ಇಂದಿನ ಸಾಮಾಜಿಕ ತಲ್ಲಣಗಳ ಬಗ್ಗೆ  ಅಂದೇ ತಮ್ಮ ಕಾವ್ಯಗಳಲ್ಲಿ ತಿಳಿಸಿದ್ದ ಕುವೆಂಪು

ಮೈಸೂರು,ಡಿ.29(ಆರ್‍ಕೆಬಿ)-ಇತ್ತೀಚಿನ ಸಾಮಾಜಿಕ ವೈಪರೀತ್ಯಗಳಿಗೆ ಕುವೆಂಪು ಸಾಹಿತ್ಯ ಪರಿಹಾರವಾಗಿದೆ. ಪ್ರಸ್ತುತ ಸಾಮಾ ಜಿಕ ಸಮಸ್ಯೆಗಳ ಬಗ್ಗೆ ಕುವೆಂಪು ತಮ್ಮ ಕಾವ್ಯ, ಬರಹಗಳ ಮೂಲಕ ಅಂದೇ ಹೊರ ಹಾಕಿ ದ್ದರು ಎಂದು ಮಹಾರಾಜ ಕಾಲೇಜು ಪ್ರಾಧ್ಯಾ ಪಕ ಟಿ.ಕೆ.ಕೆಂಪೇಗೌಡ ಅಭಿಪ್ರಾಯಪಟ್ಟರು.

ಮೈಸೂರಿನ ಗನ್‍ಹೌಸ್ ಬಳಿಯ ವಿಶ್ವ ಮಾನವ ಉದ್ಯಾನವನದಲ್ಲಿ ರಾಷ್ಟ್ರಕವಿ ಕುವೆಂಪು ಜನ್ಮ ದಿನಾಚರಣೆ ಅಂಗವಾಗಿ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿ ಷತ್ತು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕುವೆಂಪು ಪ್ರತಿಮೆಗೆ ಮಾಲಾರ್ಪಣೆ ಬಳಿಕ ಅವರು ಮಾತನಾಡಿದರು.

ಪ್ರಸ್ತುತ ಸಂದರ್ಭದಲ್ಲಿ ನಡೆಯುತ್ತಿರುವ ಗಲಭೆ, ಗೊಂದಲ, ಸಮಸ್ಯೆಗಳಿಗೆ ಕುವೆಂಪು ಅವರು ಅಂದೇ ತಮ್ಮ ಬರಹಗಳಲ್ಲಿ ಉತ್ತರ ನೀಡಿದ್ದಾರೆ. ಅದನ್ನು ವಿದ್ಯಾರ್ಥಿಗಳು ಹೆಚ್ಚು ಮನನ ಮಾಡಬೇಕು. ಕುವೆಂಪು ಸಾಹಿತ್ಯವನ್ನು ಓದಬೇಕು ಎಂದರು.

ಮಗು ಹುಟ್ಟುತ್ತಾ ವಿಶ್ವ ಮಾನವನಾಗಿ, ನಂತರ ಬೆಳೆಯುತ್ತಾ ವಾತಾವರಣಕ್ಕೆ ತಕ್ಕಂತೆ ಬೇರೆ ಬೇರೆ ಹಾದಿ ತುಳಿಯುತ್ತಿದ್ದಾರೆ. ಅನೇಕ ಸಾಮಾಜಿಕ ತಲ್ಲಣಗಳು ಇಂದು ವಿಜೃಂ ಭಿಸುತ್ತಿವೆ. ಇವೆಲ್ಲಕ್ಕೂ ಕುವೆಂಪು ದಶ ಮಾನಗಳ ಹಿಂದೆಯೇ ತಮ್ಮ ಕಾವ್ಯ ಬರಹ ಗಳಲ್ಲಿ ತೋರಿಸಿದ್ದಾರೆ. ಸಾಮಾಜಿಕ ಪ್ರಜ್ಞೆ, ವೈಚಾರಿಕ ಪ್ರಜ್ಞೆ ಅವರ ಬರಹಗಳಲ್ಲಿ ವಿಜೃಂಭಿಸಿದೆ ಎಂದು ಹೇಳಿದರು.

ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿ ಷತ್ ಅಧ್ಯಕ್ಷ ವೈ.ಡಿ.ರಾಜಣ್ಣ ಮಾತನಾಡಿ, ಕನ್ನಡ ಮತ್ತು ಕರ್ನಾಟಕ ಪರಸ್ಪರ ಪೂರಕ ವಾಗಿರಬೇಕು. ಕನ್ನಡ ಅಭಿವೃದ್ಧಿಯಾದರೆ ಕರ್ನಾಟಕದ ಅಭಿವೃದ್ಧಿ ಅಗುತ್ತದೆ. ಅದೇ ರೀತಿ ಕರ್ನಾಟಕ ಅಭಿವೃದ್ಧಿ ಹೊಂದಿದರೆ ಕನ್ನಡದ ಅಭಿವೃದ್ಧಿ ತನ್ನಿಂತಾನೇ ಆಗು ತ್ತದೆ ಎಂಬ ಅಂಶವನ್ನು ಇಟ್ಟುಕೊಂಡೇ ಪ್ರತಿಪಾದನೆ ಮಾಡಿದವರು ಕುವೆಂಪು. ಕವಿಗೆ ಸಾಮಾಜಿಕ ಜವಾಬ್ದಾರಿ ಇರಬೇಕು ಎಂಬುದನ್ನೂ ಕುವೆಂಪು ತಮ್ಮ ಕಾವ್ಯಗಳ ಮೂಲಕ ಪ್ರತಿಪಾದಿಸಿದ್ದಾರೆ ಎಂದರು.

ಇದಕ್ಕೂ ಮುನ್ನ ಉಪಮೇಯರ್ ಶಫೀ ಅಹಮದ್ ಕುವೆಂಪು ಪ್ರತಿಮೆಗೆ ಪುಷ್ಪಾ ರ್ಚನೆ ಮಾಡಿದರು. ಪಾಲಿಕೆ ಸದಸ್ಯ ಬಿ.ವಿ. ಮಂಜುನಾಥ್, ಕಸಾಪ ಮಾಜಿ ಅಧ್ಯಕ್ಷ ಎಂ.ಚಂದ್ರಶೇಖರ್, ಪದಾಧಿಕಾರಿಗಳಾದ ನಾಗರಾಜು, ಮೂಗೂರು ನಂಜುಂಡಸ್ವಾಮಿ, ಕನ್ನಡ ಚಳವಳಿಯ ತಾಯೂರು ವಿಠ್ಠಲ ಮೂರ್ತಿ, ಕನ್ನಡ ಅಭಿವೃದ್ದಿ ಸಮಿತಿ ಸದಸ್ಯ ಎಂ.ಬಿ.ವಿಶ್ವನಾಥ್ ಇನ್ನಿತರರಿದ್ದರು.