ಬಿವಿಬಿಯಿಂದ ಜ.19, 20ರಂದು ಭವನೋತ್ಸವ

ಮೈಸೂರು: ಭಾರತೀಯ ವಿದ್ಯಾಭವನ, ಮೈಸೂರು ಕೇಂದ್ರ, ಕಲಾ ಭಾರತಿ ವಿಭಾಗದ ವತಿಯಿಂದ ಜ.19 ಮತ್ತು 20ರಂದು ಭವ ನೋತ್ಸವ ಹಾಗೂ ಕುಲಪತಿ ಡಾ. ಕೆ.ಎಂ.ಮುನ್ಷಿ ಅವರ 131ನೇ ಜನ್ಮೋತ್ಸವ ವರ್ಷ ಸಮಾರಂಭ ವನ್ನು ಬಿವಿಬಿಯ ಪ್ರೊ. ವೈ.ಟಿ. ತಾತಾಚಾರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ. ಜ.19 ರಂದು ಸಂಜೆ 5.30 ಗಂಟೆಗೆ ಸುರಭಿ ಗಾನ ಕಲಾಮಂದಿರದ ನಿರ್ದೇಶಕಿ ಡಾ.ಸುಕನ್ಯಾ ಪ್ರಭಾಕರ್ ಕಾರ್ಯಕ್ರಮ ಉದ್ಘಾ ಟಿಸುವರು. ಭಾರತೀಯ ವಿದ್ಯಾ ಭವನ, ಬೆಂಗಳೂರು ಅಧ್ಯಕ್ಷ ಎನ್.ರಾಮಾನುಜ ಮುಖ್ಯ ಅತಿಥಿಗಳಾಗಿ ಭಾಗ ವಹಿಸಲಿದ್ದು, ಭಾರತೀಯ ವಿದ್ಯಾ ಭವನ, ಮೈಸೂರು ಅಧ್ಯಕ್ಷ ಪ್ರೊ.ಎ.ವಿ.ನರಸಿಂಹಮೂರ್ತಿ ಅಧ್ಯಕ್ಷತೆ ವಹಿಸುವರು.

ನಂತರ ಕಲಾ ಭಾರತಿ ತಂಡದವರಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ. ಸಂಜೆ 6 ಗಂಟೆಗೆ ನೃತ್ಯ ವಿಭಾಗ ತಂಡದಿಂದ ಪ್ರಾರ್ಥನಾ ನೃತ್ಯ ನಡೆಯಲಿದೆ. 6.10ಕ್ಕೆ ವೀಣಾ ವಿಭಾಗದಿಂದ ವೀಣಾವಾದನ, 6.20ಕ್ಕೆ ತಬಲಾ ವಾದನ, 6.50ಕ್ಕೆ ಕರ್ನಾಟಕ ಸಂಗೀತ ಹಾಗೂ 7.30 ಗಂಟೆಗೆ ವಿದುಷಿ ಶ್ರೀಮತಿ ನಾಗಲಕ್ಷ್ಮಿ ತಂಡದವ ರಿಂದ ಭರತನಾಟ್ಯ ಕಾರ್ಯಕ್ರಮವಿದೆ. ಜ.20ರಂದು ಸಂಜೆ 5.30ಕ್ಕೆ ಸಮಾರೋಪ ಸಮಾರಂಭ ನಡೆಯ ಲಿದ್ದು, ಮುಖ್ಯ ಅತಿಥಿಗಳಾಗಿ ವಿದುಷಿ ಶ್ರೀಮತಿ ಹೆಚ್. ಆರ್.ಲೀಲಾವತಿ ಭಾಗ ವಹಿಸುವರು. ಭಾರತೀಯ ವಿದ್ಯಾಭವನ, ಮೈಸೂರು ಕೇಂದ್ರದ ಸಮಿತಿ ಸದಸ್ಯ ಟಿ.ಎಸ್.ಗಂಗಾಧರ್ ಅಧ್ಯಕ್ಷತೆ ವಹಿಸುವರು.

ನಂತರ ಕಲಾ ಭಾರತಿ ತಂಡದವರಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ. ಸಂಜೆ 6 ಗಂಟೆಗೆ ತಬಲಾ ವಾದನ, 6.30ಕ್ಕೆ ಪಿಟೀಲು ವಾದನ, 6.40ಕ್ಕೆ ಹಿಂದೂಸ್ತಾನಿ ಗಾಯನ, 7ಕ್ಕೆ ಕರ್ನಾಟಕ ಸಂಗೀತ ಹಾಗೂ 7.20ಕ್ಕೆ ವಿದುಷಿ ಶ್ರೀಮತಿ ಶಾರದಾಭಟ್ ಕಟ್ಟಿಗೆ ಅವರಿಂದ ಹಿಂದೂಸ್ತಾನಿ ಗಾಯನ ಕಾರ್ಯಕ್ರಮವಿದೆ.

