ಮಡಿಕೇರಿ ಜ್ಯುವೆಲರಿ ಅಂಗಡಿಯಲ್ಲಿ ಗೋಡೆ ಕೊರೆದು ಕಳ್ಳತನ ಕಳ್ಳರ ಪಾಲಿಗೆ ಸಿಕ್ಕಿದ್ದು 3 ಬೆಳ್ಳಿ ಉಂಗುರ

ಮಡಿಕೇರಿ: ಚಿನ್ನಾಭರಣ ಮಳಿ ಗೆಯ ಗೋಡೆ ಕೊರೆದು ಸಾವಿರ ರೂ. ಮುಖ ಬೆಲೆಯ 3 ಬೆಳ್ಳಿ ಉಂಗುರಗಳನ್ನು ಕಳವು ಮಾಡಿರುವ ಘಟನೆ ನಗರದಲ್ಲಿ ನಡೆದಿದೆ. ಮಹದೇವಪೇಟೆಯ ಮುಖ್ಯ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಇತರ ಜುವೆಲರಿ ಮಳಿಗೆಗಳ ವರ್ತಕರಲ್ಲಿ ಆತಂಕ ಮೂಡಿಸಿದೆ.

ಘಟನೆ ವಿವರ: ಮೂಲತಃ ಕೇರಳ ಇರಿಟ್ಟಿ ನಿವಾಸಿಯಾದ ಶಾಹೀರ್ ಎಂಬುವರು ಮಹ ದೇವಪೇಟೆಯಲ್ಲಿ ಫಾತಿಮಾ ಹೆಸರಿನ ಜುವೆಲರಿ ಮಳಿಗೆ ಆರಂಭಿಸಿದ್ದರು. ಸೋಮ ವಾರ ರಾತ್ರಿ ಎಂದಿನಂತೆ ಅಂಗಡಿ ಬಾಗಿಲು ಮುಚ್ಚಿ ಶಾಹೀರ್ ಮನೆಗೆ ತೆರಳಿದ್ದರು. ಮಂಗ ಳವಾರ ಬೆಳಿಗ್ಗೆ ಜುವೆಲರಿ ಮಳಿಗೆ ಬಾಗಿಲು ತೆರೆದ ಸಂದರ್ಭ ಒಳಗಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಹರಡಿಕೊಂಡಿರುವುದು ಕಂಡು ಬಂದಿದೆ. ಮಾತ್ರವಲ್ಲದೇ ಷೋಕೇಸ್ ಡಬ್ಬಿಯಲ್ಲಿಟ್ಟಿದ್ದ 3 ಉಂಗುರಗಳು ಕಳುವಾ ಗಿರುವುದು ಗಮನಕ್ಕೆ ಬಂದಿದೆ. ತಕ್ಷಣವೇ ಶಾಹೀರ್ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ನಗರ ಠಾಣಾ ಧಿಕಾರಿ ಷಣ್ಮುಗ ಮತ್ತು ಸಿಬ್ಬಂದಿಗಳು ಪರಿಶೀಲನೆ ನಡೆಸಿದರು. ಫಾತಿಮಾ ಜುವೆ ಲರಿ ಮಳಿಗೆಗೆ ಹೊಂದಿಕೊಂಡಂತೆ ಒಟ್ಟು 2 ಕಟ್ಟಡಗಳಿದ್ದು, ಹಿಂಬದಿಯಲ್ಲಿರುವ ದಾಸ್ತಾನು ಮಳಿಗೆಯೊಂದರ ಶಿಥಿಲಾವಸ್ಥೆಯಲ್ಲಿದ್ದ ಗೋಡೆಗೆ 2 ಅಡಿಯಷ್ಟು ಕನ್ನ ಕೊರೆದು ಕಳ್ಳರು ಒಳನುಗ್ಗಿರುವುದು ಕಂಡುಬಂತು. ಬಳಿಕ ಶ್ವಾನದಳ ಮತ್ತು ಬೆರಳಚ್ಚು ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದರು.

