ಮೈಸೂರು ವಿವಿಯಲ್ಲಿ ಶೀಘ್ರ ಬೌದ್ಧ ಅಧ್ಯಯನ ಕೇಂದ್ರ

ಮೈಸೂರು, ಅ.14(ಎಂಕೆ)- ಪ್ರಸಕ್ತ ಸಾಲಿನಿಂದಲೇ ಬೌದ್ಧ ಅಧ್ಯಯನ ಕೇಂದ್ರ ಪ್ರಾರಂಭಿಸಲಾಗುವುದು ಎಂದು ಮೈಸೂರು ವಿವಿ ಕುಲಪತಿ ಪೆÇ್ರ. ಜಿ. ಹೇಮಂತ್ ಕುಮಾರ್ ಹೇಳಿದರು.

ಡಾ.ಬಿ.ಆರ್.ಅಂಬೇಡ್ಕರ್ ಅವರ 63ನೇ ವರ್ಷದ ಧಮ್ಮ ದೀಕ್ಷಾ ದಿನಾಚರಣೆಯ ಅಂಗವಾಗಿ ಮೈಸೂರು ವಿವಿ ಮಾನಸಗಂಗೋತ್ರಿಯ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ವತಿಯಿಂದ ಆಯೋಜಿಸಿದ್ದ ‘ಬುದ್ಧ ಗುರುವಿನತ್ತ ಪಯಣ: ಸಾಂಸ್ಕೃತಿಕ ತಲ್ಲಣಗಳು’ ವಿಶೇಷ ಉಪನ್ಯಾಸ ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಾರಂಭದ ಹಂತವಾಗಿ ವಿವಿಯಿಂದಲೇ 5 ಲಕ್ಷ ರೂ. ಬಿಡುಗಡೆ ಮಾಡಲಾಗುವುದು. ಸದ್ಯಕ್ಕೆ ಡಾ.ಬಿ. ಆರ್.ಅಂಬೇಡ್ಕರ್ ಸಂಶೋಧನ ಮತ್ತು ವಿಸ್ತರಣಾ ಕೇಂದ್ರ ದಲ್ಲಿಯೇ ಪ್ರಾರಂಭಿಸಿ, ಬಳಿಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಸರ್ಕಾರದ ಸಹಕಾರದೊಂದಿಗೆ ಪ್ರತ್ಯೇಕವಾಗಿ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದರು.

ಇವತ್ತಿನ ದಿನಗಳಲ್ಲಿ ಯುವ ಜನಾಂಗ ಹಲವಾರು ವಿಚಾರಗಳನ್ನು ತಿಳಿದುಕೊಳ್ಳಬೇಕು. ಪಠ್ಯಕ್ರಮದ ಜತೆಗೆ ಪಠ್ಯೇತರ ಚಟುವಟಿಕೆಯನ್ನು ಕಲಿಯಬೇಕು. ವಿದ್ಯಾರ್ಥಿ ಗಳಿಗೆ ಗುರಿ ಎಂಬುದೇ ಇಲ್ಲ. ಅವರು ಯಾವ ದಿಕ್ಕಿನಲ್ಲಿ ಸಾಗುತ್ತಿದ್ದೇವೆ ಎಂಬುದು ತಿಳಿಯದೇ ಸಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಬುದ್ಧ ಮತ್ತು ಅಂಬೇ ಡ್ಕರ್ ಅವರ ವಿಚಾರಧಾರೆಗಳನ್ನು ಅರಿತುಕೊಳ್ಳ ಬೇಕು ಎಂದು ಸಲಹೆ ನೀಡಿದರು. ಇಂದು ದೇಶದ ಇತಿಹಾಸದಲ್ಲಿ ಮಹತ್ವದ ದಿನವಾಗಿದ್ದು, ಪ್ರಜಾಪ್ರಭುತ್ವ ವನ್ನು ಪ್ರತಿಪಾದಿಸುವ ಬೌದ್ಧ ಧರ್ಮವನ್ನು ಡಾ. ಬಿ.ಆರ್.ಅಂಬೇಡ್ಕರ್ ಸ್ಪೀಕರಿಸಿದ ದಿನ. ವಿಶ್ವದ ಎಲ್ಲ ಧರ್ಮಗಳನ್ನು ಅಧ್ಯಯನ ಮಾಡಿದ ಅವರು, ನಮ್ಮ ದೇಶದಲ್ಲಿಯೇ ಹುಟ್ಟಿದ ಸಮಾನತೆ ಪ್ರತೀಕವಾದ ಬೌದ್ಧ ಧರ್ಮ ಸ್ಪೀಕರಿಸಿದರು ಎಂದರು.

ಬೌದ್ದ ಧರ್ಮವನ್ನು ಅಳವಡಿಸಿಕೊಂಡಿರುವ ಸಾಕಷ್ಟು ದೇಶಗಳು ಮುಂದುವರೆದಿವೆ. ಅವುಗಳಲ್ಲಿ ಚೀನಾ ದೇಶ ಮುಂದಿದೆ. ಅಲ್ಲಿನ ಜನರೇ ಭಾರತದಿಂದ ಬಂದ ಬೌದ್ಧ ಧರ್ಮವನ್ನು ಅಳವಡಿಸಿಕೊಂಡಿದ್ದಾರೆ. ಅಲ್ಲಿ ಬುದ್ಧನ ಬೃಹತ್ ಪ್ರತಿಮೆಗಳು ಇವೆ. ಇಂದಿಗೂ ಅಲ್ಲಿನ ಜನರು ಬುದ್ಧ ಭಾರತದಿಂದ ಬಂದಿದ್ದಾನೆ ಎಂದು ಹೇಳುತ್ತಾರೆ. ಆದರೆ ನಾವು ಇಂದು ಬುದ್ಧ ನನ್ನು ಮರೆತಿರುವುದು ವಿಷಾದನೀಯ ಎಂದರು.

ಸಂದರ್ಶ ಪ್ರಾಧ್ಯಾಪಕ ದೇವನೂರು ಬಸವರಾಜ ಮಾತನಾಡಿ, ಮನುಷ್ಯನಲ್ಲಿ ಮಾನವೀಯತೆ ಗುಣ ಗಳು ಬೆಳೆಯಬೇಕಾದರೆ ಬುದ್ಧನ ಆದರ್ಶಗಳನ್ನು ಪಾಲಿಸಬೇಕು. ವಿಚಾರಗಳಲ್ಲಿರುವ ಸತ್ಯ-ಅಸತ್ಯವನ್ನು ಪ್ರಶ್ನಿಸುವ ಗುಣವನ್ನು ಯುವಕರು ಬೆಳೆಸಿಕೊಳ್ಳ ಬೇಕು. ಸಮಾನತೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕಾದರೆ ಬುದ್ಧನ ವಿಚಾರಧಾರೆಗಳನ್ನು ತಿಳಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಕೊಳ್ಳೇ ಗಾಲ ಜೇತವನದ ಪೆÇ್ರ.ಮನೋರಖ್ಖಿತ ಭಂತೇಜಿ, ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಮತ್ತು ವಿಸ್ತರಣಾ ಕೇಂದ್ರದ ನಿರ್ದೇಶಕ ಪೆÇ್ರ.ಸೋಮ ಶೇಖರ್, ಪ್ರಾಧ್ಯಾಪಕ ಡಾ.ಎಸ್.ನರೇಂದ್ರ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.