ವಿದುಷಿ ಪಿ.ಕೆ.ನಾಗಲಕ್ಷ್ಮಿ: ಉತ್ತಮ ಭರತನಾಟ್ಯ ಕಲಾ ವಿದೆಯಾದ ಇವರು, ಕೋರಿಯೋಗ್ರಾಫರ್ ಮತ್ತು ಉಪಾ ಧ್ಯಾಯರಾಗಿದ್ದಾರೆ. ಬಾಲ್ಯದಲ್ಲಿ ಬೆಂಗಳೂರಿನ ವಿದುಷಿ ವಸಂತ ಲಕ್ಷ್ಮಿ ಅವರ ಮಾರ್ಗದರ್ಶನದಲ್ಲಿ ಭರತನಾಟ್ಯ ತರಬೇತಿ ಆರಂಭಿಸಿದರು. ಬಳಿಕ ಭರತನಾಟ್ಯ ವಿದ್ವತ್ ಪರೀಕ್ಷೆಯನ್ನು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿ ದರು. ಮೈಸೂರಿಗೆ ಬಂದ ಬಳಿಕ ವಿದುಷಿ ಡಾ. ವಸುಂ ಧರಾ ದೊರೆಸ್ವಾಮಿ ಅವರ ಮಾರ್ಗದರ್ಶನದಲ್ಲಿ ನೃತ್ಯ, ಯೋಗ ಮತ್ತು ಕೋರಿಯೋಗ್ರಫಿ ತರಬೇತಿ ಪಡೆದರು.
ಅಲ್ಲದೆ, ವಸುಂಧರಾ ಪ್ರದರ್ಶಕ ಕಲೆಗಳ ಕೇಂದ್ರದ ಸಿಬ್ಬಂದಿ ಯಾಗಿ ಕಾರ್ಯನಿರ್ವಹಿಸಿದ್ದರು. ವಿದುಷಿ ಚೇತನ ಕೃಷ್ಣ ಮತ್ತು ವಿದುಷಿ ರಾಧಿಕಾ ನಂದಕುಮಾರ್ ಅವರ ಮಾರ್ಗ ದರ್ಶನದಲ್ಲಿ ಭರತನಾಟ್ಯ ಎಂ.ಎ. ಪದವಿ ಪಡೆದು ಕೊಂಡರು. ಅಲ್ಲದೆ, ಸುಮಾರು 10 ವರ್ಷಗಳ ಕಾಲ ಮೈಸೂರಿನ ಗುರು ಸುದೇಶ್ ಚಂದ್ರ ಅವರಿಂದ ಯೋಗ ತರಬೇತಿ ಪಡೆದುಕೊಂಡಿದ್ದಾರೆ. ಶಿಕ್ಷಣದಲ್ಲಿ ಇಂಜಿನಿ ಯರ್ ಆದ ಇವರು ಬೆಂಗಳೂರಿನ ಸಾಫ್ಟ್‍ವೇರ್ ಕಂಪನಿ ಯಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದರು.

ವಿದುಷಿ ಶಾರದಾ ಭಟ್ ಕಟ್ಟಿಗೆ : ಇವರು ಆರಂಭದಲ್ಲಿ ಹಿಂದೂಸ್ಥಾನಿ ಸಂಗೀತವನ್ನು ತಂದೆ ಗುರು ವಿದ್ವಾನ್ ಸುಬ್ರಹ್ಮಣ್ಯ ಭಟ್ ಕಟ್ಟಿಗೆ, ಹೊನ್ನಾವರ ಮತ್ತು ಉನ್ನತ ಶಿಕ್ಷಣವನ್ನು ಧಾರವಾಡದ ಚಂದ್ರಶೇಖರ್ ಪುರಾಣಿ ಮಟ್, ಬೆಂಗಳೂರಿನ ವಿದುಷಿ ಪರಮೇಶ್ವರ್, ಮೈಸೂರಿನ ಇಂದೂಧರ ನಿರೋಡಿ, ಮುಂಬೈನ ವಿದ್ವಾನ್ ಎಸ್.ಸಿ. ಆರ್. ಭಟ್ ಅವರಲ್ಲಿ ಪಡೆಯುತ್ತಿದ್ದಾರೆ. ಹಿಂದೂಸ್ಥಾನಿ ಹಾಡುಗಾರಿಕೆಯಲ್ಲಿ ವಿದ್ವತ್ ಮತ್ತು ಮ್ಯೂಸಿಕ್‍ನಲ್ಲಿ ಎಂ.ಎ. ಪದವಿ ಪಡೆದುಕೊಂಡಿದ್ದಾರೆ. ಅವರು ಧಾರ ವಾಡ ಸಂಗೀತ ಭಾರತಿ, ಬೆಂಗಳೂರು ರಾಜಗುರು ಸಂಗೀತ ಸಭಾ, ಶಿವಮೊಗ್ಗ ಶೋತೃ ಸಂಗೀತ ಸಭಾ, ತಾಣೆಯ ಸ್ವರ ಸಂವಾದ್, ಸಹಯೋಗ್ ಮಂದಿರ, ಮೈಸೂರು ದಸರಾ ವಸ್ತುಪ್ರದರ್ಶನ, ಗಾನಭಾರತಿ ಸೇರಿ ದಂತೆ ಹಲವಾರು ಕಡೆ ಕಾರ್ಯಕ್ರಮ ನೀಡಿದ್ದಾರೆ.