ಮಾತ್ರವಲ್ಲದೇ, ಜುವೆಲರಿ ಅಂಗಡಿಗೆ ಹೊಂದಿಕೊಂಡಂತೆ ಗೃಹೋಪಯೋಗಿ ಮಳಿಗೆಯಿದ್ದು, ಇಲ್ಲಿಂದ ಕಳ್ಳರು ಟಾರ್ಚ್‍ನ್ನು ಕಳವು ಮಾಡಿ ಚಿನ್ನಾಭರಣ ಮಳಿಗೆ ಯನ್ನು ಶೋಧಿಸಿರುವುದು ಪತ್ತೆಯಾ ಯಿತು. ಪೊಲೀಸ್ ಶ್ವಾನ 3 ಮಳಿಗೆಗಳಿಗೆ ತೆರಳಿ ಕಳ್ಳರ ಜಾಡು ಹಿಡಿದು ದಾಸವಾಳ ರಸ್ತೆಯ ಕಡೆಗೆ ತೆರಳಿ ಮತ್ತೆ ಜುವೆಲರಿ ಮಳಿಗೆಗೆ ಮರಳಿತು. ಮಾಹಿತಿ ತಿಳಿಯುತ್ತಿ ದ್ದಂತೆಯೇ ಜಿಲ್ಲಾ ಅಪರಾಧ ಪತ್ತೆ ದಳದ ವೃತ್ತ ನಿರೀಕ್ಷಕ ಮಹೇಶ್ ಮತ್ತು ಸಿಬ್ಬಂದಿ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು.

ಲಾಕರ್‌ನಲ್ಲಿತ್ತು ಚಿನ್ನ!: ಜುವೆಲರಿ ಶಾಪ್‍ನ ಮಾಲೀಕ ಶಾಹೀರ್ ಮನೆಗೆ ತೆರಳುವ ಮುನ್ನ ಮಳಿಗೆಯಲ್ಲಿದ್ದ ಚಿನ್ನಾ ಭರಣಗಳನ್ನು ಅಂಗಡಿ ಒಳಗಿದ್ದ ಭದ್ರತಾ ಲಾಕರ್‍ನಲ್ಲಿಟ್ಟಿದ್ದರು. ಹೀಗಾಗಿ ಕಳ್ಳರಿಗೆ ಚಿನ್ನಾಭರಣ ದೊರೆಯದೆ ಮಾಲೀಕ ಬಚಾ ವಾಗಿದ್ದಾರೆ. ಚಿನ್ನಾಭರಣ ಮಳಿಗೆಯಲ್ಲಿ ಸಿಸಿ ಕ್ಯಾಮರಾ ಇಲ್ಲದಿರುವುದು ಕಳ್ಳರ ಪಾಲಿಗೆ ವರವಾಗಿ ಪರಿಣಮಿಸಿದರೆ, ಪೊಲೀಸರ ಪಾಲಿಗೆ ತಲೆನೋವಾಗಿ ಕಾಡುತ್ತಿದೆ.

ವರ್ತಕರಲ್ಲಿ ಆತಂಕ: ನಗರದ ಮಹದೇವ ಪೇಟೆ ರಸ್ತೆಯಲ್ಲಿ ಪ್ರತಿಷ್ಠಿತ ಹಲವು ಚಿನ್ನಾ ಭರಣ ಮಳಿಗೆಗಳಿದ್ದು, ಈ ರಸ್ತೆ ಚಿನ್ನಾ ಭರಣ ಮಳಿಗೆಗಳಿಗೆ ಹೆಸರುವಾಸಿಯಾ ಗಿದೆ. ಇದೀಗ ಜುವೆಲ್ಲರಿ ಮಳಿಗೆಗೆ ಕಳ್ಳರು ಕನ್ನಕೊರೆದು ಕಳವು ಮಾಡಲು ಯತ್ನಿ ಸಿರುವುದು ಇತರ ಅಂಗಡಿಗಳ ಮಾಲೀ ಕರಲ್ಲಿ ಆತಂಕ ಮೂಡಿಸಿದೆ.