ಸೆ.22ರಂದು ‘ಸೆಲೆಬ್ರೇಷನ್ ಮೈಸೂರು ಮ್ಯಾರಥಾನ್’

ಮೈಸೂರು,ಸೆ.14-ಸೆಲೆಬ್ರೇಷನ್ ರನ್ ಸೀರಿಸ್‍ನ ಅಂಗವಾಗಿ ಓಟದ ಸರಣಿ ಆಚ ರಣೆಯ ವ್ಯವಸ್ಥಾಪಕ ಸಂಸ್ಥೆಯಾದ ‘ಲೈಫ್ ಈಸ್ ಕಾಲಿಂಗ್ ಸ್ಪೋಟ್ರ್ಸ್’ ಸಂಸ್ಥೆಯು ಸೆ.22ರಂದು ‘ಸೆಲೆಬ್ರೇಷನ್ ಮೈಸೂರು ಮ್ಯಾರಥಾನ್’ ಆಚರಣೆಯ 9ನೇ ಆವೃತ್ತಿ ಯನ್ನು ಹಮ್ಮಿಕೊಂಡಿದೆ. ಮೈಸೂರಿನ ಅರಮನೆಯ ಬಲರಾಮ ಗೇಟ್ ಮ್ಯಾರ ಥಾನ್ ಆರಂಭದ ಸ್ಥಳವಾಗಿದೆ.

ಮ್ಯಾರಥಾನ್ ಉದ್ಘಾಟನಾ ಸಮಾ ರಂಭದಲ್ಲಿ ಸುತ್ತೂರು ಮಠದ ಶ್ರೀ ಶಿವ ರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮತ್ತು ಶಾಸಕ ಎಸ್.ಎ.ರಾಮದಾಸ್ ಉಪಸ್ಥಿತರಿರುವರು.

ಈ ಓಟವು ನಸುಕಿನ 4.45ಕ್ಕೆ ಆರಂಭ ವಾಗುತ್ತದೆ. 42 ಕಿಲೋಮೀಟರ್‍ನ ಪೂರ್ಣ ಮ್ಯಾರಥಾನ್ ಈ ವರ್ಷದ ವಿಶೇಷ. 30 ಕಿಲೋಮೀಟರ್‍ನ ಓಟ ಬೆಳಗಿನ 5.45, 21 ಕಿಲೋಮೀಟರ್ ಅರ್ಧ ಮ್ಯಾರಥಾನ್ ಬೆಳಿಗ್ಗೆ 6ಕ್ಕೆ, 16 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ 10 ಕಿಲೋ ಮೀಟರ್ ಓಟ ಬೆಳಿಗ್ಗೆ 6.15ಕ್ಕೆ, 11 ವರ್ಷ ಮೇಲ್ಪಟ್ಟ ಓಟಗಾರರಿಗೆ ಕೋಟಕ್ 6 ಕಿಲೋ ಮೀಟರ್‍ನ ಓಟ/ನಡಿಗೆ ಬೆಳಿಗ್ಗೆ 6.40ಕ್ಕೆ ಆರಂಭವಾಗುತ್ತದೆ. ಪೂರ್ಣ ಮ್ಯಾರಥಾನ್, 30 ಕಿ.ಮೀ.ನ ಓಟ, 21 ಕಿ.ಮೀ.ನ ಅರ್ಧ ಮ್ಯಾರಥಾನ್, 10 ಕಿ.ಮೀ.ನ ಓಟಗಳು ಸ್ಪರ್ಧಾತ್ಮಕವಾಗಿದ್ದು, ಇದಕ್ಕೆ ರಾಷ್ಟ್ರಾದ್ಯಂತ ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ಸ್ಪರ್ಧೆಯಲ್ಲದ 6 ಕಿ.ಮೀ.ನ ಕೊಟಕ್ ಓಟ/ನಡಿಗೆಯಲ್ಲಿ ಮೈಸೂರಿನ ಹೆಚ್ಚಿನ ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆಯಿದೆ.

