Tag: JSS

ಶ್ರೀ ಸುತ್ತೂರು ಮಠ ಅನಿಮೇಷನ್ ಚಿತ್ರ ನೇರಪ್ರಸಾರ ರಸಪ್ರಶ್ನೆಯಲ್ಲಿ ವಿಜೇತರಿಗೆ ಪ್ರಶಂಸನಾ ಪತ್ರ, ನಗದು ಬಹುಮಾನ ವಿತರಣೆ
ಮೈಸೂರು

ಶ್ರೀ ಸುತ್ತೂರು ಮಠ ಅನಿಮೇಷನ್ ಚಿತ್ರ ನೇರಪ್ರಸಾರ ರಸಪ್ರಶ್ನೆಯಲ್ಲಿ ವಿಜೇತರಿಗೆ ಪ್ರಶಂಸನಾ ಪತ್ರ, ನಗದು ಬಹುಮಾನ ವಿತರಣೆ

September 1, 2020

ಮೈಸೂರು, ಆ.31- ಆ.29ರಂದು ನೆರ ವೇರಿದ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ 105ನೆಯ ಜಯಂತಿ ಸಂದರ್ಭದಲ್ಲಿ ಬಿಡುಗಡೆಯಾದ ‘ಸುತ್ತೂರು ಶ್ರೀಮಠ-ಗುರುಪರಂಪರೆ’ ಮತ್ತು ‘ದಿ ಹೆರಿಟೇಜ್ ಆಫ್ ಶ್ರೀ ಸುತ್ತೂರು ಮಠ್’–ಅನಿಮೇಷನ್ ಚಿತ್ರ ಗಳು ಸಂಜೆ ನೇರಪ್ರಸಾರವಾದವು. ಸುಮಾರು 3500ಕ್ಕೂ ಹೆಚ್ಚು ಜನರು ಇವುಗಳನ್ನು ವೀಕ್ಷಿಸಿದರು. ಚಿತ್ರಗಳು ಪ್ರದ ರ್ಶನಗೊಳ್ಳುತ್ತಿದ್ದಂತೆ ಆಯಾ ಚಿತ್ರಗಳ ರಸಪ್ರಶ್ನೆ ಸ್ಪರ್ಧೆ ನಡೆಯಿತು. ಸರಿಯಾಗಿ ಮತ್ತು ಅತೀ ವೇಗವಾಗಿ ಉತ್ತರಿಸಿದ ಸ್ಪರ್ಧಾಳು ಗಳನ್ನು ವಿಜೇತರನ್ನಾಗಿ ಆಯ್ಕೆ ಮಾಡ ಲಾಯಿತು. ರಸಪ್ರಶ್ನೆ ಸ್ಪರ್ಧೆಯ ಕನ್ನಡ ವಿಭಾಗದಲ್ಲಿ…

ಮೇ 20ರಂದು ಜೆಎಸ್‍ಎಸ್‍ನ ಸುವರ್ಣ ಮಹೋತ್ಸವ ದತ್ತಿ ಉಪನ್ಯಾಸ, ಕೃತಿ ಲೋಕಾರ್ಪಣೆ
ಮೈಸೂರು

ಮೇ 20ರಂದು ಜೆಎಸ್‍ಎಸ್‍ನ ಸುವರ್ಣ ಮಹೋತ್ಸವ ದತ್ತಿ ಉಪನ್ಯಾಸ, ಕೃತಿ ಲೋಕಾರ್ಪಣೆ

May 18, 2019

ಮೈಸೂರು: ಜೆಎಸ್‍ಎಸ್ ಮಹಾವಿದ್ಯಾಪೀಠದ ಸುವರ್ಣ ಮಹೋತ್ಸವ ದತ್ತಿ ಉಪನ್ಯಾಸವನ್ನು ಮೇ 20ರಂದು ಬೆಳಿಗ್ಗೆ 10.30ಕ್ಕೆ ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆ ಆವರಣದಲ್ಲಿರುವ ಶ್ರೀ ರಾಜೇಂದ್ರ ಶತಮಾನೋತ್ಸವ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ. ಅಮೆರಿಕದ ವಾಷಿಂಗ್ ಟನ್‍ನಲ್ಲಿರುವ ಐಎಂಎಫ್‍ನ ಸಂಶೋಧನಾ ವಿಭಾಗದ ಆರ್ಥಿಕ ಸಲಹೆಗಾರರು ಮತ್ತು ನಿರ್ದೇಶಕರಾದ ಡಾ. ಗೀತಾ ಗೋಪಿನಾಥ್ ಅವರು `ಜಾಗತೀಕರಣ-ಸವಾಲುಗಳು ಮತ್ತು ಸಹಕಾರದ ಅಗತ್ಯ’ ವಿಷಯ ಕುರಿತು ಮಾತನಾಡಲಿದ್ದಾರೆ. ಇದೇ ಸಂದರ್ಭ ದಲ್ಲಿ ಹಿಂದಿನ ದತ್ತಿ ಉಪನ್ಯಾಸ ನೀಡಿದ ಹೆಸರಾಂತ ಲೆಕ್ಕ ಪರಿ ಶೋಧಕರು, ಅಂಕಣಕಾರರು ಹಾಗೂ ಆರ್‍ಬಿಐಜನ…

