ಇಂದು ಮೈಸೂರು ಅರಮನೆಯಲ್ಲಿ ಜಯಚಾಮರಾಜ ಒಡೆಯರ್ ಜನ್ಮ ಶತಮಾನೋತ್ಸವಅದ್ಧೂರಿ ಸಮಾರಂಭ

ಮೈಸೂರು: ಮೈಸೂರು ಸಂಸ್ಥಾನದ ಮಹಾರಾಜ ಶ್ರೀ ಜಯಚಾಮ ರಾಜ ಒಡೆಯರ್ ಅವರ ಜನ್ಮ ಶತಮಾ ನೋತ್ಸವ ಸಮಾರಂಭ ನಾಳೆ(ಜು.18) 11.15ಕ್ಕೆ ಅರಮನೆಯ ದರ್ಬಾರ್ ಹಾಲ್ ನಲ್ಲಿ ವಿಜೃಂಭಣೆಯಿಂದ ನೆರವೇರಲಿದ್ದು, ರಾಜ್ಯಪಾಲ ವಜುಭಾಯಿ ರೂಡಭಾಯ್ ವಾಲಾ ಸೇರಿದಂತೆ ಅನೇಕ ಗಣ್ಯರು ಪಾಲ್ಗೊ ಳ್ಳಲಿದ್ದಾರೆ. ರಾಜವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್ ಹಾಗೂ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಫೌಂಡೇಷನ್ ವತಿಯಿಂದ ದರ್ಬಾರ್ ಹಾಲ್‍ನಲ್ಲಿ ಆಯೋ ಜಿಸಿರುವ ಶ್ರೀ ಜಯಚಾಮರಾಜ ಒಡೆ ಯರ್ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮಕ್ಕೆ ಬುಧವಾರ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮುಖ್ಯ ಅತಿಥಿಗಳಾಗಿ ಆಗಮಿಸಲಿರುವ ರಾಜ್ಯಪಾಲ ವಜುಭಾಯಿ ರೂಡಭಾಯ್ ವಾಲಾ, ಪಶ್ಚಿಮ ಬಂಗಾ ಳದ ಮಾಜಿ ರಾಜ್ಯಪಾಲ ಗೋಪಾಲಕೃಷ್ಣ ಗಾಂಧಿ, ಪ್ರಮೋದಾದೇವಿ ಒಡೆಯರ್ ಸೇರಿದಂತೆ ಐವರು ಮುಖ್ಯ ವೇದಿಕೆಯಲ್ಲಿ ಆಸೀನರಾಗಲಿದ್ದು, ವೇದಿಕೆ ಸಿದ್ಧಪಡಿಸಲಾ ಗಿದೆ. ಮುಖ್ಯ ವೇದಿಕೆಯ ಬಲ ಭಾಗದಲ್ಲಿ ಗಣ್ಯರು ಆಸೀನರಾಗಲು ಆಸನದ ವ್ಯವಸ್ಥೆ ಮಾಡಿದ್ದರೆ, ಎಡ ಭಾಗದಲ್ಲಿ ಸಾಂಸ್ಕøತಿಕ ಕಾರ್ಯಕ್ರಮದ ವೇದಿಕೆ ನಿರ್ಮಿಸಲಾಗಿದೆ.

ಕಾರ್ಯಕ್ರಮಕ್ಕೆ ಬಿಗಿ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿದ್ದು, ಆಹ್ವಾನ ಪತ್ರಿಕೆಯುಳ್ಳವರು ಮಾತ್ರ ದರ್ಬಾರ್ ಹಾಲ್‍ನಲ್ಲಿ ಕುಳಿತು ಕಾರ್ಯಕ್ರಮ ವೀಕ್ಷಿಸ ಬಹುದಾಗಿದೆ. ಸಾರ್ವಜನಿಕರು ಅರಮನೆ ಮುಂಭಾಗದ ಪ್ರಾಂಗಣದಿಂದಲೇ ದರ್ಬಾರ್ ಹಾಲ್‍ನಲ್ಲಿ ನಡೆಯುವ ಕಾರ್ಯಕ್ರಮವನ್ನು ವೀಕ್ಷಿಸಬಹುದಾಗಿದೆ. ಅಲ್ಲದೆ ಸಾರ್ವಜನಿಕ ರಿಗೆ ವೀಕ್ಷಣೆಗಾಗಿ ದೊಡ್ಡ ಎಲ್‍ಇಡಿ ಪರದೆ ಅಳವಡಿಸಲಾಗುತ್ತಿದೆ. ನಾಳೆ ಬೆಳಿಗ್ಗೆ 11.15ಕ್ಕೆ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಆರಂಭವಾಗುತ್ತದೆ. ಸಂಜೆ 6.30ರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.