ಸೆಸ್ಕ್ ಹೊರಗುತ್ತಿಗೆ ಕಾರ್ಮಿಕರ ಪ್ರತಿಭಟನೆ

ಮೈಸೂರು, ಜು.25(ಪಿಎಂ)- ಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಗಳ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ವಿದ್ಯುತ್ ಕಾರ್ಮಿಕರ ಫೆಡರೇಷನ್ (ಸಿಐಟಿಯು) ಆಶ್ರಯದಲ್ಲಿ ಸೆಸ್ಕ್ ಹೊರ ಗುತ್ತಿಗೆ ಕಾರ್ಮಿಕರು ಗುರುವಾರ ಪ್ರತಿ ಭಟನೆ ನಡೆಸಿದರು.

ಮೈಸೂರಿನ ವಿಜಯನಗರದ ಚಾಮುಂ ಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ (ಸೆಸ್ಕ್) ಕಾರ್ಯಾಲಯದ ಎದುರು ಜಮಾಯಿಸಿದ ಪ್ರತಿಭಟನಾಕಾ ರರು, ಎಲ್ಲಾ ಗುತ್ತಿಗೆ ಕಾರ್ಮಿಕರನ್ನು ಖಾಯಂ ಮಾಡಬೇಕು. ಸುಪ್ರಿಂ ಕೋರ್ಟ್ ತೀರ್ಪಿ ನಂತೆ ಗುತ್ತಿಗೆ ಕಾರ್ಮಿಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಇದನ್ನು ಜಾರಿ ಗೊಳಿಸುವವರೆಗೆ ವಿವಿಧ ಹುದ್ದೆಗಳಲ್ಲಿರುವ ಗುತ್ತಿಗೆ ನೌಕರರಿಗೆ ಕನಿಷ್ಠ 18 ಸಾವಿರ ರೂ. ವೇತನ ನೀಡಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಖಾಯಂ ನೌಕರರು ಮಾಡುತ್ತಿರುವ ಕೆಲಸವನ್ನೇ ಮಾಡುತ್ತಿರುವ ಗುತ್ತಿಗೆ ನೌಕರ ರಿಗೆ ನೀಡುವ ವೇತನದಷ್ಟೇ ನಮಗೂ ವೇತನ ನಿಗದಿ ಮಾಡಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕೆಂದು ಗುತ್ತಿಗೆ ನಿಯಂತ್ರಣ ನಿಷೇಧ ಕಾಯ್ದೆ 1970 ನಿಯಮ 25ರಲ್ಲಿ ಉಲ್ಲೇಖಿಸಿದ್ದರೂ ತಾವು ಅದನ್ನು ಪಾಲನೆ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಎಲ್ಲಾ ಎಸ್ಕೊಂ ಸಂಸ್ಥೆ ಮತ್ತು ವಿದ್ಯುತ್ ಕೈಗಾರಿಕೆಗಳಲ್ಲಿ ನೇರ ನೇಮಕಾತಿ ಪ್ರಕ್ರಿಯೆ ನಿಲ್ಲಿಸಬೇಕು. ಅಲ್ಲದೆ, ಇಲ್ಲಿ ಖಾಲಿ ಇರುವ ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಕಾರ್ಮಿಕ ರಲ್ಲಿ ಅರ್ಹರನ್ನು ಆಯ್ಕೆ ಮಾಡಬೇಕು. ಇಎಸ್‍ಐ, ಪಿಎಫ್ ಸೌಲಭ್ಯ, ಬೋನಸ್ ಸೇರಿದಂತೆ ಎಲ್ಲಾ ಕಾನೂನುಬದ್ಧ ಸೌಲಭ್ಯ ಗಳನ್ನು ನೀಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕೆಲಸದ ವೇಳೆಯಲ್ಲಿ ಸೂಕ್ತ ಭದ್ರತೆ ಕಲ್ಪಿಸಬೇಕು. ಮಾಪನ ಓದುಗರಿಗೆ ಕನಿಷ್ಠ ವೇತನದ ಜೊತೆಗೆ ಪ್ರಯಾಣ ಭತ್ಯೆ ಮತ್ತು ದಿನ ಭತ್ಯೆ ನೀಡಬೇಕು. ಗುತ್ತಿಗೆಯಡಿ ಕೆಲಸ ಮಾಡುವ ಆಪರೇಟರ್ ಮತ್ತು ಹೆಲ್ಪರ್ ಗಳಿಗೆ ಖಾಲಿಯಿರುವ ವಸತಿ ಗೃಹಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.

ಇದಕ್ಕೂ ಮುನ್ನ ವಿಜಯನಗರದ ಐಶ್ವರ್ಯ ಪೆಟ್ರೋಲ್ ಬಂಕ್ ಬಳಿಯಿಂದ ವಿಜಯನಗರದ ಸೆಸ್ಕ್ ಕಾರ್ಯಾಲಯ ದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸ ಲಾಯಿತು. ಬಳಿಕ ಕೆಲಕಾಲ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿ ಅಂತ್ಯಗೊಳಿಸಲಾ ಯಿತು. ಕರ್ನಾಟಕ ರಾಜ್ಯ ವಿದ್ಯುತ್ ಕಾರ್ಮಿ ಕರ ಫೆಡರೇಷನ್‍ನ ಕೋಶಾಧಿಕಾರಿ ಹೆಚ್.ಸುರೇಶ್, ಸೆಸ್ಕ್ ಗುತ್ತಿಗೆ ಕಾರ್ಮಿಕ ಮುಖಂಡರಾದ ಉಮಾಶಂಕರ್, ಮನೋಹರ್ ಸೇರಿದಂತೆ ಹಲವು ಮಂದಿ ಗುತ್ತಿಗೆ ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.