ಏಡ್ಸ್‍ನಿಂದ ಅಸುನೀಗಿದವರು, ಹೆಚ್‍ಐವಿ ಪೀಡಿತರ ಸಾಂತ್ವನಕ್ಕೆ ಕ್ಯಾಂಡಲ್ ಲೈಟ್ ಜಾಥಾ

ಮೈಸೂರು: ಮೈಸೂ ರಿನ ಹಾರ್ಡಿಂಗ್ ವೃತ್ತದಲ್ಲಿ ಆಶೋದಯ ಸಮಿತಿ ವತಿಯಿಂದ ಅಂತರರಾಷ್ಟ್ರೀಯ ಕ್ಯಾಂಡಲ್ ಲೈಟ್ ಮೆಮೋರಿಯಲ್ ದಿನದ ಅಂಗವಾಗಿ ಏಡ್ಸ್‍ನಿಂದ ಮರಣ ಹೊಂದಿದ ಹಾಗೂ ಹೆಚ್‍ಐವಿ ಸೋಂಕಿ ನೊಂದಿಗೆ ಜೀವನ ಸಾಗಿಸುತ್ತಿರುವವರನ್ನು ಸ್ಮರಿಸಿ, ಗೌರವ ಸೂಚಿಸಲು ಕ್ಯಾಂಡಲ್ ಲೈಟ್ ಜಾಥಾ ನಡೆಸಲಾಯಿತು.

ನನ್ನ ಹೆಚ್‍ಐವಿ ಬದಲಾಗಲ್ಲ. ನಿಮ್ಮ ಮನೋಭಾವನೆಯನ್ನು ಬದಲಾಯಿಸಿ ಕೊಳ್ಳಿ, ಹೆದರಿಕೆ, ಕಳಂಕ, ತಾರತಮ್ಯ ಬೇಡ ಎಂಬ ನಾಮಪಲಕಗಳನ್ನು ಹಿಡಿದ ಕಾರ್ಯಕರ್ತರು ಸಾರ್ವಜನಿಕರಲ್ಲಿ ಹೆಚ್‍ಐವಿ ಕುರಿತು ಜಾಗೃತಿ ಮೂಡಿಸಿದರು.

ಹಾರ್ಡಿಂಗ್ ವೃತ್ತದಿಂದ ಗಾಂಧಿ ಸ್ಕ್ವೇರ್ ವರೆಗೆ ಸಾಗಿದ ಜಾಥಾದಲ್ಲಿ ಭಾಗವಹಿ ಸಿದ್ದ ಮೈಸೂರು ವಿವಿ ಅರ್ಥಶಾಸ್ತ್ರ ವಿಭಾಗದ ನಿರ್ದೇಶಕಿ ಪ್ರೊ.ಇಂದಿರಾ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

ಬಳಿಕ ಮಾತನಾಡಿದ ಅವರು, ಹೆಚ್‍ಐವಿ ಸೋಂಕಿತರನ್ನು ಸಮಾನರಂತೆ ಕಾಣ ಬೇಕು. ಎಲ್ಲರಂತೆ ಅವರನ್ನು ಸಂತೋಷ ದಿಂದ ಬದುಕಲು ಅವಕಾಶ ಮಾಡಿಕೊಡ ಬೇಕು ಎಂದರು.

ಆಶೋದಯ ಸಮಿತಿ ಕಾರ್ಯದರ್ಶಿ ಲಕ್ಷ್ಮಿ ಮಾತನಾಡಿ, ಏಡ್ಸ್‍ನಿಂದ ಸಾವನ್ನಪ್ಪಿ ರುವ ಮಿತ್ರರ ಆತ್ಮಕ್ಕೆ ಶಾಂತಿ ಕೋರಿ ಹಾಗೂ ಹೆಚ್‍ಐವಿ ಸೋಂಕಿಗೆ ಒಳಗಾಗಿ ಬದುಕುತ್ತಿರುವವರÀ ಜೀವನದಲ್ಲಿ ಬೆಳಕನ್ನು ತಂದು ಆರೋಗ್ಯದ ಹಕ್ಕಿಗಾಗಿ ಹೋರಾಟ ವನ್ನು ತೀವ್ರಗೊಳಿಸುವ ಅಗತ್ಯತೆ ಇದೆ. ಹೊಸದಾಗಿ ಹೆಚ್‍ಐವಿ ಸೋಂಕು ತಗುಲು ವುದನ್ನು ನಿಯಂತ್ರಿಸಿ, ಸೋಂಕಿತರಿಗೆ ಎದು ರಾಗುತ್ತಿರುವ ತಾರತಮ್ಯವನ್ನು ತಡೆಯ ಬೇಕಾಗಿದೆ ಎಂದರು. ಜಾಥಾದಲ್ಲಿ ಅಶೋ ದಯ ಸಮಿತಿ ಸದಸ್ಯರಾದ ಮಧುಮಿತ, ಪ್ರಣತಿ ಪ್ರಕಾಶ್, ಪ್ರತಿಮ, ಆಕ್ರಂಪಾಷಾ ಮತ್ತಿತರರು ಭಾಗವಹಿಸಿದ್ದರು.