ಜ.ಕೆ.ಎಸ್.ತಿಮ್ಮಯ್ಯ ಸೇರಿದಂತೆ ವೀರ ಸೇನಾನಿಗಳ ಜೀವನ ಚರಿತ್ರೆ ಪಠ್ಯಪುಸ್ತಕದಲ್ಲಿ ಅಳವಡಿಕೆಗೆ ಕರೆ

ಮಡಿಕೇರಿ: ಜನರಲ್ ಕೊಡಂ ದೇರ ಎಸ್.ತಿಮ್ಮಯ್ಯ ಅವರು ಸೇರಿದಂತೆ ದೇಶಕ್ಕಾಗಿ ಮಹಾನ್ ಸೇವೆಗೈದ ಸಾಧಕರ ಬದುಕು ಮತ್ತು ಸಾಧನೆಗಳನ್ನು ಪಠ್ಯ ಪುಸ್ತಕಗಳಲ್ಲಿ ಅಳವಡಿಸಬೇಕೆಂದು ನಿವೃತ್ತ ಏರ್ ಮಾರ್ಷಲ್, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಪುತ್ರ ನಂದಾ ಕಾರ್ಯಪ್ಪ (ಪಿವಿಎಸ್‍ಎಂ, ವಿಎಂ) ಕರೆ ನೀಡಿದ್ದಾರೆ.

ನಗರದ ಸನ್ನಿಸೈಡ್‍ನಲ್ಲಿ ಫೀ.ಮಾ. ಕಾರ್ಯಪ್ಪ ಮತ್ತು ಜ.ತಿಮ್ಮಯ್ಯ ಫೋರಂ, ಕೊಡಗು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ನಡೆದ ಪದ್ಮಭೂಷಣ ಜನರಲ್ ಕೆ.ಎಸ್. ತಿಮ್ಮಯ್ಯ (ಡಿಎಸ್‍ಒ) ಅವರ 113ನೇ ಜನ್ಮದಿನೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

ಜನವರಿ 28 ರಂದು ತಮ್ಮ ತಂದೆಯ ಹಾಗೂ ಮಾರ್ಚ್ 31 ರಂದು ಜನರಲ್ ತಿಮ್ಮಯ್ಯ ಅವರ ಜನ್ಮ ದಿನಾಚರಣೆಗೆ ಮಾತ್ರ ಇವರ ನೆನಪುಗಳು ಸೀಮಿತವಾಗಿರುವು ದನ್ನು ಗಮನಿಸಿದ್ದೇನೆ. ಉಳಿದಂತೆ ಅವರನ್ನು ಮರೆಯುವ ಪರಿಸ್ಥಿತಿಯೇ ಹೆಚ್ಚು ಎಂದು ವಿಷಾದ ವ್ಯಕ್ತಪಡಿಸಿದ ಏರ್ ಮಾರ್ಷಲ್ ನಂದಾ ಕಾರ್ಯಪ್ಪ, ಜನ್ಮ ದಿನಾಚರಣೆಯ ಹೆಸರಿನಲ್ಲಿ ದುಂದು ವೆಚ್ಚ ಮಾಡದೆ ಅರ್ಹ ರಿಗೆ ಸಹಾಯ ಮಾಡುವ ಮೂಲಕ ಸರಳ ತೆಯನ್ನು ಪಾಲಿಸಬೇಕೆಂದು ಸಲಹೆ ನೀಡಿದರು.

