ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರಿಗೆ  ಭಗವಾನ್ ಮಹಾವೀರ ಶಾಂತಿ ಪ್ರಶಸ್ತಿ ಪ್ರದಾನ

ಶ್ರವಣಬೆಳಗೊಳ: ಯಾವುದೇ ವಿವಾದಗಳಿಗೆ ಒಳಗಾಗದೇ ಸುಮಾರು 48 ವರ್ಷಗಳ ಕಾಲ ಸಮಾಜಕ್ಕೆ ಹಲ ವಾರು ಕೊಡುಗೆಗಳನ್ನು ಸ್ವಸ್ತಿಶ್ರೀ ಚಾರು ಕೀರ್ತಿ ಭಟ್ಟಾರಕ ಸ್ವಾಮೀಜಿಯವರು ನೀಡಿ ದ್ದಾರೆ. ಅಹಿಂಸೆ, ತ್ಯಾಗ ಹಾಗೂ ಶಾಂತಿ ಯಿಂದ ಜೈನ ಪರಂಪರೆಯನ್ನು ಬೆಳಗಿದ ಇವರಿಗೆ ಪ್ರಶಸ್ತಿ ದೊರೆತಿರುವುದು ನಮ್ಮ ಹೆಮ್ಮೆ ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದರು.

ಶ್ರವಣಬೆಳಗೊಳದ ಚಾವುಂಡರಾಯ ಸಭಾಮಂಟಪದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಶಾಸಕ ಸಿ.ಎನ್. ಬಾಲಕೃಷ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ “ಶ್ರೀ ಭಗವಾನ್ ಮಹಾವೀರ ಶಾಂತಿ ಪ್ರಶಸ್ತಿ” ಪ್ರಧಾನ ಸಮಾರಂಭ ವನ್ನು ಉದ್ಘಾಟಿಸಿ ಮಾತನಾಡಿ, ಯಾವುದೇ ಆಸೆ ಆಕಾಂಕ್ಷೆಗಳಿಲ್ಲದೆ ಜೈನ ಧಾರ್ಮಿಕ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ತಮ್ಮ ಬದು ಕನ್ನು ಸಮರ್ಪಿಸಿದ್ದಾರೆ ಎಂದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಚಿವೆ ಡಾ.ಜಯಮಾಲ ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿ, ತಮ್ಮ ಬದುಕಿನಲ್ಲಿ ಸರ್ವವನ್ನೂ ತ್ಯಾಗ ಮಾಡಿದ ಶ್ರೀ ಭಗ ವಾನ್ ಬಾಹುಬಲಿ ಸ್ವಾಮಿಯ ಸನ್ನಿಧಿಯಲ್ಲಿ ಶ್ರೀ ಮಹಾವೀರ ಶಾಂತಿ ಪ್ರಶಸ್ತಿಯನ್ನು ಸ್ವಾಮೀಜಿಯವರಿಗೆ ನೀಡುತ್ತಿರುವುದು ನಮ್ಮ ಪುಣ್ಯ, ಅವರ ಆದರ್ಶ, ತ್ಯಾಗ, ಭಕ್ತಿ ಹಾಗೂ ಜ್ಞಾನವನ್ನು ಸಮಾಜಕ್ಕೆ ನೀಡಿ ದ್ದಾರೆ. ಅನೇಕ ದೇವಾಲಯಗಳನ್ನು ಜೀರ್ಣೋದ್ದಾರ ಮಾಡಿದ್ದಾರೆ ಎಂದರು.
81 ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಸಂದರ್ಭದಲ್ಲಿ ಕ್ಷೇತ್ರಕ್ಕೆ ಆಗಮಿಸಿದ ಕನ್ನಡಾಭಿಮಾನಿಗಳಿಗೆ ಅನ್ನ ದಾಸೋಹ ಮಾಡಿದ್ದಾರೆ, ಹಲವಾರು ಕ್ಷೇತ್ರಗಳಲ್ಲಿ ಇರುವಂತೆ ಆಧುನಿಕ ತಂತ್ರಜಾನ ಬಳಸಿ ರೋಪ್ ವೇ ಅನ್ನು ನಿರ್ಮಿಸಿದಲ್ಲಿ ಶ್ರವಣ ಬೆಳಗೊಳಕ್ಕೆ ಆಗಮಿಸುವ ಲಕ್ಷಾಂತರ ಭಕ್ತರಿಗೆ ಉಪಯೋಗವಾಗಲಿದ್ದು ಕ್ಷೇತ್ರವು ಪ್ರಪಂಚದಲ್ಲೇ ಉನ್ನತ ಸ್ಥಾನಕ್ಕೆ ತಲುಪ ಲಿದೆ ಎಂದು ಸಚಿವರಾದ ರೇವಣ್ಣ ಅವರಿಗೆ ಸಲಹೆ ನೀಡಿದರು.

