ಛಲ ಬೇಕು ಶರಣಂಗೆ ಪರಧನವನೊಲ್ಲೆನೆಂಬ.. ಛಲ ಬೇಕು ಶರಣಂಗೆ ಪರಸತಿಯನೊಲ್ಲೆನೆಂಬ…

ಮೈಸೂರು: ಛಲ ಬೇಕು ಶರಣಂಗೆ ಪರಧನವನೊಲ್ಲೆನೆಂಬ, ಛಲ ಬೇಕು ಶರಣಂಗೆ ಪರಸತಿಯನೊಲ್ಲೆ ನೆಂಬ, ಛಲ ಬೇಕು ಶರಣಂಗೆ ಪರದೈವನೊಲ್ಲೆನೆಂಬ, ಛಲ ಬೇಕು ಶರಣಂಗೆ ಲಿಂಗ ಜಂಗಮ ಒಂದೇ ಎಂಬ, ಛಲಬೇಕು ಶರಣಂಗೆ ಪ್ರಸಾದ ದಿಟವೆಂಬ, ಛಲವಿಲ್ಲದವರ ಮೆಚ್ಚ ನಮ್ಮ ಕೂಡಲ ಸಂಗಮದೇವ.

ಇವನಾರವ.. ಇವನಾರವ, ಇವ ನಮ್ಮವ.. ಇವ ನಮ್ಮವ. ಬಸವಣ್ಣನವರ ಈ ಸಿದ್ಧಾಂತವನ್ನು ನೀವು ಒಪ್ಪಿದ್ದರೆ ಬಸವ ಜಯಂತಿ ಆಚರಿಸಿ, ಇಲ್ಲವಾದರೆ ಅದಕ್ಕೆ ವಿರುದ್ಧವಾಗಿ ಬಸವ ಜಯಂತಿ ಆಚರಿಸಿ, ಅವರಿಗೆ ಅಪಮಾನ ಮಾಡ ಬೇಡಿ. ಬಸವ ತತ್ವ, ಸಿದ್ಧಾಂತ ಪಾಲಿಸದಿ ದ್ದರೆ ಬಸವ ಜಯಂತಿ ಆಚರಣೆ ಖಂಡಿತ ಮಾಡಬೇಡಿ.

ಹೀಗೆಂದು ವಚನ ಪಾಠ ಹೇಳಿದವರು ಮಾಜಿ ಶಾಸಕ, ಹಿರಿಯ ಕನ್ನಡ ಚಳವಳಿ ನಾಯಕ ವಾಟಾಳ್ ನಾಗರಾಜ್. ಮೈಸೂರು ಶರಣ ಮಂಡಳಿ ಜೆಎಸ್‍ಎಸ್ ಆಸ್ಪತ್ರೆ ಆವರಣದ ಶಿವರಾತ್ರಿ ರಾಜೇಂದ್ರ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಬಸವ ಜಯಂತಿ ಹಾಗೂ ಬಸವರತ್ನ ಪ್ರಶಸ್ತಿ ಪ್ರಧಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬಸವ ಜಯಂತಿ ಆಚರಿಸುವವರು ಪ್ರಾಮಾ ಣಿಕರಾಗಿರಬೇಕು. ನಾವು ಬಸವಣ್ಣನ ತತ್ವಗಳನ್ನು ಪ್ರಾಮಾಣಿಕವಾಗಿ ಪಾಲಿಸುತ್ತಿ ದ್ದೇವೆಯೇ ಎಂದು ಮೊದಲು ನಮ್ಮ ಆತ್ಮ ಮುಟ್ಟಿ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

18ನೇ ಶತಮಾನದಲ್ಲಿಯೇ ಕಲ್ಯಾಣ ಕ್ರಾಂತಿ ಮಾಡಿದ ಮಹಾಪುರುಷ ಬಸ ವಣ್ಣ. ಕಳಬೇಡ, ಕೊಲಬೇಡ ಎಂಬ ವಚನದಲ್ಲಿ ಜಾತಿ ಇದೆಯೇ? ಜಾತಿ ಬಿಟ್ಟರಷ್ಟೇ ಬಸವ ಜಯಂತಿಗೆ ಅರ್ಥ. ಜಾತಿ ಇಟ್ಟುಕೊಂಡು ಬಸವ ಜಯಂತಿ ಆಚರಣೆಗೆ ಅರ್ಥವಿಲ್ಲ. ಅದು ಬಸವಣ್ಣನ ವರಿಗೆ ಮಾಡುವ ಅಪಚಾರವಾಗುತ್ತದೆ ಎಂದು ಹೇಳಿದರು.
ಮುಂದಿನ ತಿಂಗಳು ಬಸವ ರಥ: ಈ ನಾಡಿಗೆ ಬಸವತತ್ವ ಸಿದ್ಧಾಂತ ಮುಖ್ಯವೇ ಹೊರತು ಜಾತಿಗಳಲ್ಲ. `ಜಾತಿ ಬಿಡಿ, ಬಸವ ತತ್ವ ಅನುಸರಿಸಿ’ ಎಂಬ ಸಂದೇಶ ಸಾರಲು ಮುಂದಿನ ತಿಂಗಳು ರಾಜ್ಯಾ ದ್ಯಂತ ಬಸವ ರಥ ಹೊರಡಿಸಲಿದ್ದು, ಈ ರಥ ಬೀದರ್‍ನಿಂದ ಚಾಮರಾಜ ನಗರದವರೆಗೆ ರಾಜ್ಯದ ಉದ್ದಗಲಕ್ಕೂ ಯಾತ್ರೆ ಕೈಗೊಂಡು ಬಸವ ತತ್ವ ಸಂದೇಶ ವನ್ನು ಸಾರಲಿದೆ ಎಂದರು.

