ಮುಖ್ಯಮಂತ್ರಿ ವಿರುದ್ಧ ಬಿಜೆಪಿ ಪ್ರತಿಭಟನೆ

ಚಾಮರಾಜನಗರ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಮ್ಮಿಶ್ರ ಸರ್ಕಾರಕ್ಕೆ ತೊಂದರೆ ನೀಡಿದರೆ, ಬಿಜೆಪಿ ವಿರುದ್ಧ ದಂಗೆ ಏಳುವಂತೆ ನಾಡಿನ ಜನರಿಗೆ ಕರೆ ನೀಡಬೇಕಾಗುತ್ತದೆ ಎಂಬ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಅವರು ಹೇಳಿಕೆಯನ್ನು ಖಂಡಿಸಿ ನಗರ ದಲ್ಲಿ ಶುಕ್ರವಾರ ಬಿಜೆಪಿ ಕಾರ್ಯ ಕರ್ತರು ಪ್ರತಿಭಟನೆ ನಡೆಸಿದರು.

ಪಕ್ಷದ ಜಿಲ್ಲಾ ಕಾರ್ಯಾಲಯದಿಂದ ಭುವ ನೇಶ್ವರಿ ವೃತ್ತದವರೆಗೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಮೆರವಣಿಗೆ ನಡೆಸಿ, ಬಳಿಕ ವೃತ್ತದ ಮಧ್ಯ ಭಾಗದಲ್ಲಿ ಕುಳಿತು ರಸ್ತೆ ತಡೆ ನಡೆಸಿದರು. ಮುಖ್ಯಮಂತ್ರಿ ಕುಮಾ ರಸ್ವಾಮಿ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರಕ್ಕೆ ಬಿಜೆಪಿ ತೊಂದರೆ ನೀಡುತ್ತಿದೆ. ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಪದೇ ಪದೇ ಟೀಕೆ ಮಾಡು ತ್ತಿದ್ದಾರೆ. ಮುಖ್ಯಮಂತ್ರಿಗಳಾದವರು ತಮ್ಮ ಜವಾ ಬ್ದಾರಿ ಏನು ಎಂಬುದನ್ನು ಅರಿತು ಮಾತ ನಾಡಬೇಕು. ಇದನ್ನು ಬಿಟ್ಟು ಪ್ರಚೋದನಾ ಹೇಳಿಕೆ ನೀಡುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ದೂರಿದರು.

ಹೆಚ್.ಡಿ.ಕುಮಾರಸ್ವಾಮಿ ಈ ಕೂಡಲೇ ರಾಜ್ಯದ ಜನತೆಗೆ ಕ್ಷಮೆಯಾಚಿಸಬೇಕು. ಇಲ್ಲದಿದ್ದಲ್ಲಿ ಹೋರಾಟವನ್ನು ನಿರಂತರ ವಾಗಿ ರೂಪಿಸಬೇಕಾಗುತ್ತದೆ ಎಂದು ಎಚ್ಚರಿ ಸಿದರು. ಪ್ರತಿಭಟನೆಯಲ್ಲಿ ಮಾಜಿ ಶಾಸಕ ರಾದ ಸಿ.ಗುರುಸ್ವಾಮಿ, ಜಿ.ಎಸ್.ನಂಜುಂಡ ಸ್ವಾಮಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯ ದರ್ಶಿಗಳಾದ ನೂರೊಂದು ಶೆಟ್ಟಿ, ನಾಗೇಂದ್ರ ಸ್ವಾಮಿ, ಶಾಂತಮೂರ್ತಿ, ಯುವ ಮೋರ್ಚಾ ಅಧ್ಯಕ್ಷ ಪ್ರಣಯ್, ನಗರ ಘಟಕ ಅಧ್ಯಕ್ಷ ಸುಂದರ್‍ರಾಜ್, ಜಿಪಂ ಸದಸ್ಯ ಸಿ.ಎನ್.ಬಾಲ ರಾಜು, ಮಾಜಿ ಅಧ್ಯಕ್ಷೆ ನಾಗಶ್ರೀ ಪ್ರತಾಪ್, ನಗರಸಭಾ ಸದಸ್ಯರಾದ ಗಾಯಿತ್ರಿ, ಸಿ.ಎಂ. ಮಂಜುನಾಥ್, ಮನೋಜ್ ಪಟೇಲ್, ಶಿವರಾಜು, ಮುಖಂಡರಾದ ಕೆಲ್ಲಂಬಳ್ಳಿ ಸೋಮನಾಯಕ್, ಎಸ್.ಬಾಲಸುಬ್ರಮಣ್ಯಂ, ರಂಗಸ್ವಾಮಿ, ಮಂಗಳಮ್ಮ, ಶಿವಮ್ಮ, ರಮ್ಯ, ಕವಿತಾ, ಲಕ್ಷ್ಮೀಪತಿ, ಮಲ್ಲೇಶ್, ಶಿವಪ್ರಕಾಶ್, ಕುಮಾರ್ ಇತರರು ಭಾಗವಹಿಸಿದ್ದರು.