ಜೆಎಸ್‍ಎಸ್ ನರ್ಸಿಂಗ್ ವಿದ್ಯಾರ್ಥಿಗಳ ಸಂಭ್ರಮ
ಮೈಸೂರು

ಜೆಎಸ್‍ಎಸ್ ನರ್ಸಿಂಗ್ ವಿದ್ಯಾರ್ಥಿಗಳ ಸಂಭ್ರಮ

December 14, 2018

ಮೈಸೂರು: ಸುಂದರ ಸಂಜೆಯಲ್ಲಿ ಕುಣಿದು ಕುಪ್ಪಳಿಸಿದ ವಿದ್ಯಾ ರ್ಥಿನಿಯರು… ಬಣ್ಣದ ಚಿತ್ತಾರದಲ್ಲಿ ಕೇರಳ -ಆಂಧ್ರಮಯವಾಗಿ ಕಂಗೊಳಿಸಿದ ವೇದಿಕೆ… ಶಿಳ್ಳೆ, ಚಪ್ಪಾಳೆಗಳ ಝೇಂಕಾರ… ನಗರದ ಜೆಎಸ್‍ಎಸ್ ಆಸ್ಪತ್ರೆ ಆವರಣದ ರಾಜೇಂದ್ರ ಭವನದಲ್ಲಿ ಜೆಎಸ್‍ಎಸ್ ನರ್ಸಿಂಗ್ ವತಿಯಿಂದ ನಡೆಯುತ್ತಿರುವ ಅಂತರ ಕಾಲೇಜು ಸಂಭ್ರಮ-2018ದ ಎರಡನೇ ದಿನವಾದ ಇಂದು ಮೊದಲಿಗೆ ವೇದಿಕೆಗೆ ಆಗಮಿಸಿದ ವಿದ್ಯಾರ್ಥಿನಿಯರ 10 ತಂಡಗಳು ತಾಯಿ ಚಾಮುಂಡೇಶ್ವರಿಯ ಭಕ್ತಿ ಪ್ರಧಾನ ಗೀತೆ ಹಾಗೂ ಆಂಧ್ರ್ರಪ್ರದೇಶ, ಕೇರಳದ ಕೂಚು ಪುಡಿ, ಕಥಕ್ಕಳಿ ನೃತ್ಯಗಳನ್ನು ಮಾಡಿ ಕಲಾರಸಿಕರ ಮನರಂಜಿಸಿದರು. ತೃತೀಯ ವರ್ಷದ…

