ವನ್ಯಜೀವಿ ನೆಲೆ ಕಡಿಮೆಯಾಗುತ್ತಿರುವುದರಿಂದ ಮಾನವ-ಪ್ರಾಣಿ ಸಂಘರ್ಷ
ಮೈಸೂರು

ವನ್ಯಜೀವಿ ನೆಲೆ ಕಡಿಮೆಯಾಗುತ್ತಿರುವುದರಿಂದ ಮಾನವ-ಪ್ರಾಣಿ ಸಂಘರ್ಷ

November 18, 2018

ಮೈಸೂರು: ವನ್ಯ ಜೀವಿಗಳು ವಾಸಿಸು ತ್ತಿರುವ ಅರಣ್ಯ ಪ್ರದೇಶ ದಿನೇ ದಿನೆ ಕಡಿಮೆಯಾಗು ತ್ತಿರುವುದು ಮಾನವ-ಪ್ರಾಣಿ ಸಂಘರ್ಷಕ್ಕೆ ಪ್ರಮುಖ ಕಾರಣ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿದ್ರಾ ಮಪ್ಪ ಚೆಲ್ಕಾಪುರೆ ಇಂದಿಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರು ರೌಂಡ್ ಟೇಬಲ್-21 ಮತ್ತು ಮೈಸೂರು ಲೇಡಿಸ್ ಸರ್ಕಲ್-9 ಸಂಯುಕ್ತಾಶ್ರಯದಲ್ಲಿ ಮೈಸೂರಿನ ಗೋಕುಲಂನಲ್ಲಿರುವ ಮೈಸೂರು ಪಶ್ಚಿಮ ಲಯನ್ಸ್ ಸೇವಾ ನಿಕೇತನ ಶಾಲಾ ಸಭಾಂಗಣದಲ್ಲಿ ಏರ್ಪಡಿಸಿದ್ದ `ಮಾನವ ಪ್ರಾಣಿ ಸಂಘರ್ಷ: ಶಾಂತಿಯುತ ಸಹಬಾಳ್ವೆ’ (Human-Animal Conflict : Finding Peaceful Co-Existence) ಕುರಿತ ಟ್ಯಾಲೆಂಟ್ಸ್ 2018 ಅಂತರ ಶಾಲಾ ಸ್ಪರ್ಧೆಗಳನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಈ ಭೂಮಿಯಲ್ಲಿ ಪ್ರಾಣಿ, ಪಕ್ಷಿ, ಕ್ರಿಮಿಕೀಟ ಸೇರಿದಂತೆ ಪ್ರತಿಯೊಂದು ಜೀವಿಯೂ ಬದುಕಿದ್ದರೆ ಮಾತ್ರ ಮನುಷ್ಯ ಜೀವಿಸಲು ಸಾಧ್ಯ. ಅವುಗಳಿಂದ ಹಲವು ಅನುಕೂಲಗಳು ಪ್ರಕೃತಿಗೆ ಸಿಗುತ್ತಿವೆ. ಈ ಹಿಂದೆ ಇದ್ದ ನ್ಯಾಚುರಲ್ ಪಾರ್ಕ್ ಗಳು ಮತ್ತು ಅರಣ್ಯ ಪ್ರದೇಶಗಳು ಕಾಲ ಕ್ರಮೇಣ ಕಡಿಮೆ ಯಾಗುತ್ತಾ ಬಂದಿರುವುದಲ್ಲದೆ, ಸುತ್ತ ಬ್ಯಾರಿಕೇಡ್ ನಿರ್ಮಿಸ ಲಾಗಿದೆ ಎಂದು ತಿಳಿಸಿದರು.
ಪೃಥ್ವಿಯ ಬಹುತೇಕ ಭಾಗ ಪ್ರಾಣಿಗಳಿಂದಾವೃತವಾಗಿತ್ತು. ಆ ಪ್ರಾಂತವನ್ನು ನಾವು ಆಕ್ರಮಿಸಿಕೊಂಡಿರುವುದರಿಂದ ಪ್ರಾಣಿ ಗಳು -ಮಾನವನ ಸಂಘರ್ಷ ಆರಂಭವಾಗಿದೆ. ಪರಿ ಣಾಮ ಮನುಷ್ಯನಿಗೆ ಗಾಯ, ಸಾವು, ಆಸ್ತಿ, ಬೆಳೆ ನಷ್ಟಗಳಾ ಗುತ್ತಿವೆ ಎಂದು ಸಿದ್ರಾಮಪ್ಪ ತಿಳಿಸಿದರು.

ಈ ಸಂಘರ್ಷವನ್ನು ತಪ್ಪಿಸಬೇಕೆಂದರೆ ಮನುಷ್ಯ ಸಹಿಷ್ಣುತೆ ಯಿಂದಿದ್ದು ಜವಾಬ್ದಾರಿಯಿಂದ ವರ್ತಿಸಬೇಕಾಗಿದೆ. ಪ್ರಾಣಿ-ಪಕ್ಷಿ, ಮರ ಗಿಡಗಳನ್ನು ರಕ್ಷಿಸಿದರೆ ಮಾತ್ರ ಶಾಂತಿಯುತ ಸಹ ಬಾಳು ಸಾಧ್ಯ ಎಂದು ಅವರು ಇದೇ ಸಂದರ್ಭ ಅಭಿಪ್ರಾಯ ಪಟ್ಟರು. ಮೈಸೂರು ನಗರ ಹಾಗೂ ಸುತ್ತಮುತ್ತಲಿನ 15 ಶಾಲೆಗಳ 5ರಿಂದ 10ನೇ ತರಗತಿಯ 250 ವಿದ್ಯಾರ್ಥಿಗಳು ಹಾಡು ಗಾರಿಕೆ, ಪ್ರಬಂಧ, ನೃತ್ಯ, ನಾಟಕ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡು, `ಮಾನವ-ಪ್ರಾಣಿ ಸಂಘರ್ಷ’ ಘೋಷಣೆ ಯೊಂದಿಗೆ ತಮ್ಮ ಪ್ರತಿಭೆ ಅನಾವರಣಗೊಳಿಸಿದರು.