ಇನ್ನೋರ್ವ ಮುಖ್ಯ ಅತಿಥಿಗಳಾಗಿದ್ದ ಜನರಲ್ ತಿಮ್ಮಯ್ಯ ಅವರ ಕುಂಮಾವೋ ರೆಜಿಮೆಂಟಿನವರಾದ ನಿವೃತ್ತ ಮೇಜರ್ ಜನರಲ್ ಕುಪ್ಪಂಡ ಪಿ.ನಂಜಪ್ಪ ಅವರು ಮಾತನಾಡಿ, ಜ.ತಿಮ್ಮಯ್ಯ ಅವರ ಸೇನಾ ಸಾಹಸಗಳನ್ನು ವಿವರಿಸಿದರು. ರಾಣಿಕೇತ್ ನಲ್ಲಿರುವ ಕುಂಮಾವೋ ರೆಜಿಮೆಂಟಿನಲ್ಲಿ ಜನರಲ್ ತಿಮ್ಮಯ್ಯ ಕಾನರ್Àರ್ ಇದ್ದು, ಅಲ್ಲಿ ರುವ ಎಲ್ಲಾ ವಸ್ತುಗಳ ಪ್ರತಿಕೃತಿಗಳನ್ನು ಮಡಿಕೇರಿಯಲ್ಲಿರುವ ಸನ್ನಿಸೈಡ್‍ನ ವಾರ್ ಮೆಮೋರಿಯಲ್‍ನಲ್ಲಿ ಪ್ರತಿಷ್ಠಾಪಿಸಲಾಗು ವುದೆಂದು ಹೇಳಿದರು.

ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜನ ರಲ್ ತಿಮ್ಮಯ್ಯ ಅವರ ಮುಂದಿನ ಜನ್ಮ ದಿನಾಚರಣೆ ಸಂದರ್ಭದಲ್ಲಿ ಅತ್ಯಂತ ಅದ್ಧೂರಿಯಾಗಿ ತಿಮ್ಮಯ್ಯ ಸ್ಮಾರಕವನ್ನು ಲೋಕಾರ್ಪಣೆಗೊಳಿಸುವುದರ ಮೂಲಕ ಆಚರಿಸುವ ನಿಟ್ಟಿನಲ್ಲಿ ಸಾಧ್ಯವಿರುವ ಎಲ್ಲಾ ಸಹಕಾರವನ್ನು ನೀಡುವುದಾಗಿ ಹೇಳಿದರು. ಫೋರಂನ ಅಧ್ಯಕ್ಷ ಕರ್ನಲ್ ಕೆ.ಸಿ.ಸುಬ್ಬಯ್ಯ, ಸಂಚಾಲಕ ನಿವೃತ್ತ ಮೇಜರ್ ಬಿ.ಎ. ನಂಜಪ್ಪ ಮಾತನಾಡಿದರು.

ಸನ್ಮಾನ: ಜನವರಿ 26 ರಂದು ಗಣ ರಾಜ್ಯೋತ್ಸವ ಪೆರೇಡ್ ಮತ್ತು ಪ್ರಧಾನ ಮಂತ್ರಿ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಎನ್‍ಸಿಸಿ ಕೆಡೆಟ್‍ಗಳಾದ ಎನ್.ಎನ್.ಪೊನ್ನಣ್ಣ, ಬಿ.ಎಸ್.ತೇಜಸ್ ಅವರುಗಳನ್ನು ಗಣ್ಯರು ಸನ್ಮಾನಿಸಿದರು.

ವೇದಿಕೆಯಲ್ಲಿ ಜಿಲ್ಲಾ ಪಂಚಾಯ್ತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಲಕ್ಷ್ಮಿಪ್ರಿಯ, ಸೈನಿಕ ಶಾಲೆಯ ಪ್ರಾಂಶು ಪಾಲ ಗ್ರೂಪ್ ಕ್ಯಾಪ್ಟನ್ ಆರ್.ಆರ್. ಲಾಲ್, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಎನ್‍ಸಿಸಿ ಮುಖ್ಯಸ್ಥ ಮೇಜರ್ ಡಾ.ರಾಘವ್, ಉಪವಿಭಾಗಾಧಿಕಾರಿ ಜವರೇಗೌಡ, ಫೋರಂನ ಪ್ರಮು ಖರಾದ ಉಳ್ಳಿಯಡ ಎಂ. ಪೂವಯ್ಯ ಇತರರು ಉಪಸ್ಥಿತರಿದ್ದರು.