ಬಾರ್ ನೌಕರ ಆತ್ಮಹತ್ಯೆ

ಸೋಮವಾರಪೇಟೆ: ಬಾರ್‍ನಲ್ಲಿ ಕೆಲಸ ನಿರ್ವಹಿ ಸುತ್ತಿದ್ದ ಯುವಕ ನೋರ್ವ ಶೌಚಾ ಲಯದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿ ಕೊಂಡಿರುವ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ.

ಮಾದಾಪುರ ಮೂವತ್ತೊಕ್ಲು ಗ್ರಾಮದ ತಂಬುಕುತ್ತಿರ ಮಂದಣ್ಣ ಎಂಬುವರ ಪುತ್ರ ಬೋಪಣ್ಣ(28) ಮೃತ ವ್ಯಕ್ತಿ. ಮಡಿ ಕೇರಿ ರಸ್ತೆಯಲ್ಲಿರುವ ಸಫಾಲಿ ಬಾರ್‍ನಲ್ಲಿ ಕಳೆದ 10 ವರ್ಷಗಳಿಂದ ಬೋಪಣ್ಣ ಸಪ್ಲೈಯರ್ ಕೆಲಸ ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಎಂದಿನಂತೆ ಮಂಗಳವಾರ ಕೆಲಸ ನಿರ್ವಹಿಸಿದ್ದಾರೆ. ಆದರೆ ಬುಧ ವಾರ ಬೆಳಿಗ್ಗೆ ನೋಡಿದಾಗ ಶೌಚಾಲ ಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ದೊರೆತಿದೆ. ಸ್ಥಳಕ್ಕೆ ತೆರಳಿದ ಪೊಲೀಸರು ಮಹಜರು ನಡೆಸಿದ್ದಾರೆ. ಮೃತ ಯುವಕ ಮಾನಸಿಕ ರೋಗದಿಂದ ಬಳಲುತ್ತಿದ್ದು, ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ತನಿಖಾಧಿಕಾರಿ ಎಸ್ಸೈ ಶಿವ ಶಂಕರ್ ಶಂಕೆ ವ್ಯಕ್ತಪಡಿಸಿದ್ದಾರೆ.