ಮೈಸೂರು: ಮೈಸೂರಿನ ಜೆಸಿಇ ಬ್ಯಾಸ್ಕೆಟ್ ಬಾಲ್ ಕ್ರೀಡಾಂ ಗಣದಲ್ಲಿ ವಿಶೇಷಚೇತನ ಬ್ಯಾಸ್ಕೆಟ್ ಬಾಲ್ ಆಟಗಾರರಿಗೆ ಉಚಿತ ತರಬೇತಿ ನೀಡ ಲಾಗಿದ್ದು, ತರಬೇತಿ ನೀಡಿದ ತರಬೇತಿದಾರ ಕರ್ನಾಟಕ ರಾಜ್ಯ ವೀಲ್ ಚೇರ್ ಬ್ಯಾಸ್ಕೆಟ್ ಬಾಲ್ ಅಸೋಸಿಯೇಷನ್ ಉಪಾಧ್ಯಕ್ಷ ಮಹೇಶ್‍ಕುಮಾರ್ ಅವರಿಗೆ ಅಭಿವೃದ್ಧಿ ಸಂಘಟನೆ ಮತ್ತು ವಿಶೇಷ ಚೇತನರ ಸಂಗ್ರಾಮ ಪರಿಷತ್ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಮೂಲತಃ ತಮಿಳುನಾಡಿನವ ರಾದ ತಾವು ಕರ್ನಾಟಕದಲ್ಲಿ ಇದ್ದು, ರಾಷ್ಟ್ರಮಟ್ಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸು ವುದಲ್ಲದೇ ರಾಜ್ಯಾದ್ಯಂತ ಆಸಕ್ತಿ ಇರುವ ಮಹಿಳಾ ವಿಶೇಷಚೇತನ ಬ್ಯಾಸ್ಕೆಟ್ ಬಾಲ್ ಆಟಗಾರ್ತಿಯರಿಗೆ ಉಚಿತ ತರಬೇತಿ ನೀಡುತ್ತಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ವಕೀಲ ಡಿ.ಸೋಮಶೇಖರ್ ದಾಸೇಗೌಡ ಮಾತ ನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಮೈಸೂರಿನಿಂದ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ ವಿಶೇಷಚೇತನ ಕ್ರೀಡಾಪಟುಗಳು ತರಬೇತಿ ಪಡೆದು ರಾಜ್ಯ ಮತ್ತು ದೇಶದ ಕೀರ್ತಿ ಗಳಿಸಬೇಕು ಎಂದು ಸಲಹೆ ನೀಡಿದರು. ಮಾನವ ಹಕ್ಕುಗಳ ಹೋರಾಟಗಾರ ಪ್ರಸನ್ನ, ಮುಖ್ಯ ಶಿಕ್ಷಕ ವೈ.ಚಿನ್ಮಯಾನಂದಮೂರ್ತಿ, ಕಂದೇಗಾಲ ಗೋಪಾಲಕೃಷ್ಣ ಉಪ ಸ್ಥಿತರಿದ್ದರು. ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ ಸ್ಪರ್ಧಾರ್ಥಿಗಳಾದ ಸುಜಾತಾ ಟಿ. ಕುಮಾರಿ, ಕೆ.ಕಾಂಚನಾ, ರವಿಕುಮಾರ್ ತರಬೇತಿ ಪಡೆದರು. ಸ್ಪರ್ಧಾರ್ಥಿಗಳಾದ ಎಂ.ಗಿರೀಶ್, ಶಿಯಾಬುದ್ದೀನ್, ಸುನಿತಾ, ದಾನಮ್ಮ ಇನ್ನಿತರರು ಉಪಸ್ಥಿತರಿದ್ದರು.