ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳದಿದ್ದರೆ ಬಿಎಸ್‍ಎನ್‍ಎಲ್ ಅವನತಿ: ಎಚ್ಚರಿಕೆ

ಮೈಸೂರು: ಟೆಲಿಕಾಂ ಕ್ಷೇತ್ರದಲ್ಲಿ ಬದಲಾವಣೆ ಹಾಗೂ ಬೆಳ ವಣಿಗೆ ತೀವ್ರತರದಲ್ಲಿ ಆಗುತ್ತಿದ್ದು, ಇಂತಹ ಸಂದರ್ಭದಲ್ಲಿ ಬಿಎಸ್‍ಎನ್‍ಎಲ್ ಅಂತಹ ಸಂಸ್ಥೆ ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಗುಣಮಟ್ಟದ ಸೇವೆ ನೀಡುವ ಮೂಲಕ ಉಳಿದು ಬೆಳೆಯ ಬೇಕಿದೆ. ಇಲ್ಲವಾದರೆ ಅವನತಿ ಹಾದಿ ಹಿಡಿಯಬೇಕಾಗುತ್ತದೆ ಎಂದು ಬಿಎಸ್ ಎನ್‍ಎಲ್ ಟೆಲಿಕಾಂನ ಕರ್ನಾಟಕ ವೃತ್ತದ ಮುಖ್ಯ ಪ್ರಧಾನ ವ್ಯವಸ್ಥಾಪಕ ಸುಶೀಲ್ ಕುಮಾರ್ ಮಿಶ್ರಾ ಎಚ್ಚರಿಸಿದರು.

ಮೈಸೂರಿನ ಕುವೆಂಪುನಗರದ ಬಿಎಸ್ ಎನ್‍ಎಲ್ ಸಂಸ್ಥೆಯ ದೂರಸಂಪರ್ಕ ಪ್ರಾದೇಶಿಕ ತರಬೇತಿ ಕೇಂದ್ರದ ಸಭಾಂ ಗಣದಲ್ಲಿ ನ್ಯಾಷನಲ್ ಫೆಡರೇಷನ್ ಆಫ್ ಟೆಲಿಕಾಂ ಎಂಪ್ಲಾಯೀಸ್ ಬಿಎಸ್ ಎನ್‍ಎಲ್ (ಎನ್‍ಎಫ್‍ಟಿಇ-ಬಿಎಸ್ ಎನ್‍ಎಲ್) ಕರ್ನಾಟಕ ವೃತ್ತದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಫೆಡರೇಷನ್‍ನ ವಿಸ್ತøತ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಸಂಸ್ಥೆ ಉಳಿಸಿ ಬೆಳೆಸಲು ಸರ್ಕಾರದ ಸಹಕಾರ ಸಿಕ್ಕಲ್ಲಿ ಸಂತಸದ ಸಂಗತಿ. ಒಂದು ವೇಳೆ ಇಲ್ಲವಾದರೂ ದೃತಿಗೆಡುವ ಅಗತ್ಯವಿಲ್ಲ. ಉತ್ತಮ ಗುಣಮಟ್ಟದ ಸೇವೆ ನೀಡುವ ಸಾಧ್ಯತೆಗಳನ್ನು ಕಂಡುಕೊಳ್ಳುವ ಮೂಲಕ ಗ್ರಾಹಕರನ್ನು ಸೆಳೆಯಲು ಮುಂದಾಗ ಬೇಕು. ಕಾಲಕ್ಕೆ ತಕ್ಕಂತೆ ತಂತ್ರಜ್ಞಾನ ಅಳವ ಡಿಸಿಕೊಳ್ಳಬೇಕು. ಮಾರುಕಟ್ಟೆ ತಂತ್ರಗಳನ್ನು ವೇಗವಾಗಿ ಅಳವಡಿಸಿಕೊಳ್ಳಲು ಗಮನ ನೀಡಬೇಕು ಎಂದು ಹೇಳಿದರು.

