯಾ ಲಯ ಕುಲಪತಿ ಪೆÇ್ರ.ಜಿ.ಹೇಮಂತ್ ಕುಮಾರ್ ಹಾಗೂ 5 ಕಿ.ಮಿ. ದೂರದ ಮ್ಯಾರಥಾನ್ ಅನ್ನು ನಗರ ಪೆÇಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ನಿಶಾನೆ ಪ್ರದರ್ಶಿಸುವ ಮೂಲಕ ಚಾಲನೆ ನೀಡಿ, ಶುಭ ಕೋರಿದರು. ವಿವಿಧ ವಯೋಮಾನದ 412ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದ ಮ್ಯಾರಥಾನ್ ಬಯಲು ರಂಗಮಂದಿರ ದಿಂದ ಆರಂಭವಾಗಿ ವಿವಿ ಕ್ಯಾಂಪಸ್, ಗಂಗೋತ್ರಿ ಕ್ಲಾಕ್ ಟವರ್, ಎಸ್‍ಜೆಸಿಇ ರಸ್ತೆ, ಎಸ್‍ಜೆಸಿಇ ರಸ್ತೆ, ಬೋಗಾದಿ ರಸ್ತೆ ಹಾಗೂ ಇನ್ನಿತರೆ ರಸ್ತೆಗಳಲ್ಲಿ ಸಂಚ ರಿಸಿ ಬಯಲು ರಂಗಮಂದಿರ ತಲುಪಿತು.

ವಿಜೇತರು: ಪುರುಷರ ವಿಭಾಗದ 5 ಕೀ.ಮಿ ಮ್ಯಾರಥಾನ್ ಕೆ.ಎ.ಭರತ್ ಪ್ರಥಮ, ಲಕ್ಷ್ಮಣ್ ದ್ವಿತೀಯ, ಹೆಚ್.ಡಿ. ರಾಮ್ ತೃತೀಯ ಬಹುಮಾನ ಪಡೆದರು. ಮಹಿಳೆಯರ ವಿಭಾಗದಲ್ಲಿ ಓಟಗಾರ್ತಿ ತಿಪ್ಪವ್ವ ಸಣ್ಣಕ್ಕಿ ಪ್ರಥಮ, ಪ್ರಿಯಾಂಕ ಗೋಪಿ ದ್ವಿತೀಯ ಹಾಗೂ ಜಿ.ದಿಶಾ ಮೂರನೇ ಸ್ಥಾನ ಪಡೆದು ಗಮನ ಸೆಳೆದರು. ಮೊದಲ ಮೂರು ಸ್ಥಾನ ಪಡೆದ ವಿಜೇತರಿಗೆ ಕ್ರಮವಾಗಿ ಐದು ಸಾವಿರ ರೂ., ಮೂರು ಸಾವಿರ ರೂ. ಹಾಗೂ ಎರಡು ಸಾವಿರ ರೂ. ನಗದು ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸಲಾಯಿತು.

ಪುರುಷರ ವಿಭಾಗದಲ್ಲಿ 10 ಕಿ.ಮೀ. ಮ್ಯಾರಥಾನ್‍ನಲ್ಲಿ ರಾಹುಲ್ ಪ್ರಥಮ, ನಿರ್ಮಿತ್ ದ್ವಿತೀಯ, ಕೆ.ಕೆ.ವೆಂಕಟೇಶ್ ತೃತೀಯ ಸ್ಥಾನ ಪಡೆದರು. ಮಹಿಳಾ ವಿಭಾಗದಲ್ಲಿ ಕೆ.ಎಂ.ಅರ್ಚನ ಪ್ರಥಮ, ಟಿ.ಪಿ.ಆಶಾ ದ್ವಿತೀಯ, ಹಾಗೂ ಜಿ.ಡಿ. ರಂಜಿತ್ ತೃತೀಯ ಬಹುಮಾನ ಪಡೆ ದರು. ಈ ವಿಭಾಗದಲ್ಲಿ ಪ್ರಥಮ ಮೂರು ಸ್ಥಾನ ಪಡೆದವರಿಗೆ ಕ್ರಮವಾಗಿ ಏಳು ಸಾವಿರ, 4 ಸಾವಿರ ಹಾಗೂ ಎರಡು ಸಾವಿರ ರೂ. ನಗದು ಬಹುಮಾನ, ಮೆಡಲ್ ಮತ್ತು ಪ್ರಮಾಣ ನೀಡಲಾಯಿತು.

ಈ ಸಂದರ್ಭದಲ್ಲಿ ಮ್ಯಾರಥಾನ್ ಆಯೋಜನ ಸಮಿತಿಯ ಅಧ್ಯಕ್ಷ ಬಿ.ಎಸ್. ದಿನೇಶ್, ಬಿಲ್ಡರ್ ಅಸೋ ಸಿಯೇಷನ್ ಆಫ್ ಇಂಡಿಯಾ ಮೈಸೂರು ಘಟಕದ ಅಧ್ಯಕ್ಷ ನೈಧ್ರುವ, ಉಪಾಧ್ಯಕ್ಷ ರತ್ನರಾಜ್, ಕಾರ್ಯದರ್ಶಿ ಆರ್.ರಂಗನಾಥ್ ಹಾಗೂ ಪದಾಧಿ ಕಾರಿಗಳು ಉಪಸ್ಥಿತರಿದ್ದರು.