ಜೆಎಸ್‍ಎಸ್ ನರ್ಸಿಂಗ್ ವಿದ್ಯಾರ್ಥಿಗಳ ಸಂಭ್ರಮ

ಮೈಸೂರು: ಸುಂದರ ಸಂಜೆಯಲ್ಲಿ ಕುಣಿದು ಕುಪ್ಪಳಿಸಿದ ವಿದ್ಯಾ ರ್ಥಿನಿಯರು… ಬಣ್ಣದ ಚಿತ್ತಾರದಲ್ಲಿ ಕೇರಳ -ಆಂಧ್ರಮಯವಾಗಿ ಕಂಗೊಳಿಸಿದ ವೇದಿಕೆ… ಶಿಳ್ಳೆ, ಚಪ್ಪಾಳೆಗಳ ಝೇಂಕಾರ…

ನಗರದ ಜೆಎಸ್‍ಎಸ್ ಆಸ್ಪತ್ರೆ ಆವರಣದ ರಾಜೇಂದ್ರ ಭವನದಲ್ಲಿ ಜೆಎಸ್‍ಎಸ್ ನರ್ಸಿಂಗ್ ವತಿಯಿಂದ ನಡೆಯುತ್ತಿರುವ ಅಂತರ ಕಾಲೇಜು ಸಂಭ್ರಮ-2018ದ ಎರಡನೇ ದಿನವಾದ ಇಂದು ಮೊದಲಿಗೆ ವೇದಿಕೆಗೆ ಆಗಮಿಸಿದ ವಿದ್ಯಾರ್ಥಿನಿಯರ 10 ತಂಡಗಳು ತಾಯಿ ಚಾಮುಂಡೇಶ್ವರಿಯ ಭಕ್ತಿ ಪ್ರಧಾನ ಗೀತೆ ಹಾಗೂ ಆಂಧ್ರ್ರಪ್ರದೇಶ, ಕೇರಳದ ಕೂಚು ಪುಡಿ, ಕಥಕ್ಕಳಿ ನೃತ್ಯಗಳನ್ನು ಮಾಡಿ ಕಲಾರಸಿಕರ ಮನರಂಜಿಸಿದರು.

ತೃತೀಯ ವರ್ಷದ ನರ್ಸಿಂಗ್ ವಿದ್ಯಾರ್ಥಿ ಸುದರ್ಶನ್ ಮತ್ತು ತಂಡದವರು ‘ಹಚ್ಚೇವು ಕನ್ನಡದ ದೀಪ’ ಹಾಡನ್ನು ಹಾಡಿದರೆ, ಪ್ರಥಮ ವರ್ಷದ ವಿದ್ಯಾರ್ಥಿ ಸೋನಿಯಾ ತಂಡ ‘ಚಿನ್ನ ಚಿನ್ನ ಆಸೆ’ ಹಾಡನ್ನು ಹಾಡಿ ದರು. ನಂತರ ತೃತೀಯ ವರ್ಷದ ವಿದ್ಯಾರ್ಥಿ ವಿಬಿಯಾ ತಂಡ ಹಾಡಿದ ‘ಜೇನಿನ ಗೂಡು ನಾವೆಲ್ಲ ಬೇರೆಯಾದರೆ ಜೇನಿಲ್ಲ’ ಹಾಡಿಗೆ ಕುಣಿದು ಕುಪ್ಪಳಿಸಿದರು. ಕಾಲೇಜು ಪ್ರಾಂಶುಪಾಲೆ ಶೀಲಾ ವಿಲಿಯಂ, ಸಿಬ್ಬಂದಿಗಳಾದ ಅನಿತಾ, ಉಷಾ, ಮಮತಾ, ಅಂಬಿಕ, ನಿಶಾ, ಲಿಂಗರಾಜು, ಪರಮೇಶ್, ಸುನೀತ ಉಪಸ್ಥಿತರಿದ್ದರು