ಜೆಎಸ್‍ಎಸ್ ಅಂತರ ಸಂಸ್ಥೆಗಳ 3 ದಿನಗಳ ಕ್ರೀಡಾಕೂಟ
ಮೈಸೂರು

ಜೆಎಸ್‍ಎಸ್ ಅಂತರ ಸಂಸ್ಥೆಗಳ 3 ದಿನಗಳ ಕ್ರೀಡಾಕೂಟ

November 24, 2018

ಸುತ್ತೂರು ಶ್ರೀಕ್ಷೇತ್ರದಲ್ಲಿ ಸಂಸದ ಆರ್.ಧ್ರುವನಾರಾಯಣ್ ಚಾಲನೆ ನಂಜನಗೂಡು: ಸುತ್ತೂರು ಶ್ರೀಕ್ಷೇತ್ರದಲ್ಲಿ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಸಂಸ್ಮರಣೆಯ ಅಂಗವಾಗಿ ನಡೆಯುತ್ತಿರುವ 3 ದಿನಗಳ ಜೆಎಸ್‍ಎಸ್ ಅಂತರ-ಸಂಸ್ಥೆಗಳ ಕ್ರೀಡಾ ಕೂಟಕ್ಕೆ ಸಂಸದ ಆರ್.ಧ್ರುವನಾರಾಯಣ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿ ಗಳು ಓದಿನೊಂದಿಗೆ ಕ್ರೀಡೆ ಮತ್ತು ಸಾಂಸ್ಕø ತಿಕ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಬೇಕು. ಸುತ್ತೂರು ಶ್ರೀಕ್ಷೇತ್ರ ರಾಜ್ಯದ ವ್ಯಾಪ್ತಿಯಲ್ಲಿ ತನ್ನ ಸಂಸ್ಥೆಗಳನ್ನು ತೆರೆಯುವ ಮೂಲಕ ಬಡ ಹಾಗೂ ರೈತ ಮಕ್ಕಳ ವಿದ್ಯಾಭ್ಯಾಸಕ್ಕೆ ಅವಕಾಶ ಕಲ್ಪಿಸಿಕೊಟ್ಟಿದ್ದು, ಶಿಸ್ತು…

ಜೆಎಸ್‍ಎಸ್ ವಿಜ್ಞಾನ-ತಾಂತ್ರಿಕ ವಿಶ್ವವಿದ್ಯಾನಿಲಯದ ಪ್ರಥಮ ಘಟಿಕೋತ್ಸವ
ಮೈಸೂರು

ಜೆಎಸ್‍ಎಸ್ ವಿಜ್ಞಾನ-ತಾಂತ್ರಿಕ ವಿಶ್ವವಿದ್ಯಾನಿಲಯದ ಪ್ರಥಮ ಘಟಿಕೋತ್ಸವ

November 18, 2018

ಮೈಸೂರು:  ಮೈಸೂರಿನ ಜೆಎಸ್‍ಎಸ್ ವಿಜ್ಞಾನ ಮತ್ತು ತಾಂತ್ರಿಕ ವಿಶ್ವ ವಿದ್ಯಾನಿಲಯದ ಮೊಟ್ಟ ಮೊದಲ ಘಟಿಕೋತ್ಸವ ಶನಿವಾರ ಮೈಸೂರಿನ ವಿದ್ಯಾ ಸಂಸ್ಥೆಯ ಆವರಣದಲ್ಲಿ ನಡೆದು 2017-18ನೇ ಸಾಲಿನಲ್ಲಿ 149 ಎಂ.ಟೆಕ್, 96 ಎಂಬಿಎ ಹಾಗೂ 24 ಕಾರ್ಪೊ ರೇಟ್ ಫೈನಾನ್ಸ್ ವಿದ್ಯಾರ್ಥಿಗಳು ಪದವಿ ಪ್ರಮಾಣಪತ್ರ ಗಳನ್ನು ಪಡೆದುಕೊಂಡರು. ಪ್ರತಿ ವಿಭಾಗದಲ್ಲಿ ಅತೀ ಹೆಚ್ಚು ಅಂಕ ಗಳಿಸಿದ 13 ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪದಕಗಳನ್ನು ಮತ್ತು 4 ದತ್ತಿ ಬಹುಮಾನಗಳನ್ನು ವಿತರಿಸಲಾಯಿತು. ಘಟಿಕೋತ್ಸವದ ಪ್ರಮುಖ ಅತಿಥಿ ಭಾರತ ಸರ್ಕಾರದ ಪ್ರಸಾರ ಭಾರತಿ…