ವಾತಾವರಣಕ್ಕೆ ತಕ್ಕಂತೆ ಹೊಂದು ಕೊಳ್ಳಲಾಗದೇ ಡೈನೋಸರ್ ದೈತ್ಯ ಪ್ರಾಣಿ ಸಂಕುಲ ಅವನತಿಯಾಯಿತು. ಈ ದೈತ್ಯ ಪ್ರಾಣಿಯ ಬಾಲಕ್ಕೆ ಏನಾದರೂ ತಗಲಿದರೆ ಆ ಸಂದೇಶ ಅದರ ಮೆದುಳಿಗೆ ತಲುಪುವಷ್ಟರಲ್ಲಿ ಅನಾಹುತ ಆಗಿಯೇ ಹೋಗಿರುತ್ತದೆ. ಹೀಗಾಗಿ ಸಮಯಕ್ಕೆ ಹೊಂದುಕೊಳ್ಳಲಾಗದೇ ಡೈನೋಸರ್ ಪ್ರಾಣಿ ಸಂತತಿ ನಶಿಸಿತು. ಆದರೆ ಡೈನೋ ಸರ್‍ಗೂ ಮೊದಲೇ ಭೂಮಿಗೆ ಬಂದಿ ರುವ ಜಿರಲೆಗಳು ಇಂದಿಗೂ ನಮ್ಮ ಮನೆ ಗಳಲ್ಲಿ ಕಾಣ ಸಿಗುತ್ತವೆ. ಇದಕ್ಕೆ ಕಾರಣ ಈ ಕೀಟಗಳು ಯಾವುದೇ ವಾತಾವ ರಣಕ್ಕೂ ಹೊಂದಿಕೊಳ್ಳುವ ಸಾಮಥ್ರ್ಯ ಗಳಿಸಿಕೊಂಡಿವೆ. ಈ ಉದಾಹರಣೆ ಯಂತೆ ಅಸ್ತಿತ್ವಕ್ಕಾಗಿ ನಿರಂತರ ಬದಲಾ ವಣೆಗೆ ನಮ್ಮ ಸಂಸ್ಥೆ ತೆರೆದುಕೊಳ್ಳದಿದ್ದರೆ ಡೈನೋಸರ್ ಸ್ಥಿತಿ ಬರುತ್ತದೆ ಎಂದು ಎಚ್ಚರಿಸಿದರು.

ಭಾರತದ ಮೊದಲ ಕಾರು ತಯಾ ರಕರು ಎಂಬ ಖ್ಯಾತಿ ಹೊಂದಿರುವ ಟಾಟಾ ಮೋಟಾರ್ಸ್ ಕಾರುಗಳು ಒಂದು ಹಂತದಲ್ಲಿ ಮಾರುಕಟ್ಟೆಯನ್ನೇ ಕಳೆದು ಕೊಳ್ಳುವ ಪರಿಸ್ಥಿತಿ ಎದುರಾಗಿತ್ತು. ಆಗ ಆಧುನಿಕ ಕಾಲಕ್ಕೆ ಅನುಗುಣವಾಗಿ ಹೊಸ ವಿನ್ಯಾಸದೊಂದಿಗೆ ಕಾರುಗಳನ್ನು ಮಾರು ಕಟ್ಟೆಗೆ ಬಿಡುಗಡೆ ಮಾಡುವ ಮೂಲಕ ಮತ್ತೆ ಟಾಟಾದವರು ತಮ್ಮ ಹೆಗ್ಗಳಿಕೆಯನ್ನು ಮರಳಿ ಸ್ಥಾಪಿಸಿದರು. ಇದನ್ನು ಅವಲೋ ಕಿಸಿಕೊಳ್ಳುವ ಮೂಲಕ ಆಧುನಿಕ ಕಾಲಘಟ್ಟಕ್ಕೆ ಅನುಗುಣವಾಗಿ ಬಿಎಸ್‍ಎನ್‍ಎಲ್ ಮರುಹುಟ್ಟು ಪಡೆಯಬೇಕಿದೆ ಎಂದರು.

