ಜೆಎಸ್‍ಎಸ್ ವಿಜ್ಞಾನ-ತಾಂತ್ರಿಕ ವಿಶ್ವವಿದ್ಯಾನಿಲಯದ ಪ್ರಥಮ ಘಟಿಕೋತ್ಸವ
ಮೈಸೂರು

ಜೆಎಸ್‍ಎಸ್ ವಿಜ್ಞಾನ-ತಾಂತ್ರಿಕ ವಿಶ್ವವಿದ್ಯಾನಿಲಯದ ಪ್ರಥಮ ಘಟಿಕೋತ್ಸವ

November 18, 2018

ಮೈಸೂರು:  ಮೈಸೂರಿನ ಜೆಎಸ್‍ಎಸ್ ವಿಜ್ಞಾನ ಮತ್ತು ತಾಂತ್ರಿಕ ವಿಶ್ವ ವಿದ್ಯಾನಿಲಯದ ಮೊಟ್ಟ ಮೊದಲ ಘಟಿಕೋತ್ಸವ ಶನಿವಾರ ಮೈಸೂರಿನ ವಿದ್ಯಾ ಸಂಸ್ಥೆಯ ಆವರಣದಲ್ಲಿ ನಡೆದು 2017-18ನೇ ಸಾಲಿನಲ್ಲಿ 149 ಎಂ.ಟೆಕ್, 96 ಎಂಬಿಎ ಹಾಗೂ 24 ಕಾರ್ಪೊ ರೇಟ್ ಫೈನಾನ್ಸ್ ವಿದ್ಯಾರ್ಥಿಗಳು ಪದವಿ ಪ್ರಮಾಣಪತ್ರ ಗಳನ್ನು ಪಡೆದುಕೊಂಡರು. ಪ್ರತಿ ವಿಭಾಗದಲ್ಲಿ ಅತೀ ಹೆಚ್ಚು ಅಂಕ ಗಳಿಸಿದ 13 ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪದಕಗಳನ್ನು ಮತ್ತು 4 ದತ್ತಿ ಬಹುಮಾನಗಳನ್ನು ವಿತರಿಸಲಾಯಿತು.

ಘಟಿಕೋತ್ಸವದ ಪ್ರಮುಖ ಅತಿಥಿ ಭಾರತ ಸರ್ಕಾರದ ಪ್ರಸಾರ ಭಾರತಿ ಮಂಡಳಿ ಅಧ್ಯಕ್ಷ ಡಾ.ಎ.ಸೂರ್ಯ ಪ್ರಕಾಶ್, ವಿವಿ ಕುಲಾಧಿಪತಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮತ್ತು ಇನ್ನಿತರ ಅತಿಥಿ, ಗಣ್ಯ ರನ್ನು ಮೆರವಣಿಗೆಯಲ್ಲಿ ವೇದಿಕೆಗೆ ಕರೆತರಲಾಯಿತು.

ಘಟಿಕೋತ್ಸವದಲ್ಲಿ ಉನ್ನತ ಶ್ರೇಣಿಯೊಂದಿಗೆ ರ್ಯಾಂಕ್ ಪಡೆದ ಸಾಧನೆ ಮಾಡಿದ ಎಂ.ಟೆಕ್‍ನಲ್ಲಿ ಇಂಡಸ್ಟ್ರಿಯಲ್ ಸ್ಟ್ರಕ್ಚರ್ ವಿಭಾಗದಲ್ಲಿ ಎಸ್.ಬಾಲಸುಬ್ರಹ್ಮಣ್ಯ ಎಸ್ ಕುರ್ದೆ ಕರ್ ಅವರಿಗೆ ಸಿವಿಲ್ ಏಯ್ಡ್ ಬ್ಯೋರೋ ವೆರಿಟಾಸ್ ದತ್ತಿ ಬಹುಮಾನ, ಎಂಬಿಎನಲ್ಲಿ ಸಿ.ಪ್ರವೀಣ್‍ಕುಮಾರ್ ಅವರಿಗೆ ಲೇಟ್ ಪಿ.ನಾಗೇಂದ್ರ ಸ್ಮಾರಕ ದತ್ತಿ ಬಹುಮಾನ, ಎಂ.ಟೆಕ್ ಮೆಂಟೆನೆನ್ಸ್ ಇಂಜಿನಿಯರಿಂಗ್ ವಿಭಾಗದಲ್ಲಿ ಎಚ್.ಆರ್.ಧನುಷ್ ಇ.ಪಿ.ನಂಜಪ್ಪ ಸ್ಮಾರಕ ದತ್ತಿ ಬಹು ಮಾನ, ಎಂ.ಟೆಕ್ ಎನ್ವಿರೋನ್‍ಮೆಂಟ್ ಇಂಜಿನಿಯ ರಿಂಗ್ ವಿಭಾಗದಲ್ಲಿ ಸಿ.ನಿಶ್ಚಲ್ ಪ್ರೊ.ಟಿ.ಪಿ.ಹಾಲಪ್ಪಗೌಡ ದತ್ತಿ ಬಹುಮಾನ ಮತ್ತು ಪದಕ ಪಡೆದುಕೊಂಡರು.
ಉಳಿದಂತೆ ಎಂ.ಟೆಕ್‍ನಲ್ಲಿ ಜೆ.ನವೀನ್‍ಕುಮಾರ್, ಎಚ್. ಎಸ್.ಭಾನು, ಪಿ.ಮಾನಸಮಿತ್ರ, ಬಿ.ಸುಷ್ಮಾಸುಮತಿ, ಎಸ್.ಆರ್. ಯಶಸ್, ಆರ್.ಆದಿತ್ಯ ಕಶ್ಯಪ್, ಎಂ.ತ್ರಿವೇಣಿ, ಪಿ.ರಂಜಿತಾ, ಎಂಬಿಎನಲ್ಲಿ ಎಸ್.ಆಶಾ ಪದಕಗಳನ್ನು ಪಡೆದರು.

ಭಾರತ ಸರ್ಕಾರದ ಪ್ರಸಾರ ಭಾರತಿ ಮಂಡಳಿ ಅಧ್ಯಕ್ಷ ಡಾ.ಎ.ಸೂರ್ಯಪ್ರಕಾಶ್ ಘಟಿಕೋತ್ಸವ ಭಾಷಣ ಮಾಡಿ ದರು. ಸಾನ್ನಿಧ್ಯ ವಹಿಸಿದ್ದ ಕುಲಾಧಿಪತಿ, ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರ ಮತ್ತು ಪದಕ ಬಹುಮಾನಗಳನ್ನು ವಿತರಿ ಸಿದರು. ಕುಲಪತಿ ಡಾ.ಬಿ.ಜಿ.ಸಂಗಮೇಶ್ವರ, ಜೆಎಸ್‍ಎಸ್ ಮಹಾವಿದ್ಯಾಪೀಠದ ಕಾಂiÀರ್iನಿರ್ವಾಹಕ ಡಾ.ಸಿ.ಜಿ. ಬೆಟಸೂರಮಠ, ಕುಲಸಚಿವ ಪ್ರೊ.ಕೆ.ಎಸ್.ಲೋಕೇಶ್, ಪರೀಕ್ಷಾ ನಿಯಂತ್ರಣಾಧಿಕಾರಿ ಪ್ರೊ.ಕೆ.ಎನ್.ಉದಯ ಕುಮಾರ್ ಉಪಸ್ಥಿತರಿದ್ದರು.

Translate »