ಬಿ.ವಿ.ಮಂಜುನಾಥ್ ಬೆಂಬಲಕ್ಕೆ ಮನವಿ

ಮೈಸೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಬಿ.ವಿ.ಮಂಜುನಾಥ್ ಅವರನ್ನು ಬೆಂಬಲಿಸಲು ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಬಿ.ಆರ್. ನಟರಾಜ್ ಜೋಯಿಸ್ ಮನವಿ ಮಾಡಿದ್ದಾರೆ. ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ನಿಂತ ನೀರಾಗಿದೆ. ಇದಕ್ಕೆ ಪುನಶ್ಚೇತನ ನೀಡಲು ಬಿ.ವಿ.ಮಂಜುನಾಥ್ ಸಮರ್ಥ ಅಭ್ಯರ್ಥಿ ಯಾಗಿದ್ದಾರೆ. ಹಿಂದಿನ ಆಡಳಿತ ಮಂಡಳಿ ಸರಿಯಾಗಿ ಕಾರ್ಯ ನಿರ್ವಹಿಸಿಲ್ಲ. ಆದ್ದರಿಂದ ಬದಲಾವಣೆ ಅವಶ್ಯವಾಗಿದೆ. ಸ್ಥಳೀಯರಾದ ಮಂಜುನಾಥ್ ಅವರು ಸಮಾಜ ಸೇವೆಯೊಂದಿಗೆ ಸಂಘದಲ್ಲೂ ಗುರುತಿಸಿಕೊಂಡಿರುವ ಸೂಕ್ತ ಅಭ್ಯರ್ಥಿ ಯಾಗಿದ್ದು, ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು. ಫೆ.17ರಂದು ನಂಜುಮಳಿಗೆಯ ಗೋಪಾಲಸ್ವಾಮಿ ಶಿಶುವಿಹಾರದಲ್ಲಿ ಬೆಳಿಗ್ಗೆ 11 ರಿಂದ ಸಂಜೆ 4ಗಂಟೆವರೆಗೆ ಮತದಾನ ನಡೆಯಲಿದ್ದು, ಮೈಸೂರು, ಮಂಡ್ಯ, ಚಾಮರಾಜನಗ ರದ ಜಿಲ್ಲೆಗಳ 2 ಸಾವಿರ ಮತದಾರರು ಭಾಗವಹಿಸಲಿದ್ದಾರೆ, ಫೆ.24ರಂದು ಬೆಂಗ ಳೂರಿನ ಶಂಕರಪುರದ ಶ್ರೀಚಂದ್ರಶೇಖರ ಭಾರತಿ ಕಲ್ಯಾಣ ಮಂಟಪದ ಆವರಣ ದಲ್ಲಿ ಬೆಂಗಳೂರು ಕೇಂದ್ರದ ಚುನಾವಣೆ ನಡೆಯಲಿದೆ ಎಂದರು. ಗೋಷ್ಠಿಯಲ್ಲಿ ಅಭ್ಯರ್ಥಿ ಬಿ.ವಿ.ಮಂಜುನಾಥ, ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎಲ್. ಕೃಷ್ಣಸ್ವಾಮಿ, ವಿಪ್ರ ಮುಖಂಡ ಜಿ.ಆರ್.ವಿದ್ಯಾರಣ್ಯ, ಅಜಯರಾವ್, ಗದಾಧರ್ ಇದ್ದರು.