ಎಸ್ಟಿ ಮೀಸಲಾತಿ ಶೇ.7.5ಕ್ಕೇರಿಸಲು ಆಗ್ರಹಿಸಿ ಬಿಎಸ್ಪಿ ಪ್ರತಿಭಟನೆ

ಮೈಸೂರು,ಜೂ.24(ಎಂಟಿವೈ)- ಜನ ಸಂಖ್ಯೆಗೆ ಅನುಗುಣವಾಗಿ ಪರಿಶಿಷ್ಟ ಪಂಗ ಡದ ಮೀಸಲಾತಿಯನ್ನು ಶೇ.7.5ರಷ್ಟು ಹೆಚ್ಚಿಸುವಂತೆ ಆಗ್ರಹಿಸಿ ಬಹುಜನ ಸಮಾಜ ಪಾರ್ಟಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ಆರಂಭಿಸಿದ ಬಿಎಸ್‍ಪಿ ಕಾರ್ಯಕರ್ತರು, ರಾಜ್ಯದ ಜನಸಂಖ್ಯೆ ಯಲ್ಲಿ ಶೇ.10ಕ್ಕೂ ಹೆಚ್ಚು ಪರಿಶಿಷ್ಟ ಸಮು ದಾಯದ ಜನರಿದ್ದಾರೆ. ಕೇಂದ್ರ ಸರ್ಕಾರ ಎಸ್ಟಿ ಸಮುದಾಯಕ್ಕೆ ಶೇ.7.5ರಷ್ಟು ಮೀಸಲಾತಿ ನೀಡುತ್ತಿದೆ. ರಾಜ್ಯ ಸರ್ಕಾರ ಶೇ.3ರಷ್ಟು ಮೀಸಲಾತಿ ನೀಡುತ್ತಿದೆ. ಇದರಿಂದ ಪರಿಶಿಷ್ಟ ಪಂಗಡದ ಸಮು ದಾಯಕ್ಕೆ ಸವಲತ್ತು ದೊರೆಯದಂತಾಗಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ರಾಜ್ಯ ಸರ್ಕಾರ ಜನಸಂಖ್ಯೆಗೆ ಅನುಗುಣವಾಗಿ ಶೇ.7.5ರಷ್ಟಕ್ಕೆ ಹೆಚ್ಚಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಬಿಎಸ್‍ಪಿ ಮುಖಂಡರಾದ ಭೀಮನಹಳ್ಳಿ ಸೋಮೇಶ್, ಡಾ.ಬಸವರಾಜು, ಸೋಸಲೆ ಸಿದ್ಧರಾಜು, ಕೆ.ಎನ್.ಪ್ರಭು ಸ್ವಾಮಿ, ಪಡುವಾರಹಳ್ಳಿ ರಾಮಕೃಷ್ಣ, ರಾಹುಲ್, ಶಿವಕುಮಾರ್, ಪ್ರತಾಪ್, ನಾಗರಾಜು ನಾಗನಹಳ್ಳಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.