ವೀರಶೈವ ಅನಾಥಾಲಯದ ಶತಮಾನೋತ್ಸವ ಸಮಾರಂಭ

ಮೈಸೂರು,ಡಿ.23(ಪಿಎಂ)- ಕರಿಯಣ್ಣರ ಪುತ್ರಿ ವೀರಮ್ಮನವರು ವೀರಶೈವ ಸಮಾ ಜದ ಬಡ ವಿದ್ಯಾರ್ಥಿಗಳು ಊಟ-ವಸತಿ ಹಾಗೂ ಶಿಕ್ಷಣಕ್ಕಾಗಿ ಅಲೆದಾಡುತ್ತಿದ್ದ ಪರಿ ಸ್ಥಿತಿ ಮನಗಂಡು 20ನೇ ಶತಮಾನದಲ್ಲಿ ಸ್ಥಾಪಿಸಿದ ಮೈಸೂರಿನ ವೀರಶೈವ ಅನಾ ಥಾಲಯ ಇಂದು ಸಾವಿರಾರು ಮಂದಿಗೆ ವಿದ್ಯೆ ನೀಡಿ ಜೀವನ ರೂಪಿಸಿಕೊಳ್ಳಲು ನೆರವಾಗಿದೆ ಎಂದು ನಿವೃತ್ತ ಡಿಜಿಪಿ ಎಲ್.ರೇವಣಸಿದ್ದಯ್ಯ ಸ್ಮರಿಸಿದರು.

ಮೈಸೂರಿನ ರಾಮಾನುಜ ರಸ್ತೆಯ ರಾಜೇಂದ್ರ ಕಲಾಮಂದಿರದಲ್ಲಿ ವೀರಶೈವ ಅನಾಥಾಲಯ ಟ್ರಸ್ಟ್ ವತಿಯಿಂದ ಸುತ್ತೂರು ಮಠದ ಶ್ರೀಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅನಾಥಾ ಲಯದ ಶತಮಾನೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

1918ರಲ್ಲಿ ತಮ್ಮ ಚರ-ಸ್ಥಿರ ಆಸ್ತಿಯನ್ನು ದಾನವಾಗಿ ನೀಡಿ ವೀರಮ್ಮ ಅನಾಥಾ ಲಯ ಸ್ಥಾಪಿಸಿದರು. ಅವರ ಕೊಡುಗೆ ಯಿಂದ ಸಾವಿರಾರು ಮಂದಿ ವಿದ್ಯೆ ಪಡೆದು ಉನ್ನತ ಹುದ್ದೆಗಳನ್ನು ಅಲಂಕರಿ ಸಲು ಸಾಧ್ಯವಾಗಿದೆ. ವೀರಮ್ಮರ ನಂತರ ದಲ್ಲಿ ಗುರುಬಸಪ್ಪ ಅವರ ನೆರವು ಅನಾ ಥಾಲಯಕ್ಕೆ ದೊರೆತು ಮುನ್ನಡೆಯಲು ಸಾಧ್ಯವಾಯಿತು ಎಂದು ನುಡಿದರು.

ಶತಮಾನ ಎಂಬುದು ವ್ಯಕ್ತಿ ಜೀವನ ದಲ್ಲಾಗಲೀ ಇಲ್ಲವೇ ಸಂಸ್ಥೆ ಅವಧಿ ಯಲ್ಲಾಗಲೀ ಮಹತ್ವದ ಘಟ್ಟ. ಜಾಗತಿಕ ಮಹಾಯುದ್ಧಗಳು ಹಾಗೂ ಸ್ವಾತಂತ್ರ್ಯ ನಂತರ ದೇಶದಲ್ಲಿ ಉದ್ಭವಿಸಿದ ಆಹಾರ ಕೊರತೆಯ ನಡುವೆ ಸಾಧು-ಸಂತ ಪರಂ ಪರೆ ಹಾಗೂ ಮಠಮಾನ್ಯಗಳು ದಾಸೋ ಹದ ಮೂಲಕ ಹಸಿವು ನೀಗಿಸಿತು. ಇದೇ ಸಂದರ್ಭದಲ್ಲಿ ವೀರಮ್ಮನವರು ಅನಾಥಾ ಲಯ ಸ್ಥಾಪಿಸುವ ಮಹತ್ಕಾರ್ಯ ಮಾಡಿ ದರು. ಅದೇ ರೀತಿ ಸುತ್ತೂರು ಶ್ರೀಗಳು ಹಾಗೂ ಶ್ರೀ ಸಿದ್ದಗಂಗಾ ಶ್ರೀಗಳು ಅಕ್ಷರ ಹಾಗೂ ಅನ್ನ ದಾಸೋಹದ ಮೂಲಕ ನಿರಂತರವಾಗಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಬದುಕು ರೂಪಿಸಿದ್ದಾರೆ ಎಂದು ಹೇಳಿದರು.

ಧಾರ್ಮಿಕ ಸಂಸ್ಥೆಗಳಲ್ಲಿ ಸಿಗುವ ಪ್ರಸಾದ ವನ್ನು ಗೌರವ ಹಾಗೂ ಭಕ್ತಿಪೂರ್ವಕ ವಾಗಿ ಸ್ವೀಕರಿಸಿ ಶ್ರಮ ವಹಿಸಿದವರು ಇಂದು ಉನ್ನತ ಮಟ್ಟಕ್ಕೆ ಬೆಳೆದಿದ್ದಾರೆ. ಇದನ್ನು ಇಂದಿನ ವಿದ್ಯಾರ್ಥಿಗಳು ಮನದಲ್ಲಿಟ್ಟು ಕೊಂಡು ಮುನ್ನಡೆಯಬೇಕು.  ಬಹುತೇಕ ಮಂದಿ ಪದವಿ-ಸ್ನಾತಕೋತ್ತರ ಪದವಿ ಸೇರಿ ದಂತೆ ಯಾವುದೇ ಉನ್ನತ ಮಟ್ಟದ ಶಿಕ್ಷಣ ಪಡೆದರೂ ಕೌಶಲ್ಯ ಕೊರತೆ ಎದುರಿಸುತ್ತಿ ದ್ದಾರೆ. ಹೀಗಾಗಿ ಯಶಸ್ಸು ಇಂತವರಿಗೆ ಸಾಧ್ಯವಾಗುತ್ತಿಲ್ಲ ಎಂದು ವಿಷಾದಿಸಿದರು.

ಇದೇ ವೇಳೆ ಮಾಜಿ ಸಚಿವರೂ ಆದ ಶಾಸಕ ಎಸ್.ಎ.ರಾಮದಾಸ್ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಅಲ್ಲದೆ, ವೀರಶೈವ ಅನಾಥಾಲಯ ಟ್ರಸ್ಟ್ ಅಧ್ಯಕ್ಷ ಎಂ.ರಾಜಶೇಖರ್ ಅವರನ್ನು ಸನ್ಮಾನಿಸ ಲಾಯಿತು. ಕುದೇರು ಮಠದ ಶ್ರೀ ಗುರುಶಾಂತ ಸ್ವಾಮೀಜಿ ಉಪಸ್ಥಿತರಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ.ಬಿ.ವಿ.ವಸಂತಕುಮಾರ್, ಪಾಲಿಕೆ ವಿರೋಧ ಪಕ್ಷದ ನಾಯಕ ಬಿ.ವಿ.ಮಂಜು ನಾಥ್ ಮತ್ತಿತರರು ಹಾಜರಿದ್ದರು.