ವಿವಿಧ ಕ್ಷೇತ್ರ ಸಾಧಕರಿಗೆ `ಬಸವ ರತ್ನ’ ಪ್ರಶಸ್ತಿ ವಿತರಣೆ
ಮೈಸೂರು: ಬಸವ ಜಯಂತಿ ಅಂಗ ವಾಗಿ ಮೈಸೂರು ಶರಣ ಮಂಡಳಿಯು ವಿವಿಧ ಕ್ಷೇತ್ರಗಳಲ್ಲಿ ಸಾರ್ಥಕ ಸೇವೆ ಸಲ್ಲಿಸಿರುವ ಐದು ಮಂದಿಗೆ `ಬಸವ ರತ್ನ’ ಪ್ರಶಸ್ತಿ ನೀಡಿ ಗೌರವಿಸಿತು.

ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆ ಆವರಣದ ಡಾ.ಶಿವರಾತ್ರಿ ರಾಜೇಂದ್ರ ಸಭಾಂಗಣದಲ್ಲಿ ಬುಧವಾರ ಮೈಸೂರಿನ ಜಯ ದೇವ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ.ಕೆ.ಎಸ್.ಸದಾನಂದ, ರಾಜಶೇಖರ ಫೌಂಡೇಷನ್ ಆಸ್ಪತ್ರೆಯ ಮುಖ್ಯಸ್ಥ ಡಾ.ಹೆಚ್.ಬಿ. ರಾಜಶೇಖರ್, ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ ಪ್ರಕಾಶನ ಸಂಸ್ಥೆಯ ಟಿ.ಎಸ್.ಛಾಯಾಪತಿ, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಹೆಚ್.ಕೆ.ರಾಮು, ಕರ್ನಾಟಕ ಆಡಳಿತ ಸೇವೆ ಅಧಿಕಾರಿ ಜಿ.ಎಸ್.ಮಮತಾದೇವಿ ಅವರಿಗೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಮಾಜಿ ಶಾಸಕ, ಕನ್ನಡ ಚಳವಳಿ ನಾಯಕ ವಾಟಾಳ್ ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ವಾಸು, ಮಾನಸಗಂಗೋತ್ರಿ ಗಣಕ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಪ್ರೊ.ಡಿ.ಎಸ್.ಗುರು ಪ್ರಧಾನ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಮೈಸೂರು ಶರಣ ಮಂಡಳಿಯ ಅಧ್ಯಕ್ಷ ಮೂಗೂರು ನಂಜುಂಡಸ್ವಾಮಿ, ಪ್ರಧಾನ ಸಂಚಾಲಕ ಎಂ.ಚಂದ್ರಶೇಖರ್, ಉಪಾಧ್ಯಕ್ಷ ಎಂ.ಕೆ.ನಾಗೇಂದ್ರಸ್ವಾಮಿ, ಕಾರ್ಯದರ್ಶಿ ಮಹದೇವಸ್ವಾಮಿ, ಬಿ.ಮಹದೇವಸ್ವಾಮಿ, ಎಂ.ಮಲ್ಲಣ್ಣ, ಟಿ.ಎಂ.ಮಧುಕರ್, ಎಂ.ಪಿ.ಮಹದೇವಶೆಟ್ಟಿ, ಡಿ.ಬಿ.ಯಶವಂತಗುರು, ಬಿ.ಎಸ್.ಕಾಶಿನಾಥ್, ಎಂ.ಎಲ್. ನಾಗೇಂದ್ರಸ್ವಾಮಿ ಇನ್ನಿತರರು ಉಪಸ್ಥಿತರಿದ್ದರು.