ಮೈಸೂರು: ಸರಸ್ವತಿಪುರಂ ನಲ್ಲಿರುವ ಜ್ಞಾನೋದಯ ಪದವಿ ಪೂರ್ವ ಕಾಲೇಜಿನಲ್ಲಿ ಮೇ 7 ರಂದು ಬಸವ ಜಯಂತಿಯನ್ನು ಆಚರಿಸ ಲಾಯಿತು. ಬಸವಣ್ಣನವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕಾಲೇ ಜಿನ ಪ್ರಾಂಶುಪಾಲರಾದ ಟಿ.ಎಸ್. ಶ್ರೀಕಂಠ ಶರ್ಮ, ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ವಿದ್ಯಾರ್ಥಿಗಳಿಗೆ ಬಸವಜಯಂತಿಯ ಮಹತ್ವವನ್ನು ತಿಳಿಸಿಕೊಟ್ಟರು. 12ನೇ ಶತಮಾನದಲ್ಲಿ ರಚಿತವಾದ ಬಸವಣ್ಣನವರ ವಚನಗಳು ಕನ್ನಡ ಸಾಹಿತ್ಯಕ್ಕೆ ದೈವಿಕ ನೆಲೆಗಟ್ಟನ್ನು ಒದಗಿಸಿಕೊಟ್ಟಿದೆಯಲ್ಲದೆ, 800 ವರ್ಷಗಳ ಹಿನ್ನೆಲೆಯನ್ನೊಳಗೊಂಡ ಈ ವಚನಗಳು ಇಂದಿಗೂ ಜನ ಸಾಮಾನ್ಯರು ಸುಲಭವಾಗಿ ಅನುಸರಿಸಬಹುದಾದ ಜೀವನ ಕ್ರಮವನ್ನು ತಿಳಿಸಿಕೊಡುತ್ತದೆ ಎಂಬುದನ್ನು ಬಸವಣ್ಣನವರ ಪ್ರಸಿದ್ಧ ವಚನಗಳ ಮೂಲಕ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಈ ಸಂದರ್ಭದಲ್ಲಿ ಕಾಲೇಜಿನ ಉಪ ಪ್ರಾಂಶುಪಾಲರಾದ ಶ್ರೀಮತಿ ಪದ್ಮಾರವಿ ಮತ್ತು ಬೋಧಕ, ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.