ಹಿರಿಯ ಕರ್ನಾಟಕ ಸಂಗೀತಗಾರರಾದ ಜಮುನಾ ಶ್ರೀನಿ ವಾಸ್, ನೃತ್ಯ ಮತ್ತು ಯೋಗ ಬೋಧಕ ಸಂದೀಪ್ ಶಿವ ಶಂಕರ್ ಹಾಗೂ ರಂಗಕಲಾವಿದ ಆಂಡೋ ಕ್ರಿಸ್ಟ್‍ನ ಅವರು ಸ್ಪರ್ಧೆಗಳ ತೀರ್ಪುಗಾರರಾಗಿ ಪಾಲ್ಗೊಂಡಿದ್ದರು.
ಮೈಸೂರು ಲೇಡಿಸ್ ಸರ್ಕಲ್ -9ರ ಅಧ್ಯಕ್ಷೆ ಸವಿತಾ ರಂಗ, ಮೈಸೂರು ರೌಂಡ್ ಟೇಬಲ್-21ರ ಅಧ್ಯಕ್ಷ ಹೆಚ್ ಹೆಚ್. ರಾಮ್, ಟ್ಯಾಲೆಂಟ್ಸ್ 2018ರ ಸಂಚಾಲಕರಾದ ಕೆ.ಜಿ.ಮಿಕ್ಕಿ ಬೋಪಣ್ಣ, ವನಿತಾ ಸಂತೋಷ್, ಮೈಸೂರು ಲೇಡೀಸ್ ಸರ್ಕಲ್-9ರ ಕಾರ್ಯದರ್ಶಿ ಪೂಜಾ ಹರೀಶ್ ಹಾಗೂ ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಧ್ಯಾಹ್ನ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹು ಮಾನಗಳನ್ನು ವಿತರಿಸಲಾಯಿತು.

ಸ್ಪರ್ಧಾ ವಿಜೇತ ಶಾಲೆಗಳು
ಇಂದು ನಡೆದ ಟ್ಯಾಲೆಂಟ್ಸ್-2018 ಸಾಂಸ್ಕøತಿಕ ಸ್ಪರ್ಧೆ ಗಳಲ್ಲಿ ವಿದ್ಯಾವರ್ಧಕ (ಪ್ರಥಮ ಬಹುಮಾನ), ಮೈಸೂರು ವೆಸ್ಟ್ ಲಯನ್ಸ್ ಸೇವಾ ನಿಕೇತನ (ದ್ವಿತೀಯ) ಹಾಗೂ ಶ್ರೀ ಶಾರದಾ ಪಬ್ಲಿಕ್ ಶಾಲೆ (ತೃತೀಯ)ಯ ವಿದ್ಯಾರ್ಥಿ ಗಳು ಓವರ್ ಆಲ್ ಚಾಂಪಿಯನ್‍ಶಿಪ್ ಗಳಿಸಿದ್ದಾರೆ.

ಉಳಿದಂತೆ ನಾಟಕ ವಿಭಾಗದಲ್ಲಿ ವಿಜಯ ವಿಠಲ, ಮೈಸೂರು ವೆಸ್ಟ್ ಲಯನ್ಸ್ ಸೇವಾ ನಿಕೇತನ ಹಾಗೂ ರೈನ್‍ಬೋ ಪಬ್ಲಿಕ್ ಶಾಲೆಗಳು ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಗಳಿಸಿದವು. ಸಮೂಹ ಗಾಯನ/ನೃತ್ಯದಲ್ಲಿ ಮೈಸೂರು ವೆಸ್ಟ್ ಲಯನ್ಸ್ ಸೇವಾ ನಿಕೇತನ (ಪ್ರಥಮ), ಜಿಇಟಿ ಕಾನ್ವೆಂಟ್ (ದ್ವಿತೀಯ) ಹಾಗೂ ಕುಂಬಾರಕೊಪ್ಪಲು ಸರ್ಕಾರಿ ಪ್ರೌಢಶಾಲೆ (ತೃತೀಯ) ವಿದ್ಯಾರ್ಥಿಗಳು ಬಹುಮಾನ ಪಡೆದುಕೊಂಡರು. ಸೋಲೋ ಪರ್ಫಾಮೆನ್ಸ್ ವಿಭಾಗದಲ್ಲಿ ವಿದ್ಯಾವರ್ಧಕ ಶಾಲೆ ಪ್ರಥಮ, ರೈನ್‍ಬೋ ಪಬ್ಲಿಕ್ ಶಾಲೆಗೆ ದ್ವಿತೀಯ ಹಾಗೂ ವಿಜಯ ವಿಠಲ ಶಾಲೆಗೆ ತೃತೀಯ ಬಹುಮಾನ ಸಂದಿವೆ. ಇಂಗ್ಲಿಷ್ ಪ್ರಬಂಧ ಸ್ಪರ್ಧೆಯಲ್ಲಿ ವಿಜಯ ವಿಠಲ ಶಾಲೆಯ ಸಾನ್ವಿ ಪ್ರಭು ಹಾಗೂ ಕನ್ನಡ ಪ್ರಬಂಧದಲ್ಲಿ ವಿಜಯ ವಿಠಲ ಶಾಲೆಯ ಆರ್. ದೀಪಿಕಾ ವಿಜೇತರಾಗಿದ್ದಾರೆ.

Translate »