ಈ ವರ್ಷದ ಸೆಲೆಬ್ರೇಷನ್ ಮೈಸೂರು ಮ್ಯಾರಥಾನ್ ‘ಗ್ರೀನ್ ಮೈಸೂರು’ ಉದ್ದೇಶ ವನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಸಂಘಟಕರು ಆಯ್ದ ಸ್ಪರ್ಧಿಗಳಿಗೆ ಸಸಿ ಗಳನ್ನು ವಿತರಿಸುವರು. ಈ ಓಟವು ದೈಹಿಕ ಸಾಮಥ್ರ್ಯವನ್ನು ಹೆಚ್ಚಿಸುವುದರೊಂದಿಗೆ ಆರೋಗ್ಯವಂತ ಜೀವನದೆಡೆಗೆ ಸಾಗಲು ಸಹಾಯಕವಾಗಿರುತ್ತದೆ. ಮೈಸೂರಿನ ನಾಗ ರಿಕರು ಕೊಟಕ್ ಮಹೀಂದ್ರ ಬ್ಯಾಂಕಿನ ಶಾಖೆಗಳಲ್ಲಿ ಕೂಡ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಓಟದ ನಂತರ ಗಾಯಕ-ಸಂಗೀತ ನಿರ್ದೇಶಕ ಶ್ರೀ ವಾಸು ದೀಕ್ಷಿತ್ ಇವರಿಂದ ಗಾಯನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಈ ಮ್ಯಾರಥಾನ್ ಓಟಕ್ಕೆ ಮೈಸೂರು ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ನವರು ಸಹಕರಿಸುತ್ತಿದ್ದಾರೆ. 10 ಕಿ.ಮೀ. ಓಟ/ನಡಿಗೆಯ ಕಾರ್ಯಕ್ರಮವನ್ನು ಏರಿಸ್ ಗ್ಲೋಬಲ್‍ನವರು ನಡೆಸಿಕೊಡುತ್ತಿದ್ದಾರೆ ಮತ್ತು ಥಾಟ್ ಫೆÇೀಕಸ್ ಟೆಕ್ನಾಲಜೀಸ್ ನವರು ಇದಕ್ಕೆ ಸಹಪ್ರಾಯೋಜಕರಾಗಿ ದ್ದಾರೆ. 10ರಿಂದ 70 ವರ್ಷ ವಯೋ ಮಾನದ 4 ಸಾವಿರ ಜನರು ಭಾಗಿಯಾಗುವ ನಿರೀಕ್ಷೆ ಇದೆ ಎಂದು ಓಟದ ನಿರ್ದೇಶಕ ಪಿ.ವಿ.ಸುನಿಲ್ ತಿಳಿಸಿದ್ದಾರೆ.

ಈ ಕಾರ್ಯಕ್ರಮಕ್ಕೆ ಭಾಗಿದಾರರಾಗಿ ಸೈಕಲ್ ಪ್ಯೂರ್ ಅಗರ್‍ಬತ್ತಿ, ಲೆಟ್ ಅಸ್ ಡೂ ಇಟ್ ಮೈಸೂರು ಮತ್ತು ಆತಿಥ್ಯವನ್ನು ಕೋರಮ್ ಹೋಟೆಲ್ ಮತ್ತು ವೈದ್ಯಕೀಯ ಸಹಾಯವನ್ನು ಅಪೆÇೀಲೋ ಬಿಜಿಎಸ್ ಆಸ್ಪತ್ರೆಯವರು ವಹಿಸಿಕೊಂಡಿದ್ದಾರೆ. ಓಟದ ಭಾಗಿದಾರರಾಗಿ ಡೆಕಥ್ಲಾನ್ ಮತ್ತು ಆನ್ ಲೈನ್ ಭಾಗಿದಾರರಾಗಿ ಮಸ್ತ್ ಮೈಸೂರು ಡಾಟ್ ಕಾಮ್, ಯೋಗ ಭಾಗೀದಾರರಾಗಿ ಜಿಎಸ್‍ಎಸ್, ಅರ್ಹತಾ ಭಾಗೀದಾರರಾಗಿ ಮಲ್ಟಿಫಿಟ್, ರೇಡಿಯೋ ಖಇಆ ಈಒ, ಓಟದ ಭಾಗೀದಾರರಾಗಿ ಮೈಸೂರು ಸೈಕ್ಲಿಂಗ್ ಕ್ಲಬ್, ಮುದ್ರಣ ಮಾಧ್ಯಮದಲ್ಲಿ ‘ಸ್ಟಾರ್ ಆಫ್ ಮೈಸೂರ್’ ಮತ್ತು ‘ಮೈಸೂರು ಮಿತ್ರ’ ಭಾಗಿದಾರರಾಗಿರು ವರು. ಟಿಕೆಟಿಂಗ್‍ಗಾಗಿ Eventzalley. com, ಓಟದಲ್ಲಿ ಭಾಗಿಯಾಗಲು ಜಯ ನಗರ್ ಜಾಗ್ವಾರ್ಸ್, ಬರ್ನರ್ಸ್ ಮತ್ತು ಟ್ರಯಲ್ ಬ್ಲೇಜರ್ಸ್ ಸಂಪರ್ಕಿಸ ಬಹುದು. ಆಸಕ್ತರು ಹೆಚ್ಚಿನ ಮಾಹಿತಿಗೆ www.eventzalley.com, 9606622006 ಸಂಪರ್ಕಿಸಬಹುದು.