ಮೈಸೂರಿನ ಸುತ್ತೂರು ಶಾಖಾ ಮಠದಲ್ಲಿ ನಾಳೆಯಿಂದ ಅದ್ಧೂರಿ ಬಸವ ಜಯಂತಿ
ಮೈಸೂರು

ಮೈಸೂರಿನ ಸುತ್ತೂರು ಶಾಖಾ ಮಠದಲ್ಲಿ ನಾಳೆಯಿಂದ ಅದ್ಧೂರಿ ಬಸವ ಜಯಂತಿ

August 3, 2018

ಮೈಸೂರು:  ಅಖಿಲ ಭಾರತ ವೀರಶೈವ ಮಹಾಸಭಾ, ವೀರಶೈವ ಲಿಂಗಾಯತ ಸಂಘ ಸಂಸ್ಥೆಗಳು, ಬಸವ ಬಳಗಗಳ ಒಕ್ಕೂಟದ ಆಶ್ರಯದಲ್ಲಿ ಆ.4 ಮತ್ತು 5ರಂದು ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನ ಸುತ್ತೂರು ಮಠದಲ್ಲಿ ಎರಡು ದಿನಗಳ ಬಸವ ಜಯಂತಿ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಒಕ್ಕೂಟದ ಅಧ್ಯಕ್ಷ ಕೆ.ಶಿವಕುಮಾರ್ ದೂರ ಇಂದಿಲ್ಲಿ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಬಸವ ಜಯಂತಿ ಕಾರ್ಯಕ್ರಮದ ವಿವರಗಳನ್ನು ನೀಡಿದ ಅವರು, ಬಸವಣ್ಣನವರ ಪುತ್ಥಳಿಯ ಬೃಹತ್ ಮೆರವಣಿಗೆ, ವಚನ ಸಂಗೀತ, ವಿಚಾರ ಗೋಷ್ಠಿ, ವಿಶೇಷ ಉಪನ್ಯಾಸ, ಸಾಂಸ್ಕೃತಿಕ…

ಬಸವಣ್ಣನವರ ತತ್ವಾದರ್ಶಗಳು ಎಂದೆಂದಿಗೂ ಪ್ರಸ್ತುತ
ಮೈಸೂರು

ಬಸವಣ್ಣನವರ ತತ್ವಾದರ್ಶಗಳು ಎಂದೆಂದಿಗೂ ಪ್ರಸ್ತುತ

July 10, 2018

ಮೈಸೂರು:  ಹನ್ನೆರಡನೇ ಶತಮಾನದಲ್ಲಿ ಆಗಿ ಹೋದ ಬಸವಣ್ಣನವರ ತತ್ವಾದರ್ಶಗಳು ಎಂದೆಂದಿಗೂ ಪ್ರಸ್ತುತ ಎಂದು ಅಮೇರಿಕಾದಲ್ಲಿರುವ ಭಾರತದ ರಾಯಭಾರಿ ಕಚೇರಿಯ ಮೊದಲ ಕಾರ್ಯದರ್ಶಿ ಶಂಭುಲಿಂಗಪ್ಪ ತಿಳಿಸಿದರು. ಅಮೇರಿಕಾದ ಮೆರಿಲ್ಯಾಂಡ್‍ನಲ್ಲಿ ನಡೆದ ಜೆಎಸ್‍ಎಸ್ ಸ್ಪಿರಿಚ್ಯುಯಲ್ ಮಿಷನ್ನಿನ 12ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸುತ್ತೂರು ಮಠ ಹಾಗೂ ಜೆಎಸ್‍ಎಸ್ ಮಹಾವಿದ್ಯಾಪೀಠವು ಸಾಮಾಜಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಪ್ರಶಂಸಿಸಿದರು. ಅಮೇರಿಕಾದ ಮಿಷಿಗನ್‍ನಲ್ಲಿ 1999ರಲ್ಲಿ ಜೆಎಸ್‍ಎಸ್ ಸ್ಪಿರಿಚ್ಯುಯಲ್ ಮಿಷನ್ ಪ್ರಾರಂಭವಾಯಿತು. 2006ರಲ್ಲಿ ಮೆರಿಲ್ಯಾಂಡ್‍ನಲ್ಲಿ ಜೆಎಸ್‍ಎಸ್ ಮಿಷನ್‍ನ ಕೇಂದ್ರ…

ಕು. ಎನ್.ಕೆ. ವರ್ಷಾಗೆ ಬಾಲಶ್ರೀ ಶಿಬಿರದಲ್ಲಿ ಬಹುಮಾನ
ಮೈಸೂರು

ಕು. ಎನ್.ಕೆ. ವರ್ಷಾಗೆ ಬಾಲಶ್ರೀ ಶಿಬಿರದಲ್ಲಿ ಬಹುಮಾನ

June 29, 2018

ಮೈಸೂರು: ಜೆಎಸ್‍ಎಸ್ ಸಹನಾ ಸಮನ್ವಯ ಶಿಕ್ಷಣ ಶಾಲೆಯಲ್ಲಿ 4ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿಶೇಷ ಚೇತನಳಾದ ಕು. ಎನ್.ಕೆ. ವರ್ಷಾ ನವದೆಹಲಿಯಲ್ಲಿ ನಡೆದ ರಾಷ್ಟ್ರಮಟ್ಟದ ಬಾಲಶ್ರೀ ಶಿಬಿರದಲ್ಲಿ ಭಾಗವಹಿಸಿ ಮಾದರಿ ತಯಾರಿಕೆಯಲ್ಲಿ ಪ್ರಶಸ್ತಿ ಹಾಗೂ ರೂ. 5000 ನಗದು ಬಹುಮಾನ ಪಡೆದುಕೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Translate »