ನಂತರ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಪ್ರಶಸ್ತಿ ಸ್ವೀಕರಿಸಿ ಮಾತ ನಾಡಿ, ಜಗತ್ತಿಗೆ ಶಾಂತಿಯ ಸಂದೇಶವನ್ನು ಸಾರಿದ ಭಗವಾನ್ ಮಹಾವೀರರ ಹೆಸರಿ ನಲ್ಲಿರುವ ಪ್ರಶಸ್ತಿ ಪಡೆಯುತ್ತಿರುವುದು ಸಂತೋಷವಾಗಿದೆ, ಮನುಷ್ಯ ಮನಸ್ಸಿನಲ್ಲಿ ಇರುವ ಕ್ರೋಧ, ಮೋಹ ಹಾಗೂ ಲೋಭಗಳನ್ನು ಹೋಗಲಾಡಿಸಬೇಕು, ಈ ನಿಟ್ಟಿನಲ್ಲಿ ಶಾಂತಿಗಾಗಿ ಬಹಳಷ್ಟು ಕೆಲಸ ಗಳನ್ನು ಮಾಡಬೇಕು ಎಂದರು.

ಕುಟುಂಬದಲ್ಲಿ ಇರುವ ಅಸಮಾ ಧಾನದ ಮನಸ್ಸುಗಳನ್ನು ಹೋಗಲಾಡಿಸಿ ಎಲ್ಲಾ ಮನಸ್ಸುಗಳು ಒಟ್ಟಗೂಡಬೇಕು, ಪ್ರತಿ ಯೊಬ್ಬರನ್ನು ಪ್ರೀತಿ ವಿಶ್ವಾಸದಿಂದ ಕಾಣ ಬೇಕು ಹಾಗೂ ಅಹಂಕಾರವನ್ನು ತ್ಯಜಿಸಿ, ಇನ್ನೊಬ್ಬರ ಪ್ರಗತಿಯನ್ನು ಗೌರವಿಸಿದಲ್ಲಿ ಮಾತ್ರ ಶಾಂತಿ ನೆಲೆಸಲು ಸಾಧ್ಯ, ನಾವೆ ಲ್ಲರೂ ಒಗ್ಗಟ್ಟಾಗಿ ರಾಜ್ಯ, ದೇಶ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಾಂತಿ ನೆಲೆಸುವಂತೆ ನಡೆದುಕೊಳ್ಳಬೇಕು. ಭಾರತ ದೇಶ ಪ್ರಪಂಚಕ್ಕೆ ವಿಶ್ವ ಗುರುವಿನ ಸ್ಥಾನ ದಲ್ಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಎ ಗೋಪಾಲಸ್ವಾಮಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಪ್ರಧಾನ ಕಾರ್ಯ ದರ್ಶಿ ಡಾ.ಬಿ.ಬಸವರಾಜ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ನಿರ್ದೇಶಕ ಎನ್.ಆರ್. ವಿಶುಕುಮಾರ್, ಜಿಪಂ ಅಧ್ಯಕ್ಷೆ ಶ್ವೇತಾದೇವ ರಾಜ್, ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ರಮೇಶ್, ತಾಪಂ ಸದಸ್ಯೆ ಮಹಾಲಕ್ಷ್ಮೀ ಶಿವ ರಾಜ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೇಮಾ ಪ್ರಭಾಕರ್ ಹಾಗೂ ಇತರರಿದ್ದರು.