`ಕಾವೇರಿ ಕಣಿವೆಗೆ ನೇಣು’ ಪುಸ್ತಕ ಬಿಡುಗಡೆ

ಮೈಸೂರು: ಅರ್ಜುನ ಹಳ್ಳಿ ಪ್ರಸನ್ನಕುಮಾರ್ ರಚಿಸಿರುವ `ಕಾವೇರಿ ಕಣಿವೆಗೆ ನೇಣು’ ಪುಸ್ತಕವನ್ನು ಪ್ರಗತಿಪರ ಚಿಂತಕ ಪ.ಮಲ್ಲೇಶ್ ಮೈಸೂ ರಿನ ಇಂಜಿನಿಯರುಗಳ ಸಂಸ್ಥೆ ಸಭಾಂಗಣ ದಲ್ಲಿ ಭಾನುವಾರ ಬಿಡುಗಡೆ ಮಾಡಿದರು.

ಸಂವಹನ ಪ್ರಕಾಶನ, ಕನ್ನಡ ಸಾಹಿತ್ಯ ಕಲಾಕೂಟ ಆಯೋಜಿಸಿದ್ದ ಕಾರ್ಯ ಕ್ರಮದಲ್ಲಿ ಪುಸ್ತಕ ಬಿಡುಗಡೆ ಮಾಡಿದ ಬಳಿಕ ಮಾತನಾಡಿದ ಅವರು, ಕಾವೇರಿ ವಿಚಾರ ದಲ್ಲಿ ಕರ್ನಾಟಕಕ್ಕೆ ಬರೀ ಅನ್ಯಾಯವೇ ಆಗುತ್ತಾ ಬಂದಿದೆ. ನ್ಯಾಯಾಂಗಕ್ಕೆ ಕಣ್ಣಿಲ್ಲ. ಹೀಗಾಗಿ ನ್ಯಾಯಾಂಗದ ಕಾವೇರಿ ತೀರ್ಪು ಗಳಿಂದ ರಾಜ್ಯಕ್ಕೆ ಬರೀ ಅನ್ಯಾಯವನ್ನೇ ಕಾಣುತ್ತಿದ್ದೇವೆ. ಇವೆಲ್ಲವನ್ನು `ಕಾವೇರಿ ಕಣಿವೆಗೆ ನೇಣು’ ಕೃತಿಯಲ್ಲಿ ಲೇಖಕರು ವಾಸ್ತವವನ್ನೇ ಬಿಚ್ಚಿಟ್ಟಿದ್ದಾರೆ ಎಂದರು.

ಕಾವೇರಿ ವಿಚಾರದಲ್ಲಿ ಕರ್ನಾಟಕದ ಪರ ವಕೀಲ ನಾರಿಮನ್ ಅನೇಕ ಸಂದರ್ಭ ಗಳಲ್ಲಿ ತಪ್ಪು ಹೆಜ್ಜೆ ಇಟ್ಟು, ಸೂಕ್ತವಾದ ಮಂಡಿಸದ ಕಾರಣ ರಾಜ್ಯಕ್ಕೆ ಸತತ ಅನ್ಯಾಯ ಆಗುತ್ತಲೇ ಬಂದಿದೆ. ಅದೇ ಸ್ಥಿತಿ ಈಗ ಮೇಕೆದಾಟು ಯೋಜನೆಯಲ್ಲಿಯೂ ಮರುಕಳಿಸುತ್ತದೆಯೇ ಎಂಬ ಆತಂಕ ಉಂಟಾಗಿದೆ ಎಂದು ಅಭಿಪ್ರಾಯಪಟ್ಟರು.

ಪ್ರತಿ ಹಂತದಲ್ಲೂ ಸುಪ್ರೀಂಕೋರ್ಟ್ ತೀರ್ಪು ಕರ್ನಾಟಕದ ವಿರುದ್ಧವಾಗಿಯೇ ಬಂದಿದೆ. ಇಂತಹ ಸಂದರ್ಭದಲ್ಲಿ ರಾಜ್ಯದ ಜನತೆ ನಾವೇನು ಮಾಡಬೇಕು ಎಂಬ ಬಗ್ಗೆ ಚಿಂತಿಸ ಬೇಕಾಗಿದೆ. ಸರ್ಕಾರಗಳು ಕೂಡ ಜನತೆ ಯನ್ನು ಎಚ್ಚರಿಸಬೇಕು. ಆದರೆ ನ್ಯಾಯಕ್ಕಾಗಿ ಬೀದಿಗಿಳಿದ ಜನರನ್ನೇ ಬಂಧಿಸಲಾಗು ತ್ತದೆ. ನಾವು ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಭವಿಷ್ಯಕ್ಕೆ ಮಾರಕವಾಗಲಿದೆ. ಮುಂದಿನ ಪೀಳಿಗೆಯ ಜನರು ನಮ್ಮನ್ನು ದೂಷಿಸುವುದರಲ್ಲಿ ಅನುಮಾನವೇ ಇಲ್ಲ. ಹೀಗಾಗಿ ನಮ್ಮ ಹೋರಾಟ ಅನಿವಾರ್ಯ ವಾಗಿದೆ ಎಂದರು. ಹಿರಿಯ ಸಂಸ್ಕøತಿ ಚಿಂತಕ ಕೆ.ರಘುರಾಂ ವಾಜಪೇಯಿ ಅಧ್ಯ ಕ್ಷತೆ ವಹಿಸಿದ್ದರು. ಕೃತಿ ಕುರಿತು ರೈತಪರ ಹೋರಾಟಗಾರ ಪ್ರೊ.ಕೆ.ಸಿ.ಬಸವರಾಜು, ಪ್ರಗತಿಪರ ರೈತ ವಡ್ಡಗೆರೆ ಚಿನ್ನಸ್ವಾಮಿ ಮಾತ ನಾಡಿದರು. ರೈತ ಪರ ಹೋರಾಟಗಾರ್ತಿ ಚನ್ನಪಟ್ಟಣದ ಅನುಸೂಯಮ್ಮ, ಸಾಮಾಜಿಕ ಹೋರಾಟಗಾರ್ತಿ ಕಲ್ಪನಾ ಶಿವಣ್ಣ, ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರ ಶೇಖರ್, ಲೇಖಕ ಅರ್ಜುನಹಳ್ಳಿ ಪ್ರನ್ನ ಕುಮಾರ್ ಇನ್ನಿತರರು ಉಪಸ್ಥಿತರಿದ್ದರು.