ಮೇ 20ರಂದು ಜೆಎಸ್‍ಎಸ್‍ನ ಸುವರ್ಣ ಮಹೋತ್ಸವ ದತ್ತಿ ಉಪನ್ಯಾಸ, ಕೃತಿ ಲೋಕಾರ್ಪಣೆ
ಮೈಸೂರು

ಮೇ 20ರಂದು ಜೆಎಸ್‍ಎಸ್‍ನ ಸುವರ್ಣ ಮಹೋತ್ಸವ ದತ್ತಿ ಉಪನ್ಯಾಸ, ಕೃತಿ ಲೋಕಾರ್ಪಣೆ

May 18, 2019

ಮೈಸೂರು: ಜೆಎಸ್‍ಎಸ್ ಮಹಾವಿದ್ಯಾಪೀಠದ ಸುವರ್ಣ ಮಹೋತ್ಸವ ದತ್ತಿ ಉಪನ್ಯಾಸವನ್ನು ಮೇ 20ರಂದು ಬೆಳಿಗ್ಗೆ 10.30ಕ್ಕೆ ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆ ಆವರಣದಲ್ಲಿರುವ ಶ್ರೀ ರಾಜೇಂದ್ರ ಶತಮಾನೋತ್ಸವ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.

ಅಮೆರಿಕದ ವಾಷಿಂಗ್ ಟನ್‍ನಲ್ಲಿರುವ ಐಎಂಎಫ್‍ನ ಸಂಶೋಧನಾ ವಿಭಾಗದ ಆರ್ಥಿಕ ಸಲಹೆಗಾರರು ಮತ್ತು ನಿರ್ದೇಶಕರಾದ ಡಾ. ಗೀತಾ ಗೋಪಿನಾಥ್ ಅವರು `ಜಾಗತೀಕರಣ-ಸವಾಲುಗಳು ಮತ್ತು ಸಹಕಾರದ ಅಗತ್ಯ’ ವಿಷಯ ಕುರಿತು ಮಾತನಾಡಲಿದ್ದಾರೆ.

ಇದೇ ಸಂದರ್ಭ ದಲ್ಲಿ ಹಿಂದಿನ ದತ್ತಿ ಉಪನ್ಯಾಸ ನೀಡಿದ ಹೆಸರಾಂತ ಲೆಕ್ಕ ಪರಿ ಶೋಧಕರು, ಅಂಕಣಕಾರರು ಹಾಗೂ ಆರ್‍ಬಿಐಜನ ಅರೆಕಾಲಿಕ ನಿರ್ದೇಶಕ ರಾದ ಎಸ್.ಗುರುಮೂರ್ತಿಯವರ `Bharath-Global Ambitions and Local Challenges’ ಉಪನ್ಯಾಸದ ಕೃತಿಯನ್ನು ಬೆಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಗಳಾದ ಡಾ.ಕೆ.ಆರ್.ವೇಣುಗೋಪಾಲ್ ಅವರು ಲೋಕಾರ್ಪಣೆ ಮಾಡಲಿದ್ದಾರೆ. ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ. ಜಿ.ಹೇಮಂತಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ.

Translate »