ಕಾರ್ಮಿಕರು ತಂತ್ರಜ್ಞಾನ ಅರಿಯಬೇಕು: ಬಿಎಸ್‍ಎನ್‍ಎಲ್‍ನ ಕರ್ನಾಟಕ ವೃತ್ತದಲ್ಲಿ ಶೇ.27ರಷ್ಟು ಅಧಿಕಾರಿ ವರ್ಗದವರಿದ್ದರೆ, ಶೇ.73ರಷ್ಟು ಕಾರ್ಮಿಕರಿದ್ದಾರೆ. ಈ ಪೈಕಿ ಶೇ.30ರಿಂದ 40ರಷ್ಟು ಕಾರ್ಮಿಕರು ಕಠಿಣ ಶ್ರಮ ವಹಿಸಿ ದುಡಿಯುತ್ತಿದ್ದರೂ ಟೆಲಿಕಾಂ ಕ್ಷೇತ್ರದ ನೂತನ ತಂತ್ರಜ್ಞಾನದ ಕಾರ್ಯ ವೈಖರಿ ಬಗ್ಗೆ ತಿಳಿದುಕೊಳ್ಳುವಲ್ಲಿ ವಿಫಲ ವಾಗುತ್ತಿದ್ದು, ಅವರಿಗೆ ಅಗತ್ಯ ತರಬೇತಿ ನೀಡಲು ಮುಂದಾಗಬೇಕಿದೆ ಎಂದು ಸುಶೀಲ್ ಕುಮಾರ್ ಮಿಶ್ರಾ ತಿಳಿಸಿದರು.

ಬಿಎಸ್‍ಎನ್‍ಎಲ್ ಮೈಸೂರು ಟೆಲಿಕಾಂನ ಪ್ರಧಾನ ವ್ಯವಸ್ಥಾಪಕ ಕೆ.ಎಲ್.ಜೈರಾಮ್ ಮಾತನಾಡಿ, ಮೈಸೂರು ಜಿಲ್ಲೆಯಲ್ಲಿ ವಿದ್ಯುತ್ ಬಿಲ್ ಪಾವತಿ ಮಾಡದ ಹಿನ್ನೆಲೆ ಯಲ್ಲಿ 28 ಟವರ್‍ಗಳು ಸ್ಥಗಿತಗೊಂಡಿವೆ. ಗ್ರಾಮಾಂತರ ಪ್ರದೇಶದಲ್ಲಿ ಸಾಕಷ್ಟು ಬಿಎಸ್ ಎನ್‍ಎಲ್ ಸಂವಹನ ವಿನಿಮಯ ಕೇಂದ್ರಗಳು ಮುಚ್ಚಲ್ಪಟ್ಟಿವೆ ಎಂದು ವಿಷಾದಿಸಿದರು.

ಸಭೆ ನಾಳೆಯೂ (ಜೂ.10) ನಡೆಯ ಲಿದ್ದು, ದೇಶದ ವಿವಿಧ ರಾಜ್ಯಗಳಿಂದ 1500ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿ ದ್ದಾರೆ. ಎನ್‍ಎಫ್‍ಟಿಇ-ಬಿಎಸ್‍ಎನ್‍ಎಲ್‍ನ ರಾಷ್ಟ್ರಾಧ್ಯಕ್ಷ ಇಸ್ಲಾಂ ಅಹಮ್ಮದ್ ಅಧ್ಯಕ್ಷತೆ ವಹಿಸಿದ್ದರು. ಎನ್‍ಎಫ್‍ಟಿಇ-ಬಿಎಸ್ ಎನ್‍ಎಲ್‍ನ ಉಪಾಧ್ಯಕ್ಷ ಮದಿವಣ್ಣನ್, ಪ್ರಧಾನ ಕಾರ್ಯದರ್ಶಿ ಚಂದೇಶ್ವರ್ ಸಿಂಗ್, ಕರ್ನಾಟಕ ವೃತ್ತದ ಅಧ್ಯಕ್ಷ ಎಸ್.ವಿ.ಅರಲಿ, ಉಪ ಪ್ರಧಾನ ಕಾರ್ಯ ದರ್ಶಿ ಕೆ.ಎಸ್.ಶೇಷಾದ್ರಿ, ಕಾರ್ಯದರ್ಶಿ ಎ.ಸಿ.ಕೃಷ್ಣ ರೆಡ್ಡಿ, ಮೈಸೂರು ಜಿಲ್ಲಾಧ್ಯಕ್ಷ ಪಿ.ದೇವರಾಜು, ಕಾರ್ಯದರ್ಶಿ ನಾಗೇಂದ್ರ, ಖಜಾಂಚಿ ದಿನೇಶ್ ಕುಮಾರ್ ಮತ್ತಿತರರು ಹಾಜರಿದ್ದರು.