ಅರಸೀಕೆರೆ: ಮಹಾನ್ ಪುರು ಷರ ಸಾಲಿನಲ್ಲಿ ಬಸವಣ್ಣ ಅವರನ್ನು ಗೌರವಿ ಸುವುದರ ಮೂಲಕ ವಿಶ್ವದ ಅನೇಕ ದೇಶ ಗಳು ಅವರ ವಚನ ಸಾಹಿತ್ಯಗಳನ್ನು ಒಪ್ಪಿ ಕೊಂಡಿದೆ. ಇದರಿಂದ ಭಾರತಕ್ಕೆ ವಿಶೇಷ ಸ್ಥಾನಗಳನ್ನು ನೀಡುತ್ತಿರುವುದು ಬಸ ವಣ್ಣನವರ ವಿಶ್ವ ಮಾನ್ಯತೆ ತೋರಿಸುತ್ತದೆ ಎಂದು ತಹಶೀಲ್ದಾರ್ ಸಂತೋಷ್ ಕುಮಾರ್ ಹೇಳಿದರು.
ನಗರದ ತಾಲೂಕು ಕಚೇರಿಯಲ್ಲಿ ಹಮ್ಮಿ ಕೊಂಡಿದ್ದ ಕಾಯಕಯೋಗಿ ಜಯಂತಿ ಮಹೋತ್ಸವದಲ್ಲಿ ಬಸವಣ್ಣನವರ ಭಾವ ಚಿತ್ರಕ್ಕೆ ಪುಷ್ಪ್ಪನಮನ ಸಲ್ಲಿಸಿ ಮಾತನಾಡಿದ ಅವರು, 12ನೇ ಶತಮಾನದಲ್ಲೇ ಬಸವಣ್ಣ ನವರು ಜಾತಿ, ಮತ ಲಿಂಗಭೇದವನ್ನು ತಿರ ಸ್ಕರಿಸಿ ಸಾಮಾಜಿಕ ಕ್ರಾಂತಿಗೆ ಕಾರಣವಾಗಿ ದ್ದರು, ಮಾನವೀಯತೆ, ಕಾಯಕ ನಿಷ್ಠೆ ಧರ್ಮದ ಬುನಾದಿಯಾಗಬೇಕು ಎಂದು ಬಲವಾಗಿ ನಂಬಿದ್ದರು ಎಂದರು.
ಜನರಲ್ಲಿ ಮನೆ ಮಾಡಿಕೊಂಡಿದ್ದ ಮೌಢ್ಯತೆ, ಕಂದಾಚಾರ, ಜಾತೀಯತೆಯ ವಿರುದ್ಧ ಹೋರಾಡಿದವರು ಬಸವಣ್ಣನವರು. ಬಿಜ್ಜ ಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದ ಬಸವಣ್ಣ ನವರು ಜನಪರ ಯೋಜನೆಗಳ ಮೂಲಕ ಸಮಾಜಕ್ಕೆ ಸ್ಪಂದಿಸುವ ಕಾರ್ಯ ಮಾಡು ತ್ತಿದ್ದರು. ಇವರ ಆದರ್ಶಗಳು ಇಂದಿಗೂ ಸಮಾಜಕ್ಕೆ ಪ್ರಸ್ತುತವಾಗಿದೆ. ತಮ್ಮ ವಚನ ಗಳ ಮೂಲಕ ಕಾಯಕವೇ ಕೈಲಾಸ, ದಯವೇ ಧರ್ಮದ ಮೂಲವಯ್ಯ, ಅಯ್ಯಾ ಎಂದರೆ ಸ್ವರ್ಗ ಎಲವೋ ಎಂದರೇ ನರಕ ಎಂದು ಸಾರುವ ಮೂಲಕ ತಮ್ಮ ಮಾನ ವಾತಾ ವಾದಕ್ಕೆ ಸಾಹಿತ್ಯದ ಸ್ಪರ್ಶ ನೀಡಿ ದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪತಹಶೀಲ್ದಾರ್ ಫಾಲಾಕ್ಷ, ಬಿಆರ್‍ಸಿ ಗಂಗಾಧರ್, ಶಿರಸ್ತೇ ದಾರ್ ಪುಟ್ಟಯ್ಯ, ರಾಜಸ್ವ ಮಂಜು ನಾಥ್, ರಂಗನಾಥ್, ಮುಖಂಡರಾದ ಯೋಗೀಶ್, ಗುರು, ಸಿದ್ದೇಶ್, ರಕ್ಷಾ ಸಮಿತಿ ಸದಸ್ಯ ಎನ್.ಜಿ.ಮಧು ಸೇರಿದಂತೆ ಇನ್ನಿತರೇ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.